27/04/2017
“ಪ್ರೀಣಯಾಮೋ ವಾಸುದೇವಮ್” ಎಂದು ಶ್ರೀಮದಾಚಾರ್ಯರು ಹೇಳಿಕೊಟ್ಟಿದ್ದಾರೆ. ವಿಷ್ಣುಪ್ರೀತ್ಯರ್ಥಂ ಎಂದು ನಾವೆಲ್ಲರೂ ಸಂಕಲ್ಪ ಮಾಡುತ್ತೇವೆ. ಏಕೆ ಶ್ರೀಹರಿಯ ಒಲುಮೆಯನ್ನು ಪ್ರಾರ್ಥಿಸಬೇಕು, ಎನ್ನುವದಕ್ಕೆ ಶ್ರೀ ಕನಕದಾಸಾರ್ಯರು ಇಲ್ಲಿ ಅದ್ಭುತವಾದ ಉತ್ತರವನ್ನು ನೀಡುತ್ತಾರೆ. ಭ್ರಮರಕೀಟನ್ಯಾಯದಂದದಲಿ ನಮ್ಮನು ರಕ್ಷಿಸು ಎಂದು ಶ್ರೀ ಕನಕದಾಸಾರ್ಯರು ಆದಿಕೇಶವನನ್ನು ಬೇಡಿದ್ದಾರೆ. ಈ ಭ್ರಮರಕೀಟನ್ಯಾಯ ಎನ್ನುವದು ದೇವರಿಗೂ ಜೀವರಿಗೂ ಇರುವ ಸಂಬಂಧವನ್ನು ಅದ್ಭುತವಾಗಿ ನಿರೂಪಿಸುವ ಒಂದು ದೃಷ್ಟಾಂತ. ನಾವು ಯಾರು, ನಾವು ಹೇಗೆ ಸಾಧನೆ ಮಾಡಬೇಕು ಎನ್ನುವದನ್ನು ಕಲಿಸುವ, ಬಸವಳಿದು ನಿಂತವರನ್ನು ಹುರಿದುಂಬಿಸುವ ಈ ಅದ್ಭುತ ಭ್ರಮರಕೀಟನ್ಯಾಯದ ಕುರಿತ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿಲ್ಲವಿದಕನು- ಮಾನವುಂಟೇ ಭ್ರಮರಕೀಟನ್ಯಾಯದಂದದಲಿ | ನೀನೊಲಿಯೆ ತೃಣ ಪರ್ವತವು ಪುಸಿ- ಯೇನು ನೀ ಪತಿಕರಿಸೆ ಬಳಿಕಿ- ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ ॥ ೪೦ ॥
Play Time: 24:53
Size: 3.15 MB