19/12/2016
ಶ್ರೀಹರಿಭಕ್ತಿಸಾರದಲ್ಲಿ ಹದಿನೈದನೆಯ ಪದ್ಯಕ್ಕೆ ನಾಮಸ್ಮರಣದ ವಿಭಾಗ ಮುಗಿಯುತ್ತದೆ. ಹದಿನಾರನೆಯ ಪದ್ಯದಿಂದ ಭಗವಂತನೊಂದಿಗೆ ಸಂಭಾಷಣೆ ನಡೆಸಲು ಆರಂಭಿಸುವ ಭಕ್ತವರೇಣ್ಯರಾದ ಶ್ರೀ ಕನಕದಾಸರು ಭಕ್ತ-ಭಗವಂತರಿಗೆ ಸಂಬಂಧಿಸಿದ ಅದ್ಭುತವಾದ ಪ್ರಪಂಚದ ಅನಾವರಣವನ್ನು ಮಾಡುತ್ತಾರೆ. ದೇವರು ನಮ್ಮ ಅಂತರ್ಯಾಮಿ, ನಮ್ಮ ಸರ್ವಸ್ವ. ಹೊರಗಿನ ಪ್ರಪಂಚದಲ್ಲಿಯೇ ಆಸಕ್ತರಾದ ನಾವು ಒಳಗಿರುವ ನಮ್ಮ ಸ್ವಾಮಿಯನ್ನು ಮರೆತಿರುತ್ತೇವೆ. ಅವನೊಡನೆ ಹೇಗೆ ಸಂಪರ್ಕ ಮಾಡಬೇಕು ಎನ್ನುವದನ್ನೇ ಅರಿತಿರುವದಿಲ್ಲ. ಯಾರೂ ಸ್ಪರ್ಶ ಮಾಡದ ವಿಷಯಗಳನ್ನು ಕೈಗೆತ್ತಿಕೊಂಡು ಅದ್ಭುತವಾದ ವಿಷಯಗಳನ್ನು ತಿಳಿಸುವದಕ್ಕೆ ಪ್ರಸಿದ್ಧರಾದ ಕನಕದಾಸಾರ್ಯರು ಭಗವಂತ ಮತ್ತು ಭಕ್ತರೊಡಗಿನ ಸಂಬಂಧದ ಅದ್ಭುತ ಪ್ರಪಂಚವವೊಂದನ್ನು ಅನಾವರಣಗೊಳಿಸಿದ್ದಾರೆ. ದೇವರ ಜೊತೆ ಹೇಗೆ ಮಾತನಾಡಬೇಕು ಎನ್ನುವದನ್ನು ತಿಳಿಸುವ ಅವರ ದಿವ್ಯಪದ್ಯಗಳ ಅನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
Play Time: 43:19
Size: 5.45 MB