Upanyasa - VNU394

ಶ್ರೀ ಹರಿಭಕ್ತಿಸಾರದ 27ನೇ ಪದ್ಯ

18/02/2017

ಹಸ್ತಿವಾಹನನಾದಿಯಾದ ಸ-
ಮಸ್ತ ದೇವನಿಕಾಯದೊಳಗೆ ಪ್ರ-
ಶಸ್ತನಾವನು ನಿನ್ನವೊಲ್ ಶರಣಾಗತರ ಪೊರೆವ |
ಹಸ್ತಕಲಿತಸುದರ್ಶನದೊಳರಿ-
ಮಸ್ತಕವನಳುಹುವ ಪರಾತ್ಪರ-
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ	॥ ೨೭ ॥

ದೇವರೂ ಶರಣಾಗತರಕ್ಷಕ, ಒಬ್ಬ ಸದ್ಗುಣಿ ರಾಜನೂ ಶರಣಾಗತರಕ್ಷಕ ಇಬ್ಬರಲ್ಲೂ ವ್ಯತ್ಯಾಸವೇನು ಎನ್ನುವ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ನೀಡಿರುವ ಅದ್ಭುತ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ. ತಪ್ಪದೇ ಕೇಳಿ. 

ಈ ಪದ್ಯದ ಅನುವಾದವುಳ್ಳ ಲೇಖನ VNA068

Play Time: 26:11

Size: 5.05 MB


Download Upanyasa Share to facebook View Comments
7650 Views

Comments

(You can only view comments here. If you want to write a comment please download the app.)
  • No Comment