Upanyasa - VNU339

MV139 ಬಂಡೆಯನ್ನು ಎತ್ತಿಟ್ಟ ಪ್ರಸಂಗ

03/10/2016

 ಆಚಾರ್ಯರು ತೇಜೋಮೂರ್ತಿಗಳು

ರಾತ್ರಿಯ ವೇಳೆ ಪಾಠ ನಡೆಯುವ ಸಂದರ್ಭದಲ್ಲಿ ದೀಪ ಆರಿಹೋದಾಗ ಆಚಾರ್ಯರು ತಮ್ಮ ಕಾಲಿನ ಹೆಬ್ಬೆರಳಿನಿಂದ ಬೆಳಕನ್ನು ಸೂಸಿ ಶಿಷ್ಯರನ್ನು ಅನುಗ್ರಹಿಸಿದ ಘಟನೆಯ ವಿವರ ಇಲ್ಲಿದೆ. ಆಛಾರ್ಯರ ಶ್ರೇಷ್ಠ ಕಾರುಣ್ಯದ ಚಿಂತನೆಯೊಂದಿಗೆ. 

ಆಚಾರ್ಯರ ಅಪ್ರತಿಮ ದೇಹಬಲ

ಕಳಸದ ಭದ್ರಾನದಿಗೆ ಅಡ್ಡಲಾಗಿ ಒಂದು ಹಿರಿದಾದ ಬಂಡೆಗಲ್ಲನ್ನು ಒಂದೇ ಕೈಯಿಂದ ತಂದಿರಿಸಿದ ಘಟನೆಯ, ಆಚಾರ್ಯರ ಅದ್ಭುತದೇಹಸಾಮರ್ಥ್ಯವನ್ನು ಪರಿಚಯಿಸುವ ಪ್ರಸಂಗದ ವಿವರ ಇಲ್ಲಿದೆ. 

Play Time: 12:53

Size: 2.36 MB


Download Upanyasa Share to facebook View Comments
3104 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  9:56 AM , 02/02/2018

  ಗುರುಗಳೆ
  
  ನನ್ನಲ್ಲಿ ಶಾಸ್ತ್ರಾಧ್ಯಯನ ಮಾಡಲೇಬೇಕೆಂಬ ಆಸೆಯನ್ನು ಮೊಳಕೆಯೊಡೆಸಿದವರು ತಾವು..
  ಶ್ರೀಮಧ್ವಶಾಸ್ತ್ರದ ಉಪನ್ಯಾಸಗಳ ಮೂಲಕ🙏
  
  ಆ ಆಸೆಯನ್ನು ಪೂಣ೯ವಾಗಿಸಿಕೊಳ್ಳಲು ಶ್ರಮಿಸುತ್ತಿರುವವರೂ ತಾವೆ....
  
  ತಮ್ಮ ಬಳಿಗೆ ಬರುವ ಬಲಿತ ಗಿಳಿಯನ್ನೇ, ಪಂಜರವಿಲ್ಲದೆ ಸಾಧನಾಮಾಗ೯ದಲ್ಲಿರಿಸಿ ಪಳಗಿಸುವ ಮಹಾಸಾಮಥ್ಯ೯ದ ಗುರುಗಳು ನನಗೆ ದೊರೆತಿರುವಾಗ, ನನಗೇನೂ ಗೊಂದಲ ಉಳಿಯಲಿಲ್ಲ ಗುರುಗಳೆ..
  
  ತಾವು ತಿಳಿಸಿದ್ದನ್ನು ಶ್ರಧ್ದೆಯಿಂದ ಪಾಲನೆ ಮಾಡುವುದೆ ನನ್ನ ಮುಂದಿರುವ ಈಗಿನ ಬಹು ದೊಡ್ಡದಾದ ಸಾಧನೆ🙏🙏
 • Jayashree Karunakar,Bangalore

  10:10 PM, 01/02/2018

  ಗುರುಗಳೆ
  
  ಮಧ್ವವಿಜಯ ಕೇಳುತ್ತಿದ್ದೆ....
  ಶಾಸ್ತ್ರಾಧ್ಯಯನ ಮಾಡಬೇಕೆಂಬ ತವಕ ಹೆಚ್ಚಾಯಿತು....
  
  ನಮ್ಮ ಗುರುಗಳು ಯಾವಾಗ ಸ್ವಧ್ಯಾಯ ಸುರಭಿ ಪ್ರಾರಂಭ ಮಾಡುತ್ತಾರೊ ಅಂತ ತವಕಿಸಿತು ಮನ....
  
   ಆದರೆ ಪ್ರಾರಂಭ ಮಾಡಿದರೆ ಓದಲಿಕ್ಕೆ ಸಂಸ್ಕೃತ ಬರಲ್ಲ... 
  
  ಯಾವಾಗ ಸಂಸ್ಕೃತ ಸುರಭಿ ಪ್ರಾರಂಭಿಸುತ್ತಾರೊ ಅಂತ ಮತ್ತೆ ತವಕ....
  
  ಪ್ರಾರಂಭ ಮಾಡಿದರೆ ಭಗವಂತನ ಕರುಣೆ ಬೇಕಲ್ಲ ಅಥ೯ಮಾಡಿಕೊಳ್ಳಲಿಕ್ಕೆ....
  
  ಆ ಕಾರುಣ್ಯವನ್ನು ನಾವು ಪಡೆಯುವ ಸಲುವಾಗಿಯೆ ಶ್ರೀಮದ್ಭಾಗವತದ ಮಹಾ ಶ್ರವಣಯಜ್ಞ ನಡೆಸುತ್ತಿದ್ದಾರೆ ನಮ್ಮ ಗುರುಗಳು ಅಂತ ಅಥ೯ವಾಯಿತು....
  
  ಎಲ್ಲವನ್ನೂ ಸರಿಯಾದ ಕ್ರಮದಲ್ಲಿ ಸರಿಯಾದ ಕಾಲಕ್ಕೆ ತಿಳಿಯುವವರಿದ್ದೇವೆ ಅಂತ ತಿಳಿಯಿತು ನಮ್ಮ ಗುರುಗಳ ಚಯೆ೯ಯಿಂದಲೇ....🙏🙏

  Vishnudasa Nagendracharya

  ತುಂಬ ಚನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. 
  
  ದೇವರ ಕಾರುಣ್ಯವನ್ನು ಸಂಪಾದಿಸದೇ ಅಧ್ಯಾತ್ಮಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. 
  
  ನನಗೆ, Fast food ನೀಡುವ ಬಯಕೆ ಇಲ್ಲ. ಶತಮಾನಗಳವರೆಗೆ ಉಳಿಯುವಂತಹ ವಿದ್ಯಾಕೇಂದ್ರವನ್ನಾಗಿ ವಿಶ್ವನಂದನಿಯನ್ನು ಮಾಡುವ ಅಪೇಕ್ಷೆಯಿದೆ. 
  
  ಅದಕ್ಕಾಗಿ ಶಾಸ್ತ್ರೀಯವಾದ ಕ್ರಮದಲ್ಲಿಯೇ ಮುಂದುವರೆಯುತ್ತಿದ್ದೇನೆ. 
  
  ಮತ್ತು ವಿಶ್ವನಂದಿನಿ ಎನ್ನುವ ವಿಶ್ವಕೋಶದ ನಿರ್ಮಾಣದ ಕಾರ್ಯ ಈಗ ನಡೆಯುತ್ತಿದೆ. ನಿರ್ಮಾಣ ಎಂದರೇ ನಿಧಾನವಾಗಿ ಸಾಗುವ ಕಾರ್ಯ. 
  
  ಎಲ್ಲ ವಿಶ್ವನಂದಿನಿಯ ಬಾಂಧವರಿಗೂ ಹೇಳುವದಿಷ್ಟೆ. ನಿಧಾನವಾಗಿ ನೀಡಿದ ಎಲ್ಲವನ್ನೂ ಮತ್ತೆಮತ್ತೆ ಕೇಳುತ್ತಿರಿ. ಇದು ಮುಗಿಯುವ ವೇಳೆಗೆ ಹತ್ತುಸಾವಿರ ಗಂಟೆಗಳ ಉಪನ್ಯಾಸವಾಗಿರುತ್ತವೆ. ಯಾವುದು ಕೇಳಬೇಕು ಯಾವುದು ನಂತರ ಕೇಳಬೇಕು ಎನ್ನುವ ಗೊಂದಲಕ್ಕೆ ಬೀಳುತ್ತೀರಿ. ಹೀಗಾಗಿ ಮತ್ತೆಮತ್ತೆ ಕೇಳಿ ಜ್ಞಾನವೃದ್ಧಿಯನ್ನು ಮಾಡಿಕೊಳ್ಳಿ. 
  
  ಸಂಸ್ಕೃತಸುರಭಿ, ಸ್ವಾಧ್ಯಾಯಸುರಭಿ (ಇನ್ನೂ ಕೆಲವಿವೆ, ಮೊದಲೇ ಹೇಳಿ ತಪ್ಪು ಮಾಡಬಾರದು ಎಂದು ಪಾಠ ಕಲಿತಿದ್ದೇನೆ, ಹೀಗಾಗಿ ಹೇಳುವದಿಲ್ಲ) ಎಲ್ಲವನ್ನೂ ನೀಡುತ್ತ ಹೋಗುತ್ತೇನೆ.