29/08/2017
ನಾರದರು ಏರ್ಪಡಿಸಿದ ಸಪ್ತಾಹ ಭಾಗವತಯಜ್ಞದಲ್ಲಿ ಮೊದಲಿಗೆ ಸನಕಾದಿಗಳು ಶ್ರೀಮದ್ ಭಾಗವತದ ಮಹಾಮಾಹಾತ್ಮ್ಯವನ್ನು ತಿಳಿಸಿ ಹೇಳುತ್ತಾರೆ. ಭಾಗವತವನ್ನು ಕೇಳಲು ಏಳು, ಒಂಭತ್ತು ಮಂತಾದ ದಿವಸಗಳ ನಿಯಮವಿಲ್ಲ, ಅದು ಅಶಕ್ತರಿಗೆ ಮಾತ್ರ. ಪ್ರತೀನಿತ್ಯ ಭಾಗವತವನ್ನು ಕೇಳಬೇಕು ಎನ್ನುವ ಮಹತ್ತ್ವದ ವಿಷಯದೊಂದಿಗೆ ಲಕ್ಷ್ಮೀ, ಬ್ರಹ್ಮ, ರುದ್ರಾದಿಗಳು ಮಾಡಿದ ಭಾಗವತ ಶ್ರವಣದ ಕುರಿತು ನಾವಿಲ್ಲಿ ಕೇಳುತ್ತೇವೆ. ಭಾಗವತ ಸ್ವಯಂ ಭಗವಂತನ ಸನ್ನಿಧಾನಪಾತ್ರವಾದ ಗ್ರಂಥ ಎಂಬ ಮಾತಿನ ಚಿಂತನೆಯೊಂದಿಗೆ. ಭಾಗವತದ ಮಾಹಾತ್ಮ್ಯವನ್ನು ಸನಕಾದಿಗಳು ಹೇಳುತ್ತಿದ್ದಂತೆಯೇ ಭಕ್ತಿದೇವತೆ ತನ್ನಿಬ್ಬರು ಮಕ್ಕಳೊಂದಿಗೆ ಬರುವ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ.
Play Time: 47:16
Size: 7.72 MB