03/10/2016
ಆಚಾರ್ಯರ ಭಕ್ತವಾತ್ಸಲ್ಯ ಆಚಾರ್ಯರು ಭಕ್ತರಲ್ಲಿನ ಶ್ರೀಮಂತಿಕೆ ಅಧಿಕಾರ ಇತ್ಯಾದಿಗಳನ್ನು ನೋಡಿ ಅನುಗ್ರಹಿಸುವವರಲ್ಲ. ನಮ್ಮಲ್ಲಿನ ವೈಷ್ಣವತ್ವವವನ್ನು, ಭಕ್ತಿಯನ್ನು ಮಾತ್ರ ಕಂಡು ಕರುಣಿಸುವ ಕರುಣಾಳುಗಳು ಎಂಬ ಮಹೋನ್ನತ ಪ್ರಮೇಯಕ್ಕೆ ಸಾಕ್ಷಿಯಾದ ಎರಡು ಘಟನೆಗಳು, ಮಧ್ವವಿಜಯದ ಕಟ್ಟಕಡೆಯಲ್ಲಿ ಪಂಡಿತಾಚಾರ್ಯರು ನಮಗೆ ತಿಳಿಸುವ ಘಟನೆಗಳು. ಬಡವನಾದೊಬ್ಬ ಭಕ್ತ, ಶ್ರೀಮಂತನಾದೊಬ್ಬ ಭಕ್ತ ಇವರಿಬ್ಬರನ್ನೂ ಆಚಾರ್ಯರು ಅನುಗ್ರಹಿಸಿದ್ದನ್ನು ತಿಳಿಸುವ ಈ ಕಥೆಗಳ ಮುಖಾಂತರ ಪಂಡಿತಾಚಾರ್ಯರು ನಮಗೆ ತಿಳಿಹೇಳುತ್ತಿರುವ ತತ್ವವನ್ನು, ನಮ್ಮ ಜೀವನದಲ್ಲಿ ನಾವು ರೂಢಿಸಿಕೊಳ್ಳಬೇಕಾದ ಗುಣಗಳನ್ನು ಇಲ್ಲಿ ಮನಮುಟ್ಟುವಂತೆ ನಿರೂಪಿಸಲಾಗಿದೆ. ಮಧ್ವಚರಿತ್ರೆಯ ಅಗಾಧತೆ ಶ್ರೀಮದಾಚಾರ್ಯರ ಮಾಹಾತ್ಮ್ಯಕ್ಕೆ ಅಂತ್ಯವಿಲ್ಲ, ಮಧ್ವಚರಿತ್ರೆಗೆ ಕೊನೆಯಿಲ್ಲ. ಹಾಗೂ ಸಮುದ್ರವನ್ನು ನಿಯಮಿಸಿದ್ದು, ಮಳೆಯನ್ನು ತರಿಸಿದ್ದು, ಗುಡ್ಡದಂತಹ ಬಂಡೆಕಲ್ಲನ್ನು ಎತ್ತಿಟ್ಟಿದ್ದುಘಿ ಮುಂತಾದ ಘಟನೆಗಳು ಹದಿನಾಲ್ಕುಲೋಕಗಳ ಸೃಷ್ಟಿಸ್ಥಿತಿಸಂಹಾರಗಳನ್ನು ಮಾಡುವ, ಅನಂತಜೀವನಿಯಾಮಕರಾದ, ಸಮಗ್ರ ಬ್ರಹ್ಮಾಂಡವನ್ನು ಹೊತ್ತು ನಿಂತ ಆಚಾರ್ಯರ ದೃಷ್ಟಿಯಲ್ಲಿ ಮಹಾಮಹಾತ್ಮ್ಯವೂ ಅಲ್ಲ, ಕೇವಲ ನನ್ನ ಉದ್ಧಾರಕ್ಕಾಗಿ ನಾನು ಮಧ್ವಕಥೆಯನ್ನು ಹೇಳಿದ್ದೇನೆ ಎಂಬ ಶ್ರೀನಾರಾಯಣಪಂಡಿತಾಚಾರ್ಯರ ವಿನಯಪೂರ್ಣವಾದ ವಸ್ತುಸ್ಥಿತಿಯ ಮಾತನ್ನು ನಾವಿಲ್ಲಿ ಕೇಳುತ್ತೇವೆ.
Play Time: 16:28
Size: 2.98 MB