06/09/2017
ಸಪ್ತಾಹ ಎಂದರೆ ಸುಮ್ಮನೆ ಆಚಾರ್ಯರೊಬ್ಬರನ್ನು ಕರೆಸಿ ಏಳು ದಿವಸ ಏಳು ಗಂಟೆಗಳ ಕಾಲ ಉಪನ್ಯಾಸ ಮಾಡಿಸುವದಲ್ಲ. ಅದಕ್ಕೊಂದು ಪರಿಶುದ್ಧವಾದ ವಿಧಿಯಿದೆ. ಮೋಕ್ಷಪ್ರದವಾದ ಮಹಾಸತ್ಕರ್ಮವದು. ವಿವಾಹ ಉಪನಯನಗಳಿಗೆ ಎಷ್ಟು ಆದರ ಶ್ರದ್ಧೆಗಳಿಂದ ಮುಹೂರ್ತ ನೋಡುತ್ತೇವೆಯೋ ಅದಕ್ಕಿಂತಲೂ ಮಿಗಿಲಾದ ಶ್ರದ್ಧೆಯಿಂದ ಮುಹೂರ್ತವನ್ನು ನೋಡಬೇಕು ಎಂದು ಸ್ವಯಂ ಸನಕಾದಿಗಳು ಹೇಳುತ್ತಾರೆ. ಹಾಗೆಯೇ ಯಾವ ಮಾಸಗಳಲ್ಲಿ ಸಪ್ತಾಹವನ್ನು ಮಾಡುವದರಿಂದ ಮೋಕ್ಷ ದೊರೆಯುತ್ತದೆಯೋ ಆ ಮಾಸಗಳನ್ನು ತಿಳಿಸಿ, ಸಪ್ತಾಹಕ್ಕೆ ಯಾರನ್ನು ಕರೆಯಬೇಕು, ಯಾವ ರೀತಿ ಕರೆಯಬೇಕು, ಎಲ್ಲಿ ಸಪ್ತಾಹ ಮಾಡಬೇಕು, ವೇದಿಕೆ ಹೇಗಿರಬೇಕು, ಮಂಟಪ ಹೇಗಿರಬೇಕು, ಭಾಗವತ ಹೇಳುವವರಲ್ಲಿ ಯಾವ ಲಕ್ಷಣಗಳಿರಬೇಕು, ಕೇಳುವವರ ನಿಯಮವೇನು, ಸಪ್ತಾಹವನ್ನು ಯಾರುಯಾರು ಕೇಳುವದರಿಂದ ಯಾವಯಾವ ಫಲವನ್ನು ಪಡೆಯುತ್ತಾರೆ, ಸಪ್ತಾಹದ ಅಂತ್ಯದಲ್ಲಿ ಏನೆಲ್ಲ ಸತ್ಕರ್ಮಗಳನ್ನು ಆಚರಿಸಬೇಕು, ಎನ್ನುವದನ್ನೂ ತಿಳಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಹೇಳುವದಕ್ಕೂ, ಕೇಳುವದಕ್ಕೂ ಉಪವಾಸದಿಂದ ವಿಘ್ನ ಉಂಟಾಗುವದಾದರೆ ಭೋಜನವೇ ಶ್ರೇಷ್ಠ ಎಂಬ ಮಾತಿನ ಪ್ರತಿಪಾದನೆಯನ್ನು ಆ ವೇದಾಂತಪೀಠಾಧಿಪತಿಗಳಾದ ಶ್ರೀ ಸನಕಾದಿಯೋಗಿವರ್ಯರು ಮಾಡುತ್ತಾರೆ. ಆ ಮಾತುಗಳ ವಿವರಣೆ ಇಲ್ಲಿದೆ.
Play Time: 01:00
Size: 11 MB