Gurugalige Namaskara! !
Dhanyosmi guru devara parama anugraha vayitu.. Mathondu kalakaliya guru devaralli prarthane. . Sri srinatha teerthara charite haagu sri vyasaraja mathada mundina Yati varenyara naama dheya dalli VIDYA yemba modala nama yeke alwadisidaru yendu varnisa beku antha gurugalalli manda bhudhi ulla namminda kalakaliya prarthane! !! Gurugalige sasthanga pranamagalu...!!
Vishnudasa Nagendracharya
ಹರಿಗುರುಮಂಗಲಾಷ್ಟಕದ ಪ್ರವಚನಗಳಲ್ಲಿ ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರ ಕುರಿತಾಗಿ ಕೆಲವು ವಿಷಯಗಳನ್ನು ನಿರೂಪಿಸಿದ್ದೇನೆ. ಅಲ್ಲಿ ಕೇಳಬಹುದು.
ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರು ಕಾಶಿಯಲ್ಲಿ ನೂರಾರು ಜನ ಬೇರೆ ಬೇರೆ ದರ್ಶನಗಳಲ್ಲಿ ನಿಷ್ಣಾತರಾದ ವಿದ್ವಾಂಸರ ಜೊತೆಯಲ್ಲಿ ಏಕಕಾಲಕ್ಕೆ ವಾದವನ್ನು ಮಾಡಿ ಶ್ರೀಮನ್ ಮಧ್ವಸಿದ್ಧಾಂತವನ್ನು ಪ್ರತಿಷ್ಠಾಪಿಸುತ್ತಾರೆ. ವಿದ್ಯಾಸಿಂಹಾಸನಾಧೀಶ್ವರರಾದ ತಮಗೆ ಮಾತ್ರ ಈ ಕಾರ್ಯ ಸಾಧ್ಯವಾಯಿತು ಎಂದು ಎಲ್ಲ ಪರಮತೀಯ ಸ್ವಮತೀಯ ಪಂಡಿತರು ಶ್ರೀಪಾದರು ಒಕ್ಕೊರಲಿನಿಂದ ಶ್ರೀಗಳನ್ನು ಶ್ಲಾಘಿಸುತ್ತಾರೆ. ತಮ್ಮ ಈ ವಿದ್ಯಾವೈಭವದ ಸಂಕೇತವಾಗಿ ಮುಂದೆ ಇದೇ ರೀತಿಯಲ್ಲಿ ವಿದ್ಯಾ ಎನ್ನುವ ಹೆಸರು ಮುಂದುವರೆಯಬೇಕು ಎಂಬ ಶಿಷ್ಯರೆಲ್ಲರ ಪ್ರಾರ್ಥನೆಯಂತೆ ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಿಗೆ ವಿದ್ಯಾನಾಥತೀರ್ಥರು ಎಂದು ನಾಮಕರಣ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೆ ಇದೇ ರೀತಿಯಲ್ಲಿ ವಿದ್ಯಾ ಎಂಬ ಹೆಸರಿನಿಂದಲೇ ಈ ವಿದ್ಯಾಸಿಂಹಾಸನಾಧಿಪತಿಗಳಿಗೆ ನಾಮಕರಣವಾಗುತ್ತಿದೆ.
Arjun Bangle Sridhar,Mysore
7:50 AM , 17/09/2017
Gurugalige Namaskara !!!
Ondu samshaya mandha bhudhi ulla namma manadalli moodide daya vittu krupe maadi pariharisa beku. Vyasaraja matha da parampara dalli sri Raghunatha Teerthara Shishyaru Sri jagannatha Teertharu ivara Nanthara peetake sri srinatha teertharu bandad allawe tadananthara sri vidyanatha teertharu. Thamma upanyasa dalli sri jagannatha teerthara nanthara sri vidyanatha teertharu anta helidiri.. idaralli namma manasinalli dwiguda untaghide. . Namma samshaya vannu pariharisa bekendu matthomme vinamra dinda prarthisuthene..
Vishnudasa Nagendracharya
ಉಪನ್ಯಾಸವನ್ನು ಎಡಿಟ್ ಮಾಡುವಾಗ ಶ್ರೀನಾಥತೀರ್ಥಶ್ರೀಪಾದಂಗಳವರ ಉಲ್ಲೇಖ ಅನವಧಾನದಿಂದ ತಪ್ಪಿಹೋಗಿದೆ.
ಶ್ರೀ ಜಗನ್ನಾಥತೀರ್ಥಶ್ರೀಪಾದಂಗಳವರ ಶಿಷ್ಯರು ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರು, ಅವರ ಶಿಷ್ಯರು ಶ್ರೀ ವಿದ್ಯಾನಾಥತೀರ್ಥಶ್ರೀಪಾದಂಗಳವರು.
P.R.SUBBA RAO,BANGALORE
5:15 PM , 16/09/2017
ಶ್ರಿಗುರುಭ್ಯೋನಮಃ
ಸಮಸ್ತ ಗುರು ಪರಂಪರೆಯ ಸ್ಮರಣೆಯಾಯಿತು. ಗುರ್ವನುಗ್ರಹದಿಂದ ನಮ್ಮ ಸಮಸ್ತ ಪಾಪ ನಿವಾರಣೆಯಾಗಲಿ
ತಮಗೆ ಅನಂತಾನಂತ ವಂದನೆಗಳು
ತಮ್ಮ ವಿಧೇಯ
H. Suvarna kulkarni,Bangalore
1:15 AM , 15/09/2017
ಸಮಗ್ರ ಯತಿ ಪರಂಪರೆಯ ಸ್ಮರಣೆ ಯ ಪರಿಚಯ ಮತ್ತುನಮಗೆ ಜ್ಞಾನ ಮಾಗ೯ ತೋರಿಸಿಕೊಟ್ಟ ಗುರುಗಳನ್ನು ಭಕ್ತಿಯಿಂದ ಸ್ಮರಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದೀರಿ ಧನ್ಯವಾದಗಳು
ಖಂಡಿತ. ನಿಮ್ಮ ಕುರಿತ ವಿಶೇಷ ಪ್ರಾರ್ಥನೆ ಸದಾ ಸಲ್ಲಿಸುತ್ತಿರುತ್ತೇನೆ.
Shantha.raghothamachar,Bangalore
11:12 AM, 10/09/2017
ನಮೋನಮಃ ನಮೋನಮಃ ನಮೋನಮಃ ಅಪೂರ್ವ ವಾದ ಪವಿತ್ರವಾದ ಗುರು ನಮಸ್ಕಾರ. ಕಣ್ಣಿನಂಚಲಿ ಆನಂದದಜಲ.ಆಚಾರ್ಯ ರೇ ವ್ಯಾಸರಾಜರ ಪರಂಪರೆಯ ಮಹಿಮೆ ಮಹತ್ವ ವನ್ನು ತಿಳಿಸುತ್ತಾಯಿರಿ ಧನ್ಯವಾದಗಳು
Vishnudasa Nagendracharya
ನನ್ನ ಜೀವದ ಸೌಭಾಗ್ಯದ ಕಾರ್ಯ, ನನ್ನ ಕುಲಗುರುಗಳಾದ ಶ್ರೀಮದ್ ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರು ಮತ್ತು ಶ್ರೀಮದಾಚಾರ್ಯರ ಪರಮಪರಿಶುದ್ಧ ಪರಂಪರೆಗಳಲ್ಲಿ ಬಂದ ಮಹನೀಯಚರಣರ ಮಾಹಾತ್ಮ್ಯದ ಕುರಿತು ಮಾತನಾಡುವದು. ಆ ಗುರುಗಳೇ ಆ ಸೌಭಾಗ್ಯವನ್ನು ಅವಿರತವಾಗಿ ಅನುಗ್ರಹಿಸಬೇಕು.
Madhura,Bangalore
7:56 PM , 10/09/2017
Bhahala onnothavada Bhagavatha karya nedesittiruviri aacharyare nimagga
Niranjan Kamath,Koteshwar
1:44 PM , 10/09/2017
Guru parampareyannu varnisi smarisida pari ...antyanta bhavapoorna vagittu. Dhanyosmi.🙏🙏🙏🙏🙏🙏🙏
ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು
12:06 PM, 10/09/2017
ಆಚಾರ್ಯರಿಗೆ ನಮಸ್ಕಾರಗಳು. ನಾರದರು ಕಲಿಯುಗದ ಜನಗಳ ಮೇಲೆ ಕಾರುಣ್ಯ ತೋರುವಂತೆ ನಮ್ಮೆಲ್ಲರ ಮೇಲೆ ನೀವು ಕಾರುಣ್ಯ ತೋರಿಸಿ ಪ್ರವಚನ ಬಹಳ ಅದ್ಭುತವಾಗಿ ಹೇಳಿ ಬಹಳಷ್ಟು ಉಪಕಾರ ಮಾಡುತ್ತಿದ್ದೀರಿ. ಧನ್ಯವಾದಗಳು
Sangeetha Prasanna,Bangalore
10:07 AM, 10/09/2017
ಹರೇ ಶ್ರೀನಿವಾಸ .ತಮ್ಮಿಂದ ಸಮಗ್ರ ಯತಿ ಪರಂಪರೆಯ ಗುರುಗಳ ಸ್ಮರಣೆಯ ಪುಣ್ಯ ನಮಗೊದಗಿ ಬಂದಿತು .ಧನ್ಯರಾದೆವು 🙏🙏