03/10/2016
ದೇವತಾಸಭೆಯಲ್ಲಿ ಮಧ್ವವರ್ಣನೆ ಆಚಾರ್ಯರ ಮಾಹಾತ್ಮ್ಯಗಳನ್ನು ವರ್ಣಿಸುವ ಹಾಡುಗಬ್ಬಗಳನ್ನು ಕಟ್ಟಿ ಅದ್ಭುತವಾದ ಕ್ರಮದಲ್ಲಿ ಗಂಧರ್ವರು ದೇವತೆಗಳ ಸಭೆಗಳಲ್ಲಿ ಮಧ್ವಮಾಹಾತ್ಮ್ಯದ ವರ್ಣನೆಯನ್ನು ಮಾಡುತ್ತಾರೆ ಎಂಬ ಮಾತನ್ನು ಪಂಡಿತಾಚಾರ್ಯರು ತುಂಬ ಸೊಗಸಾದ ನಿರೂಪಿಸಿದ್ದಾರೆ. ದೇವತೆಗಳು ಅದೆಷ್ಟು ಭಕ್ತಿಯಿಂದ ಮಧ್ವಮಹಿಮೆಯನ್ನು ಆಲಿಸುತ್ತಾರೆ ಎನ್ನುವದನ್ನು ತಿಳಿಸುವ ಮೂಲಕ ನಾವು ಅದೆಷ್ಟು ಭಕ್ತಿಯಿಂದ ಮಧ್ವವಿಜಯವನ್ನು ಕೇಳಬೇಕು ಎನ್ನುವದನ್ನು ಪಂಡಿತಾಚಾರ್ಯರು ನಮಗಿಲ್ಲಿ ಕಲಿಸುತ್ತಾರೆ. ಶ್ರೀ ನಾರಾಯಣಪಂಡಿತಾಚಾರ್ಯರಿಗೆ ನಮನ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರನ್ನು ನಮ್ಮ ಮನೋಮಂದಿರದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುವ, ಮಧ್ವಶಾಸ್ತ್ರವನ್ನು ಅಧ್ಯಯನ ಮಾಡುವ ಯೋಗ್ಯತೆಯನ್ನು ನಮಗೆ ತಂದೀಯುವ ಮಧ್ವವಿಜಯವನ್ನು ಕಾರುಣ್ಯದಿಂದ ರಚನೆ ಮಾಡಿ ನೀಡಿದ ಶ್ರೀ ನಾರಾಯಣಪಂಡಿತಾಚಾರ್ಯರಿಗೆ ಭಕ್ತಿಪೂರ್ವಕಪ್ರಣಾಮಗಳನ್ನು ನಿವೇದನೆ ಮಾಡಿಕೊಂಡಿರುವ ಭಾಗವಿದು. ಆಚಾರ್ಯರ ಮೇಲೆ ದೇವತೆಗಳು ಮಾಡಿದ ಪುಷ್ಪವೃಷ್ಟಿ ಶ್ರೀಮದಾಚಾರ್ಯರು ಐತರೇಯೋಪನಿಷತ್ತಿನ ಅರ್ಥವನ್ನು ತಿಳಿಸಿ ಹೇಳುವ ಸಂದರ್ಭದಲ್ಲಿ ಎಲ್ಲ ದೇವತೆಗಳು ಆಕಾಶದಲ್ಲಿ ನೆರೆನಿಂತು ಆಚಾರ್ಯರ ಸ್ತೋತ್ರ ಮಾಡಿ ಮನುಷ್ಯರ ಕಣ್ಣಿಗೆ ಕಾಣುವಂತೆ ಆಚಾರ್ಯರ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದ ಪರಮಮಂಗಳವಾದ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ. ಆಚಾರ್ಯರ ಬದರಿಕಾಶ್ರಮಪ್ರವೇಶದ ಕುರಿತು ನಾವು ತಿಳಿಯಬೇಕಾದ ಮಹತ್ತ್ವದ ವಿಚಾರದ ನಿರೂಪಣೆಯೊಂದಿಗೆ.
Play Time: 30:55
Size: 5.47 MB