Upanyasa - VNU417

HGM13 ಭಕ್ತರ ಮೇಲೆ ಶ್ರೀ ವಿದ್ಯಾರತ್ನಾಕರತೀರ್ಥರ ಅನುಗ್ರಹ

14/03/2017

ಶ್ರೀಮದಾಚಾರ್ಯಕರಾರ್ಚಿತ ಮೂಲಗೋಪಾಲಕೃಷ್ಣದೇವರಿಂದ ಆರಂಭಿಸಿ ಶ್ರೀನಾಥತೀರ್ಥಕರಾರ್ಚಿತ ಶ್ರೀ ವೇದವ್ಯಾಸದೇವರ ವರೆಗಿನ ಶ್ರೀಮದ್ ವ್ಯಾಸರಾಜಸಂಸ್ಥಾನದ ಪ್ರತಿಮೆಗಳ ಮಾಹಾತ್ಮ್ಯದ ವರ್ಣನೆ ಮತ್ತು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಿಂದ ಆರಂಭಿಸಿ ತಮ್ಮ ಗುರುಗಳಾದ ಶ್ರೀ ವಿದ್ಯಾಸಮುದ್ರತೀರ್ಥಶ್ರೀಪಾದಂಗಳರವರೆಗಿನ ಸಮಗ್ರ ವಿದ್ಯಾಸಿಂಹಾಸನಾಧೀಶ್ವರರಾದ ಯತಿವರೇಣ್ಯರ ಮಾಹಾತ್ಮ್ಯದ ಚಿಂತನೆಯನ್ನು ನಮ್ಮಿಂದ ಮಾಡಿಸಿ ಕೃತಾರ್ಥರನ್ನಾಗಸಿದ  ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಈ 
ಹರಿಗುರುಮಂಗಳಾಷ್ಟಕದ ಕಡೆಯ ಪದ್ಯದಲ್ಲಿ ತುಂಬು ಕಾರುಣ್ಯದಿಂದ ನಮ್ಮನ್ನು ಆಶೀರ್ವದಿಸುತ್ತಾರೆ. ಅವರ ಪರಮಪವಿತ್ರ ಆಶೀರ್ವಚನಗಳ ಅನುವಾದ ಈ ಭಾಗದಲ್ಲಿದೆ. 

ಯತ್ಕೃತಂ ವಿಬುಧಾಃ ಸರ್ವೇ 
ಪೀತ್ವಾ ನ್ಯಾಯಾಮೃತಂ ಮುದಾ
ಅಮಂಸತ ತೃಣಾನ್ ವಾದೀನ್
ವ್ಯಾಸತೀರ್ಥಂ ತಮಾಶ್ರಯೇ

ಯಾವ ಚಂದ್ರಿಕಾಚಾರ್ಯರು ರಚನೆ ಮಾಡಿದ ನ್ಯಾಯಾಮೃತ ಎಂಬ ಅಮೃತಪಾನವನ್ನು ಮಾಡಿದ ಸಮಸ್ತ ಪಂಡಿತರೂ ಪರವಾದಿಗಳನ್ನು ತೃಣಪ್ರಾಯರನ್ನಾಗಿ ಮಾಡಿ ವಿಜಯಶೀಲರಾಗುತ್ತಾರೆಯೋ ಅಂತಹ ಶ್ರೀಮದ್ವ್ಯಾಸರಾಜಗುರುಸಾರ್ವಭೌಮರನ್ನು ಆಶ್ರಯಿಸುತ್ತೇನೆ. 

— ಶ್ರೀ ರಾಮಚಂದ್ರತೀರ್ಥಗುರುಸಾರ್ವಭೌಮರು. 

Play Time: 20:26

Size: 3.97 MB


Download Upanyasa Share to facebook View Comments
1493 Views

Comments

(You can only view comments here. If you want to write a comment please download the app.)
  • No Comment