Upanyasa - VNU422

ಶ್ರೀ ಹರಿಭಕ್ತಿಸಾರದ 34ನೆಯ ಪದ್ಯದ ಉತ್ತರಾರ್ಧ

26/03/2017

ಅಭಿಮನ್ಯುವಿನ ಸಾವಿಗೆ ಕಾರಣನಾದ ಜಯದ್ರಥನನ್ನು ಅರ್ಜುನ ಕೊಂದ ಬಗೆಯ ವಿವರ ಇಲ್ಲಿದೆ. ಜಯದ್ರಥನ ತಲೆಯನ್ನು ಯಾರು ನೆಲದ ಮೇಲೆ ಬೀಳಿಸುತ್ತಾರೆಯೋ ಅವರ ತಲೆಯೂ ನೂರು ಹೋಳಾಗಲಿ ಎಂಬ ಆ ಜಯದ್ರಥನ ತಂದೆಯ ಶಾಪವಿರುತ್ತದೆ. ಅರ್ಜುನ ಹಿಂದಿನ ದಿವಸದ ರಾತ್ರಿಯೇ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಆಗಲೂ ಶ್ರೀಕೃಷ್ಣ ಹೇಳುವದಿಲ್ಲ. ಆ ನಂತರ ಇಡಿಯ ದಿವಸ ಜಯದ್ರಥನಿಗಾಗಿ ಇಡಿಯ ರಣರಂಗವನ್ನು ಹುಡುಕಾಡುವಾಗಲೂ ಶ್ರೀಕೃಷ್ಣ ಹೇಳುವದಿಲ್ಲ. ಜಯದ್ರಥ ಕಂಡಾಗ ಅವನನ್ನು ಕೊಲ್ಲು ಎಂದಾಗಲು ಹೇಳುವದಿಲ್ಲ. ಅರ್ಜುನನ ಬಾಣ ತಗುಲಿ ಜಯದ್ರಥನ ತಲೆ ಕತ್ತರಿಸಿ ಇನ್ನೇನು ನೆಲದ ಮೇಲೆ ಬೀಳಬೇಕು ಎನ್ನುವಾಗ ಶ್ರೀಕೃಷ್ಣ ಹೇಳುತ್ತಾನೆ. ಶ್ರೀಕೃಷ್ಣ ಯಾಕಾಗಿ ಹೀಗೆ ಮಾಡಿದ ಎನ್ನುವದಕ್ಕೆ ಕಾರಣವನ್ನು ತಿಳಿಸಿ ಈ ಘಟನೆಯ ಆಧ್ಯಾತ್ಮಿಕ ಅರ್ಥದ ಚಿಂತನೆಯನ್ನೂ ಇಲ್ಲಿ ಮಾಡಲಾಗಿದೆ. 

ಲೇಖನ VNA075

ನರಗೆ ಸಾರಥಿಯಾಗಿ ರಣದೊಳು
ತುರಗ ನೀರಡಿಸಿದರೆ ವಾರಿಯ
ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ |
ಶಿರವ ಕೆಡಹಿಸಿ ಅವನ ತಂದೆಯ
ಕರತಳಕೆ ನೀಡಿಸಿದೆ ಹರ ಹರ
ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ ॥ ೩೪ ॥

Play Time: 29:17

Size: 5.58 MB


Download Upanyasa Share to facebook View Comments
617 Views

Comments

(You can only view comments here. If you want to write a comment please download the app.)
  • No Comment