29/08/2017
ಶ್ರೀರಾಘವೇಂದ್ರೋ ಹರಿಪಾದಕಂಜ- ನಿಷೇವಣಾಲ್ಲಬ್ಧಸಮಸ್ತಸಂಪತ್ । ಶ್ರೀರಾಘವೇಂದ್ರಃ — ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಂಪತ್ — ಶ್ರೀಹರಿಯ ಪಾದಪದ್ಮಗಳನ್ನು ಸೇವಿಸಿ ಅನಭೀಷ್ಟ-ಇಷ್ಟಪುಣ್ಯಗಳನ್ನು ಪಡೆದವರು. ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಸಕಲಪ್ರದಾತರು ಎಂಬ ಮಾತನ್ನು ಹಿಂದಿನ ಉಪನ್ಯಾಸದಲ್ಲಿ ಕೇಳಿದೆವು. ಶ್ರೀರಾಘವೇಂದ್ರತೀರ್ಥರ ಬಳಿ ಎಲ್ಲವೂ ಇದ್ದಾಗ ಮಾತ್ರ ಎಲ್ಲವನ್ನೂ ನೀಡಲು ಸಾಧ್ಯ, ನಮಗೆ ನೀಡುವಷ್ಟು ಸಂಪತ್ತು ಅವರಲ್ಲಿ ಹೇಗೆ ಬಂದಿದೆ, ಯಾಕಾಗಿ ಅವರದನ್ನು ನೀಡುತ್ತಾರೆ ಎಂಬ ವಿಷಯಗಳ ಕುರಿತ ಚರ್ಚೆ ಇಲ್ಲಿದೆ. ಸಕಾಮ ಕರ್ಮ ಎಂದರೇನು, ಅದರ ಫಲದ ವಿನಿಯೋಗ ಹೇಗೆ, ದುಷ್ಟರೂ ಸಕಾಮಕರ್ಮ ಮಾಡುತ್ತಾರೆ, ಸಜ್ಜನರೂ ಸಕಾಮ ಕರ್ಮ ಮಾಡುತ್ತಾರೆ, ಎರಡಕ್ಕೂ ವ್ಯತ್ಯಾಸವೇನು? ರಾಯರಲ್ಲಿನ ಅನಭೀಷ್ಟಪುಣ್ಯಕ್ಕೂ ಬೇರೆಯವರ ಪುಣ್ಯಕ್ಕೂ ಇರುವ ವ್ಯತ್ಯಾಸವೇನು ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ.
Play Time: 45:44
Size: 7.72 MB