19/03/2017
ಜೀವ ಮತ್ತು ಪರಮಾತ್ಮರ ಸಂಬಂಧವನ್ನು ನಿರೂಪಿಸುವ ಸಂದರ್ಭದಲ್ಲಿ ಶ್ರೀ ಕನಕದಾಸಾರ್ಯರು ಇದ್ದಕ್ಕಿದ್ದಂತೆ ಮಹಾಭಾರತದ ಕುರಿತು ಮಾತನಾಡುತ್ತಾರೆ. ಆ ಮಹಾನುಭಾವರ ಉಕ್ತಿಯ ಅಭಿಪ್ರಾಯವನ್ನು ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯದ ಆಧಾರದೊಂದಿಗೆ ಇಲ್ಲಿ ವಿವರಿಸಲಾಗಿದೆ. ನಮ್ಮೊಳಗೇ ನಡೆಯುವ ಮಹಾಭಾರತವನ್ನು, ಅರ್ಥಾತ್ ಮಹಾಭಾರತದ ಆಧ್ಯಾತ್ಮಿಕ ಮುಖವನ್ನು ಪರಿಚಯಿಸುವದರೊಂದಿಗೆ. ಶಿಶುತನದ ಸಾಮರ್ಥ್ಯದಲಿ ಕೆಲ- ರಸುರರನು ಸಂಹರಿಸಿ ಚಕ್ರವ ಬಿಸುಟು ಯೌವನ ಕಾಲದಲಿಯಾ ಪಾಂಡುಸುತರಿಂದ | ವಸುಮತಿಯ ಭಾರವನಿಳುಹಿ ಸಾ- ಹಸದಿ ಮೆರೆದವನಾಗಿ ನೀ ಮೆ- ಚ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ ॥ ೩೨ ॥ ಎಲ್ಲರಲಿ ನೀನಾಗಿ ಸುಮನಸ- ರಲ್ಲಿಯತಿಹಿತನಾಗಿ ಯಾದವ ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ | ಕೊಲ್ಲಿಸಿದೆ ಭೀಮಾರ್ಜುನರ ಕೈ- ಯಲ್ಲಿ ಕೌರವಕುಲವನೆಲ್ಲವ ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ ॥ ೩೩ ॥
Play Time: 38:10
Size: 7.11 MB