17/02/2017
“ಸಾಗರನ ಮಗಳರಿಯದಂತೆ ಸರಾಗದಲ್ಲಿ ಸಂಚರಿಸುತಿಹ” “ಕರಿರಾಜ ಕರೆಯಲು ಸಿರಿಗೆ ಹೇಳದೆ ಬಂದೆ” ಇತ್ಯಾದಿ ಮಾತುಗಳನ್ನು ನೋಡಿದಾಗ ಶ್ರೀಹರಿಯೂ ಸಹ ಕ್ಷುದ್ರ ಗಂಡಸರ ಹಾಗೆ ಹೆಂಡತಿಗೆ ತಿಳಿಸದಂತೆ ಓಡಾಡುತ್ತಾನೆ ಮತ್ತು ಲಕ್ಷ್ಮೀದೇವಿಗೆ ತಿಳಿಯದ ಸ್ಥಳಕ್ಕೆ ಹೋಗುತ್ತಾನೆ ಎಂದರೆ ಲಕ್ಷ್ಮೀದೇವಿಯಿಲ್ಲದ ಸ್ಥಳಕ್ಕೆ ಹೋಗುತ್ತಾನೆ ಎಂದಾಗುತ್ತದೆ, ಹೀಗಾಗಿ ದೇವರಿಗೂ ಲಕ್ಷ್ಮೀದೇವಿಯರಿಗೂ ವಿಯೋಗವಿದೆ. ಅಂದಮೇಲೆ ದಾಸಸಾಹಿತ್ಯದ ಈ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. ‘ನಿಮಿತ್ತಕಾರಣವೇನು’ ಎಂಬ ಶ್ರೀಕನಕದಾಸರ ಶಬ್ದಪ್ರಯೋಗದ ಕೌಶಲದ ಕುರಿತ ವಿವರಣೆಯೊಂದಿಗೆ. Corresponding Article — VNA067
Play Time: 30:52
Size: 3.15 MB