Upanyasa - VNU340

MV140 ಆಚಾರ್ಯರ ಸಮುದ್ರನಿಯಾಮಕತ್ವ

03/10/2016

ಸಮುದ್ರತೀರದಲ್ಲಿ ಆಚಾರ್ಯರು

ಒಂದು ಸೂರ್ಯಗ್ರಹಣದ ಸಂದರ್ಭದಲ್ಲಿ ಆಚಾರ್ಯರು ಸ್ನಾನಕ್ಕಾಗಿ ಕಣ್ವತೀರ್ಥದ ಬಳಿಯ ಸಮುದ್ರಕ್ಕೆ ಬರುತ್ತಾರೆ. ಭಗವತ್‌ಸ್ತೋತ್ರಗಳನ್ನು ಹೇಳುತ್ತ ಅಚಾರ್ಯರು, ಆಚಾರ್ಯರ ಶಿಷ್ಯರು ದಾರಿಗೆ ಅಲಂಕಾರದಂತೆ ನಡೆದು ಬರುತ್ತಿದ್ದ ರೀತಿ, ದೂರದೂರದೂರಿನಿಂದ ಬಂದ ಸಜ್ಜನರು ಆಚಾರ್ಯರನ್ನು ಕಂಡು ಆನಂದಿಸಿದ ರೀತಿ, ದುರ್ಜನರು ಅದರಿಂದ ದುಃಖಿತರಾದದ್ದು, ಸಮುದ್ರರಾಜ ಜಗದ್ಗುರುವಿಗೆ ಸಲ್ಲಿಸಿದ ಗೌರವ ಈ ಎಲ್ಲವನ್ನು ಈ ಭಾಗದಲ್ಲಿ ಕೇಳುತ್ತೇವೆ. 

ಸಮುದ್ರವನ್ನು ಮೀರಿದ ವ್ಯಕ್ತಿತ್ವ ಆಚಾರ್ಯರದು

ಎದುರಿಗೆ ಸಮುದ್ರವನ್ನು ಕಾಣುತ್ತ, ಪಕ್ಕದಲ್ಲಿ ಆಚಾರ್ಯರನ್ನು ಕಾಣುತ್ತ ಮಧ್ವಶಿಷ್ಯರು ಮಾಡಿದ ಆಚಾರ್ಯರ ಪರಮಾದ್ಭುತಗುಣಗಳ ಚಿಂತನೆಯ ವಿವರಣೆ ಇಲ್ಲಿದೆ.

ಆಚಾರ್ಯರ ಧ್ವನಿಯ ಮಾಹಾತ್ಮ್ಯ

ಸೂರ್ಯಗ್ರಹಣದ ಪರ್ವಕಾಲದಲ್ಲಿ, ಭೋರ್ಗರೆವ ಸಮುದ್ರದ ಎದುರಿನಲ್ಲಿ, ಶಿಷ್ಯರ ಮಧ್ಯದಲ್ಲಿ ಕುಳಿತು ಆಚಾರ್ಯರು ಋಗ್ವೇದದ ಸೂಕ್ತಗಳ ಅರ್ಥವನ್ನು ಹೇಳಲು ಆರಂಭಿಸುತ್ತಾರೆ. ಆಚಾರ್ಯರ ಧ್ವನಿ ಸಮುದ್ರದ ಧ್ವನಿಯನ್ನು ಮೀರಿಸಿಯೂ ಕೇಳುಗರ ಕಿವಿಗೆ ಅಷ್ಟೇ ಇಂಪಾಗಿ ಕೇಳುತ್ತಿತ್ತು ಎಂಬ ಆಚಾರ್ಯರ ಧ್ವನಿಯೂ ಅದ್ಭುತ ಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. ನಮ್ಮ ಆಚಾರ್ಯರಿಗೆ ಸಂಬಂಧಿಸಿದ ಸಕಲವೂ ಅದ್ಭುತ ಎಂದು ಮತ್ತೊಮ್ಮೆ ಮನವರಿಕೆ ಮಾಡಿಕೊಳ್ಳುತ್ತೇವೆ. ಸಮುದ್ರಸ್ನಾನಕ್ಕಾಗಿ ಬಂದಿದ್ದ ಜನರು ಆಚಾರ್ಯರ ಪರಿಶುದ್ಧವಾದ ವೇದವ್ಯಾಖ್ಯಾನವನ್ನು ಕೇಳಿ ವಿಸ್ಮಿತರಾದ ಘಟನೆಯನ್ನೂ ಇಲ್ಲಿ ಕೇಳುತ್ತೇವೆ.


ಆಚಾರ್ಯರ ಸರ್ವನಿಯಾಮಕತ್ವ

ಕೇವಲ ಕಣ್ಣೋಟದಿಂದ ಭೋರ್ಗರೆವ ಸಮುದ್ರವನ್ನು ಒಂದು ಸರೋವರದಂತೆ ಮಾಡಿ, ಬಂದ ಸಜ್ಜನರಿಗೆ ಸುಲಭವಾಗಿ ಸಮುದ್ರಸ್ನಾನವನ್ನು ಮಾಡಲು ಅನುಕೂಲ ಮಾಡಿಕೊಟ್ಟ, ಆಚಾರ್ಯರ ಸರ್ವನಿಯಾಮಕತ್ವವನ್ನು ಸಾರುವ ಘಟನೆಯನ್ನು ವಿವರಿಸುವ ಭಾಗವಿದು.

Play Time: 48:10

Size: 8.45 MB


Download Upanyasa Share to facebook View Comments
2173 Views

Comments

(You can only view comments here. If you want to write a comment please download the app.)
  • Nv.padmanabha,Bangalore

    5:48 PM , 10/12/2017

    Some of slokas are not displying kindly check

    Vishnudasa Nagendracharya

    Can you please specify one or two?