26/03/2017
ಪರ್ಣಾಶಾ ಎಂಬ ನದಿಯ ಮತ್ತು ವರುಣನ ಮಗ ಶ್ರುತಾಯುಧ ಎಂಬ ರಾಜ. ಅವನ ಬಳಿ ಒಂದು ಅದ್ಭುತವಾದ ಗದೆಯಿರುತ್ತದೆ. ಯುದ್ಧದಲ್ಲಿ ಅರ್ಜುನನಿಂದ ಬಸವಳಿದು ಹೋದ ಶ್ರುತಾಯುಧ ತನ್ನ ಗದೆಯನ್ನು ತೆಗೆದುಕೊಂಡು ಬಂದು ಅರ್ಜುನನ ರಥವೇರಿ ಅರ್ಜುನನನ್ನು ಹೊಡೆಯುವ ಬದಲು ಶ್ರೀಕೃಷ್ಣನನ್ನು ಹೊಡೆಯುತ್ತಾನೆ. ಆಗ ಆ ಗದೆ ಅವನ ತಲೆಗೇ ತಿರುಗಿ ಅಪ್ಪಳಿಸಿ ಹೊಡೆಯುತ್ತದೆ. ತಲೆ ನೂರು ಹೋಳಾಗಿ ಶ್ರುತಾಯುಧ ಸತ್ತು ಬೀಳುತ್ತಾನೆ. ಈ ಘಟನೆ ಮತ್ತು ಇದು ಸೂಚನೆ ಮಾಡುವ ಆಧ್ಯಾತ್ಮಿಕ ಅರ್ಥದ ಕುರಿತ ಚಿಂತನೆ ಈ ಭಾಗದಲ್ಲಿದೆ. “ವಿವರವೇನೋ ತಿಳಿಯೆ” ಎಂಬ ಶ್ರೀ ಕನಕದಾಸಾರ್ಯರ ಮಾತಿನ ಅಭಿಪ್ರಾಯದ ಸಮರ್ಥನೆಯೊಂದಿಗೆ. ಬವರದಲಿ ಖತಿಗೊಂಡು ಗದೆಯನು ಕವಿದು ನಿನ್ನ ಶ್ರುತಾಯುಧನು ಹೊ- ಕ್ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ | ವಿವರವೇನೋ ತಿಳಿಯೆನೀ ಮಾ ಯವನು ನೀನೇ ಬಲ್ಲೆ ನಿನ್ನಾ- ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ ॥ ೩೫ ॥
Play Time: 32:10
Size: 6.08 MB