Upanyasa - VNU415

HGM11 ಶ್ರೀ ವಿದ್ಯಾ ಶ್ರೀನಿವಾಸತೀರ್ಥಶ್ರೀಪಾದರ ವರೆಗಿನ ಪರಂಪರೆ

12/03/2017

ಶ್ರೀಮದ್ ವ್ಯಾಸರಾಜಗುರುಸಾರ್ವಭೌಮರ ಆರಾಧನಾ ನಿಮಿತ್ತ ವಿಶೇಷ ಜ್ಞಾನಕಾರ್ಯ — 11

HGM11 ಶ್ರೀ ವಿದ್ಯಾ ಶ್ರೀನಿವಾಸತೀರ್ಥಶ್ರೀಪಾದರ ವರೆಗಿನ ಪರಂಪರೆ

ಮೂಲಗೋಪಾಲಕೃಷ್ಣನನ್ನು ಕೇವಲ 48 ದಿವಸಗಳ ಕಾಲ ಮಾತ್ರ ಪೂಜಿಸಿದರೂ ಅಷ್ಟು ದಿವಸಗಳಲ್ಲಿ ಅನ್ನಾಹಾರಗಳನ್ನು ತ್ಯಜಿಸಿ ಪೂಜಿಸಿದ ಮಹಾನುಭಾವರಾದ ಶ್ರೀ ವಿದ್ಯಾನಿಧಿತೀರ್ಥಶ್ರೀಪಾದಂಗಳವರ ಮಾಹಾತ್ಮ್ಯ

ಅವರ ಅನುಗ್ರಹದಿಂದ 48ವರ್ಷಗಳ ಕಾಲ ಪೂಜೆಯನ್ನು ಮಾಡಿದ, ಸ್ವಾಮಿಗಳೆಂದರೆ ವಿದ್ಯಾಪೂರ್ಣಸ್ವಾಮಿಗಳು ಎಂದು ರಾಜರಿಂದ ಮಾನಿತರಾದ ಶ್ರೀ ವಿದ್ಯಪೂರ್ಣತೀರ್ಥಶ್ರೀಪಾದಂಗಳವರ ಮಾಹಾತ್ಮ್ಯ

ಭೀಕರ ಕ್ಷಾಮಕಾಲದಲ್ಲಿ  ಮಠದ ಸುಮಾರು ಒಂದೂವರೆಸಾವಿರ ಕೇಜಿ ಬಂಗಾರವನ್ನು ಮಾರಿ ಬಡಜನರಿಗೆ ಧಾನ್ಯಗಳನ್ನು ನೀಡಿ ಅಕ್ಕಿಬೇಳೆ ಸ್ವಾಮಿಗಳು ಎಂದೇ ಪ್ರಸಿದ್ಧರಾದ ಶ್ರೀ ವಿದ್ಯಾಸಿಂಧುತೀರ್ಥಶ್ರೀಪಾದಂಗಳವರ ಮಾಹಾತ್ಮ್ಯ

ಬಡವರು ಕರೆದಲ್ಲೆಲ್ಲ ಹೋಗಿ, ಹೊಲಗಳಲ್ಲಿಯೇ ಚಪ್ಪರ ಹಾಕಿ ಮೂಲಗೋಪಾಲಕೃಷ್ಣದೇವರ ಪೂಜೆಯನ್ನು ಮಾಡಿ ಮಳೆ ಬೆಳೆಗಳನ್ನು ಅನುಗ್ರಹಿಸಿದ ಶ್ರೀ ವಿದ್ಯಾಶ್ರೀಧರತೀರ್ಥಶ್ರೀಪಾದಂಗಳವರ ಮಾಹಾತ್ಮ್ಯ

ಹಾಗೂ ತಮ್ಮ ನಿರಂತರ ಸಂಚಾರದಿಂದ ಭಕ್ತಜನರನ್ನೂ ಅನುಗ್ರಹಿಸುತ್ತ, ಧರ್ಮಮಾರ್ಗವನ್ನು ಬಿಡಬೇಡಿ ಎಂದು ಉಪದೇಶಿಸುತ್ತ ಅಪಾರ ಮಾಹಾತ್ಮ್ಯವನ್ನು ತೋರಿದ ಶ್ರೀ ವಿದ್ಯಾಶ್ರೀನಿವಾಸತೀರ್ಥಶ್ರೀಪಾದಂಗಳವರೆಗಿನ ಮಾಹಾತ್ಮ್ಯವನ್ನು ಸಂಕ್ಷಿಪ್ತವಾಗಿ ಈ ಭಾಗದಲ್ಲಿ ಕೇಳುತ್ತೇವೆ. 

ಸಿರಿಯರಸನ ಸಮ್ಯಗ್ ಜ್ಞಾನವೆಂಬ ಪೈರಿಗೆ ।
ಬೇರು ಬಿಡೆ ಹರಿಕಥೆಯೆಂಬ ಮಳೆಗರೆದು ।
ನೆರೆ ಶಿಷ್ಯಮನವೆಂಬ ಕೆರೆ ತುಂಬಿಸಿ ಕರಗಳೆಂಬ ।
ಕೋಡಿ ಹರಿಸುತ ವಿಜಯೀಂದ್ರನ ಗುರು ।

ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ।
ಬೇಗ ವಿಷ್ಣು ಪದವ ತೋರಿಸುತ್ತ ಬಂತಿದಿಕೊ ।। 

— ಶ್ರೀ ವಿಜಯೀಂದ್ರಗುರುಸಾರ್ವಭೌಮರು 

Play Time: 19:46

Size: 3.85 MB


Download Upanyasa Share to facebook View Comments
1469 Views

Comments

(You can only view comments here. If you want to write a comment please download the app.)
  • No Comment