02/05/2017
ಒಬ್ಬ ಮನುಷ್ಯನಿಗೆ ಮತ್ತೊಬ್ಬನು ತೊಂದರೆ ಮಾಡಿದರೆ ತೊಂದರೆ ಮಾಡಿದವನ ಇಡಿಯ ಕುಲವನ್ನು ಮನುಷ್ಯರು ದೂರ ಇಡುತ್ತಾರೆ, ದ್ವೇಷ ಮಾಡುತ್ತಾರೆ. ಅಂತಹುದರಲ್ಲಿ ತನ್ನ ಹೆಂಡತಿಯನ್ನೇ ಅಪಹಾರ ಮಾಡಿದ ರಾವಣನ ತಮ್ಮನನ್ನು ತನ್ನವನ್ನಾಗಿ ಭಗವಂತ ಸ್ವೀಕಾರ ಮಾಡಿದ, ಹೀಗಾಗಿ “ಎಷ್ಟು ಮಾಡಿದರೇನು ಮುನ್ನ ತಾ ಪಡೆಯವಷ್ಟೆಯೆಂಬುದ ಲೋಕದೊಳು ಮತಿಗೆಟ್ಟ ಮಾನವಾರುಡುತಿಹರು” ಎಂಬ ಜನರ ಆಕ್ಷೇಪ ಹುರುಳಿಲ್ಲದ್ದು. ನಮ್ಮ ಸ್ವಾಮಿಗೆ ಮನುಷ್ಯರ ಹೋಲಿಕೆ, ಧಣಿಗಳ ಹೋಲಿಕೆ ಸಲ್ಲ ಎಂಬ ತತ್ವವನ್ನು ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸುತ್ತಾರೆ. ಶ್ರೀಮನ್ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣದ ವಚನಗಳ ಉಲ್ಲೇಖದೊಂದಿಗೆ ಇಲ್ಲಿ ವಿಭೀಷಣಮಹಾರಾಜರ ಕಥೆಯ ನಿರೂಪಣೆಯಿದೆ. ನಿನ್ನ ಸತಿಗಳಿಪಿದ ದುರಾತ್ಮನ ಬೆನ್ನಿನಲಿ ಬಂದವನ ಕರುಣದಿ ಮನ್ನಿಸಿದ ಕಾರಣ ದಯಾಪರಮೂರ್ತಿಯೆಂದೆನುತ | ನಿನ್ನ ಭಜಿಸಿದ ಸಾರ್ವಭೌಮರಿ- ಗಿನ್ನು ಇಹಪರವುಂಟು ಸದ್ಗುಣ- ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ ॥ ೪೩ ॥
Play Time: 36:09
Size: 6.76 MB