Upanyasa - VNU341

MV141 ಆಚಾರ್ಯರ ಯೋಗಶಕ್ತಿ

03/10/2016

ಆಚಾರ್ಯರ ಅಪ್ರಧೃಷ್ಯತೆ ಮತ್ತು ಗರಿಮಾಸಿದ್ಧಿ

ಗಂಡವಾಟ ಎಂಬ ಹೆಸರಿನ ಜಟ್ಟಿ, ಹಾಗೂ ಅವನ ಅಣ್ಣ, ಭಾರೀ ಬಲಿಷ್ಠರು, ಇಬ್ಬರೂ ಆಚಾರ್ಯರ ದೇಹಬಲವನ್ನು ಪರೀಕ್ಷಿಸಲು ಬಂದು ಆಚಾರ್ಯರ ಕತ್ತನ್ನು ಹಿಸುಕಲು ಮಹಾ ಪ್ರಯತ್ನ ಮಾಡುತ್ತಾರೆ. ಸಾಧ್ಯವಾಗದೇ ಆಚಾರ್ಯರು ನೆಲದ ಮೇಲಿಟ್ಟ ಒಂದು ಬೆರಳನ್ನು ಅಲುಗಾಡಿಸಲಾದರೂ ಪ್ರಯತ್ನಿಸುತ್ತಾರೆ. ಅದು ಸಹ ಸಾಧ್ಯವಾಗದೆ ಹಿಂತಿರುಗುತ್ತಾರೆ ಎಂಬ ವಿಸ್ಮಯಾವಹ ಘಟನೆಯ ಚಿತ್ರಣ ಇಲ್ಲಿದೆ.

 ಆಚಾರ್ಯರ ಗರಿಮಾ ಸಿದ್ಧಿ

ಇಂಥ ಅದ್ಭುತ ಬಲದ ಆಚಾರ್ಯರು ಒಬ್ಬ ಸಣ್ಣ ವಟುವಿನ ಹೆಗಲೇರಿ ನರಸಿಂಹದೇಗುಲಕ್ಕೆ ಪ್ರದಕ್ಷಿಣೆ ಬಂದು ತಮ್ಮ ಯೋಗಶಕ್ತಿಯನ್ನು ಪ್ರದರ್ಶಿಸಿದ ಘಟನೆಯ ಚಿತ್ರಣ ಈ ಭಾಗದಲ್ಲಿ.

 ಆಚಾರ್ಯರು ಸರ್ವದಾ ಶಕ್ತಿಸಂಪನ್ನರು

ಪೂರ್ವವಾಟ ಎಂಬ ಮತ್ತೊಬ್ಬ ಮಹಾಮಲ್ಲ ಬಂದು ಆಚಾರ್ಯರನ್ನು ಪರೀಕ್ಷಿಸಿ ಸೋತು ಹೋದ ಘಟನೆ, ಆಚಾರ್ಯರ ದೇಹದ ಕೂದಲನ್ನು ಕೀಳಲಿಕ್ಕಾಗದೇ ಹೋದ ಘಟನೆ, ಮುಷ್ಟಿ ಮಾಡಿ ಮೂಗಿಗೆ ಹೊಡೆದರೂ, ಆಚಾರ್ಯರ ಮುಖದ ಪ್ರಸನ್ನತೆ ಬಾಡದ ಘಟನೆ ಇವೆಲ್ಲವನ್ನೂ ತಿಳಿಸಿ ಆಚಾರ್ಯರು ಸರ್ವಕಾಲದಲ್ಲಿಯೂ ಸರ್ವಶಕ್ತಿಸಂಪನ್ನರು ಎಂಬ ತತ್ವವನ್ನು ಪಂಡಿತಾಚಾರ್ಯರು ತುಂಬ ರೋಚಕವಾಗಿ ಪ್ರತಿಪಾದಿಸುತ್ತಾರೆ. ಆ ಮಾತುಗಳ ಅನುವಾದದೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ. 

Play Time: 32:19

Size: 5.71 MB


Download Upanyasa Share to facebook View Comments
3405 Views

Comments

(You can only view comments here. If you want to write a comment please download the app.)
  • Nv.padmanabha,Bangalore

    6:30 PM , 10/12/2017

    After downloading recordings is not opening place check