Upanyasa - VNU357

ಶ್ರೀ ಹರಿಭಕ್ತಿಸಾರದ 02ನೆಯ ಪದ್ಯದ ಪೂರ್ವಾರ್ಧ

20/10/2016

ದೇವದೇವ, ಜಗದ್ಭರಿತ, ವಸುದೇವಸುತ, ಜಗದೇಕನಾಥ, ರಮಾವಿನೋದಿತ, ಸಜ್ಜನಾನತ, ನಿಖಿಲಗುಣಭರಿತ ಎಂಬ ಏಳು ಶಬ್ದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. ದೇವರ ಮಾಹಾತ್ಮ್ಯ, ಅವನ ಸರ್ವವ್ಯಾಪಿತ್ವ, ಆದರೂ ಭಕ್ತರ ಮನಸ್ಸಿಗೆ ನಿಲುಕಿ ಅವ ಉಪಾಸನೆಯನ್ನು ಸ್ವೀಕರಿಸುವ ಕಾರುಣ್ಯ, ಅವನ ಜಗತ್ಸ್ವಾಮಿತ್ವ, ಸಕಲ ರೂಪಗಳಲ್ಲಿಯೂ ಅವನು ಪರಿಪೂರ್ಣ ಎನ್ನುವದನ್ನು ದಾಸರು ಚಿತ್ರಿಸಿರುವ ಅದ್ಭುತವಾದ ರೀತಿ ಮುಂತಾದವನ್ನು  ಈ ಉಪನ್ಯಾಸದಲ್ಲಿ ಕೇಳುತ್ತೇವೆ. VNA020 ಲೇಖನದಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ. 

Play Time: 44:25

Size: 8.18 MB


Download Upanyasa Share to facebook View Comments
3140 Views

Comments

(You can only view comments here. If you want to write a comment please download the app.)
  • Jayashree Karunakar,Bangalore

    12:24 PM, 09/11/2017

    "ತೇಜೋವಾರಿ ಮೃದಾಂ ಯಥಾ" ಎನ್ನುವ ವಾಕ್ಯದಲ್ಲಿ  ಭಗವಂತ ಯಾಕೆ  ಮತ್ತು ಹೇಗೆ ಜಗದ್ಬರಿತ ಅನ್ನುವದು ಸ್ಪಷ್ಟವಾಗಿ ತಿಳಿಯಿತು.
    
    ಎರಡನ್ನೂ ತಿಳಿದಾಗ ಮತ್ತಷ್ಟು ಸ್ಪಷ್ಟವಾದ ಜ್ಞಾನವು ಬಂತು.
    
    ಶ್ರೀಮದ್ಭಾಗವತದಿಂದ  ನನ್ನಲ್ಲಿ ತುಂಬಾ ಬದಲಾವಣೆಗಳು ಆಗುತಿದೆ.
    ಮನಸ್ಸು ಯಾವಾಗಲೂ ಶ್ರೀಮದ್ಭಾಗವತದಲ್ಲಿ ಹೇಳಿರುವ ತತ್ತದ ಚಿಂತನೆಯಲ್ಲಿ ತೊಡಗುತ್ತದೆ.
    ಜನಜಂಗುಳಿಯ ಮಧ್ಯದಲ್ಲಿದ್ದರೂ ಮನಸ್ಸು  ಪ್ರಶಾಂತವಾಗಿದ್ದು ಏಕಾಂತವನ್ನು ಅನುಭವಿಸುತ್ತದೆ. ಭಾಗವತದಲ್ಲಿ ಹೇಳಿರುವ ಕತೆಗಳಿಗಿಂತಲೂ ಅಲ್ಲಿ ತಿಳಿಸುವ ಭಾಗವತದ ಧಮ೯ ಮತ್ತು ತತ್ವಗಳನ್ನು ತಿಳಿಯುವಾಗ , ನಮ್ಮ 
    ಹೊರ ಮುಖವಾದ ಮನಸ್ಸು ಅಂತ೯ಮುಖವಾಗಿ ಚಿಂತಿಸತೊಡುಗುತ್ತಿರುತ್ತದೆ.
    ಮನಸ್ಸು ತುಂಬಾ ಭಾವುಕವಾಗುತ್ತದೆ
    
    ನೀವು ಅಷ್ಟು ದೂರದಲ್ಲಿದ್ದುಕೊಂಡು ಎಲ್ಲರ ಮನಸ್ಸನ್ನು ಸ್ವಚ್ಚಗೊಳಿಸುತಿದ್ದೀರಿ.
    ಜ್ಞಾನಸಹಿತವಾಗಿ ಜೀವನದಲ್ಲಿ ಅನುಷ್ಟಾನ ಮಾಡಲು ತುಂಬಾ ಸಹಾಯವಾಗುತ್ತಿದೆ
  • Jayashree Karunakar,Bangalore

    12:03 PM, 09/11/2017

    ಗುರುಗಳೆ
    ಇಲ್ಲಿ ಬಂದಿರುವ ಜಗದ್ಬರಿತ ಅನ್ನುವ ಶಬ್ದಕ್ಕೆ, ಶ್ರೀಮದ್ಭಾಗವತದಲ್ಲಿರುವ  "