14/03/2017
ಶ್ರೀ ಹರಿಭಕ್ತಿಸಾರ —31 ಕಾಮ ಕ್ರೋಧ ಮುಂತಾದ ಆಂತರಿಕ ಶತ್ರುಗಳನ್ನು ಯಾವ ರೀತಿ ಗೆಲ್ಲಬೇಕು ಗಂಡ, ಹೆಂಡತಿ, ತಂದೆ, ತಾಯಿ, ಮಕ್ಕಳು, ಸ್ನೈಹಿತರು, ಸಮಾಜ ಮುಂತಾದವರು ನಮ್ಮ ಸಾಧನೆಗೆ ಪ್ರತಿಬಂಧಕರಾಗಿ ನಮ್ಮ ಬಾಹ್ಯಶತ್ರುಗಳಾಗಿ ನಮ್ಮ ಸಾಧನೆಗೆ ಪ್ರತಿಬಂಧಕರಾಗಿ ನಿಂತಾಗ ಏನು ಮಾಡಬೇಕು ಎದುರಾಗಿ ಬಂದು ಹೋರಾಡದೇ, ನಮ್ಮನ್ನು ನಂಬಿಸಿ ಮೋಸ ಮಾಡಿ, ನಮ್ಮ ಜೊತೆಯಲ್ಲಿದ್ದೇ ನಮ್ಮನ್ನು ವಿನಾಶ ಮಾಡುವ ಸಂಚು ಮಾಡುವ ಹಿತಶತ್ರುಗಳನ್ನು ಯಾವ ರೀತಿ ಗೆಲ್ಲಬೇಕು ಶತ್ರುಗಳೆಲ್ಲ ಒಂದು ಗುಂಪಾಗಿ ನಮ್ಮ ಸಾಧನೆಗೆ ವಿರೋಧಿಗಳಾದಾಗ ಆ ಸಮೂಹಶತ್ರುಗಳನ್ನು ಯಾವ ರೀತಿ ಗೆಲ್ಲಬೇಕು ಎನ್ನುವದನ್ನು ಶ್ರೀ ಕನಕದಾಸರು ಇಲ್ಲಿ ಪರಮಾದ್ಭುತವಾಗಿ ತಿಳಿಸಿಕೊಡುತ್ತಾರೆ. ಇಂದಿನ ದಿವಸದಲ್ಲಿ ಈ ಆಂತರಿಕಶತ್ರುಗಳು, ಬಾಹ್ಯಶತ್ರುಗಳು, ಹಿತಶತ್ರುಗಳು, ಸಮೂಹಶತ್ರುಗಳು ಇವರೆಲ್ಲರಿಂದ ಪೀಡಿತರಾದ ನಾವು ಇವರನ್ನು ಯಾವ ರೀತಿ ದಾಟಿ ಸಾಧನೆ ಮಾಡಬೇಕು ಎಂಬ ಅಪರೂಪದ ವಿಷಯಗಳ ವಿವರಣೆ ಇಲ್ಲಿದೆ.
Play Time: 38:45
Size: 7.21 MB