Upanyasa - VNU412

HGM08 ಶ್ರೀ ರಾಮಚಂದ್ರತೀರ್ಥಶ್ರೀಪಾದಂಗಳವರ ವರೆಗಿನ ಪರಂಪರೆ

08/03/2017

ಶ್ರೀಮಾನ್ ಶ್ರೀನಿಲಯಃ ಸ ರಾಮಗುರುರಾಟ್ 
ಲಕ್ಷ್ಮ್ಯಾದಿಕಾಂತಾಬಿಧಃ 
ಶ್ರೀಪತ್ಯಾಹ್ವಯ ಉಚ್ಚಧೀರ್ಗುರುವರಃ 
ಶ್ರೀರಾಮಚಂದ್ರಾಹ್ವಯಃ I

ಶ್ರೀಮಚ್ಚಂದ್ರಿಕಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಶ್ರೀನಿವಾಸತೀರ್ಥಗುರುಸಾರ್ವಭೌಮರ ಮಾಹಾತ್ಮ್ಯದ ಚಿಂತನೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ 

ವಿಜಯನಗರಸಾಮ್ರಾಜ್ಯದ ಪತನಕಾಲದಲ್ಲಿ ಸಜ್ಜನರ ರಕ್ಷಣೆ ಮಾಡಿದ ಶ್ರೀ ರಾಮತೀರ್ಥರ, 

ಪೆನುಗೊಂಡೆಯಲ್ಲಿ ನೂತನ ರಾಜ್ಯಸ್ಥಾಪನೆಗೆ ಕಾರಣರಾದ  ಶ್ರೀ ಲಕ್ಷ್ಮೀಕಾಂತತೀರ್ಥರ, 

ಮಹಾವಾದಿಗಳನ್ನೂ ಮಣಿಸಿದ ಶ್ರೀ ಶ್ರೀಪತಿತೀರ್ಥರ, 

ದುರಾಗ್ರಹ ದುಷ್ಟತನಗಳೇ ಮೈವೆತ್ತ ಜನರ ಕಣ್ಣು ಕುಕ್ಕಿಸುವಂತಹ ಮಹಾ ಜ್ಞಾನವೈಭವದ ತಪೋಮೂರ್ತಿ ಶ್ರೀ ರಾಮಚಂದ್ರತೀರ್ಥಶ್ರೀಪಾದಂಗಳವರ ಕುರಿತ ಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. 

ವ್ಯಾಸರಾಯರ ಚರಣಕಮಲ ದರುಶನವೆನಗೆ
ಏಸು ಜನ್ಮದ ಸುಕೃತದ ಫಲದಿ ದೊರಕಿತೋ ಎನ್ನ
ಸಾಸಿರ ಕುಲಕೋಟಿ ಪಾವನ್ನವಾಯಿತು
ಶ್ರೀಶನ ಭಜಿಸುವದಕಧಿಕಾರಿ ನಾನಾದೆ
ದೋಷವಿರಹಿತನಾದ ಪುರಂದರವಿಠಲನ್ನ
ದಾಸರ ಕರುಣವು ಎನ ಮ್ಯಾಲೆ ಇರಲಾಗಿ

Play Time: 23:02

Size: 4.41 MB


Download Upanyasa Share to facebook View Comments
1439 Views

Comments

(You can only view comments here. If you want to write a comment please download the app.)
  • No Comment