(You can only view comments here. If you want to write a comment please download the app.)
Jyothi Gayathri,Harihar
7:49 PM , 16/01/2021
ಶ್ರೀ ಹರಿಯೇ ನಮಃ 🙏🙏🙏🙏🙏
Jayashree Karunakar,Bangalore
12:51 PM, 22/02/2018
ಗುರುಗಳೆ
ಹರಿಭಕ್ತಿಸಾರದಲ್ಲಿಯ ಮಂಗಳಭರಿತ , ದೇವದೇವ, ಜಗದ್ಭರಿತ ಮುಂತಾದ ಒಂದೂಂದು ಶಬ್ದಕ್ಕೂ ಎಷ್ಟೂಂದು ರಸಯುಕ್ತವಾದ ವಿವರಣೆಯನ್ನು ನೀಡಿದ್ದೀರಿ , ನಮ್ಮ ಮನಸ್ಸಿನಲ್ಲಿ ಬೇರೆಯವಿಷಯಗಳಿಗೆ ಜಾಗವಿಲ್ಲದಂತೆ ರಸವನ್ನು ತುಂಬಿಸಿ ಬಿಟ್ಟಿದ್ದೀರಿ. ಮಧ್ಯೆ ಮಧ್ಯೆ ಬ್ರಹ್ಮದೇವರು , ಭಗವಂತನು ವಿವಿಧ ಅವತಾರಗಳನ್ನು ಎತ್ತಿದಾಗ ಮಾಡಿದ ಸ್ತೋತ್ರಗಳನ್ನು ತಮ್ಮ ಅದ್ಭುತ ಕಂಠದಲ್ಲಿ ಆಲಿಸುವಾಗ, ಆ ಶಬ್ದಗಳನ್ನು ನಾನೂ ಅನ್ನಲಿಕ್ಕೆ ಪ್ರಯತ್ನ ಪಡುವುದು ಮಾತ್ರ ಆದರೆ, ಗಂಟಲಿಂದ ಆಚೆ ಶಬ್ದವೇ ಹೊರಡುತ್ತಿಲ್ಲ....ನಮ್ಮ ಮನದ ಇಚ್ಚೆಯನ್ನರಿತೇ ಗುರುಗಳು ಶ್ರಮವಹಿಸಿ ಸಂಸ್ಕೃತಸುರಭಿಯನ್ನು ಹೊರತರುವಲ್ಲಿ ಶ್ರಮಪಡುತ್ತಿದ್ದಾರೆ ಅನ್ನುವ ಸಂತಸ....ಒಂದುಕಡೆ...
ಆ ಸಂಸ್ಕೃತವನ್ನು ಕಲಿಯಲು ಬೇಕಾದಂತಹ ಅಭಿರುಚಿಯನ್ನು ಹುಟ್ಟಿಸುವ ಸಲುವಾಗಿ ಸಂಸ್ಕೃತ ಶ್ಲೋಕಗಳ ಸ್ಪಷ್ಟವಾದ ಉಚ್ಚಾರವನ್ನು ಅದ್ಭತವಾದ ರೀತಿಯಲ್ಲಿ ನೀಡಿ, ಸಂಸ್ಭಕೃತ ಕಲಿಯಲು ಬೇಕಾದಂತಹ ಭಗವಂತನ ಕರುಣೆಯನ್ನು ನಾವು ಸಂಪಾದಿಸುವ ಸಲುವಾಗಿ, ಶ್ರೀಮದ್ಭಾಗವತ, ಮಧ್ವವಿಜಯ ಮುಂತಾದ ಉಪನ್ಯಾಸಗಳ ಶ್ರವಣವನ್ನು ನಮ್ಮಿಂದ ಮಾಡಿಸಿ, ಇದೀಗ ಆಸಂಸ್ಕೃತ ಸುರಭಿಯ ಬರುವಿಕೆಗಾಗಿ ನಮ್ಮಿಂದ ಪ್ರಾಥ೯ನೆಯನ್ನು ಮಾಡಿಸುತ್ತಾ, ಸಂಭ್ರಮದಿಂದ, ತುದಿಕಾಲಿನಲ್ಲಿ ಕಾಯುವಂತೆ ಮಾಡಿದ ನಿಮಗೂ, ನಿಮ್ಮಲ್ಲಿ ನಿಂತು ಇಂತಹ ಅದ್ಭುತವಾದ ಪ್ರೇರಣೆಯನ್ನು ಮಾಡಿಸಿದ ನಿಮ್ಮಅಂತಯಾ೯ಮಿಗೂ ಭಕ್ತಿಯ ನಮಸ್ಕಾರಗಳು🙏