10/09/2017
ಶ್ರೀಮದ್ ಭಾಗವತದ ಮೊದಲ ಶ್ಲೋಕದ ಅನುವಾದ ಇಲ್ಲಿಂದ ಆರಂಭ. ವೇದವ್ಯಾಸದೇವರು ಭಾಗವತ ಮೊದಲಶ್ಲೋಕದಲ್ಲಿ ಮಂಗಲಾಚರಣೆಯನ್ನು ಮಾಡಿದ್ದಾರೆ. ಮಂಗಲಾಚರಣೆ ಎಂದರೇನು, ಏಕೆ ಮಾಡಬೇಕು, ಪ್ರಯೋಜನವಿದ್ದದ್ದಕ್ಕಾಗಿ ನಾವು ಮಾಡುವದು ಸರಿಯಾದರೂ ನಿತ್ಯತೃಪ್ತರಾದ ವೇದವ್ಯಾಸದೇವರಿಗೆ ಮಂಗಳಾಚರಣೆಯಿಂದಲೂ ಏನೂ ಪ್ರಯೋಜನವಿಲ್ಲ, ಅಂದಮೇಲೆ ಅವರೇಕೆ ಮಂಗಳಾಚರಣೆ ಮಾಡುತ್ತಾರೆ, ದೇವರ ಮಂಗಳಾಚರಣೆಗೂ ಶ್ರೀಮದಾಚಾರ್ಯರು ಮಾಡಿರುವ ಮಂಗಳಾಚರಣೆಗೂ ಏನು ವ್ಯತ್ಯಾಸ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. “ಜನ್ಮಾದ್ಯಸ್ಯ ಯತಃ” ಎಂಬ ಭಾಗವತದ ಮೊಟ್ಟಮೊದಲ ಶಬ್ದಪ್ರಯೋಗದಲ್ಲಿಯೇ ವೇದವ್ಯಾಸದೇವರ ಎಂತಹ ಕಾರುಣ್ಯ ಅಡಗಿದಿ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯದ ಪದ್ಯ — ಸೃಷ್ಟಿಸ್ಥಿತ್ಯಪ್ಯಯೇಹಾನಿಯತಿದೃಶಿತಮೋಬಂಧಮೋಕ್ಷಾಶ್ಚ ಯಸ್ಮಾತ್ ಅಸ್ಯ ಶ್ರೀಬ್ರಹ್ಮರುದ್ರಪ್ರಭೃತಿಸುರನರದ್ವ್ಯೀಶಶತ್ರ್ವಾತ್ಮಕಸ್ಯ । ವಿಷ್ಣೋರ್ವ್ಯಸ್ತಾಃ ಸಮಸ್ತಾಃ ಸಕಲಗುಣನಿಧಿಃ ಸರ್ವದೋಷವ್ಯಪೇತಃ ಪೂರ್ಣಾನಂದಾವ್ಯಯೋ ಯೋ ಗುರುರಪಿ ಪರಮಶ್ಚಿಂತಯೇ ತಂ ಮಹಾಂತಮ್ ।। ಭಗವಂತ ಮತ್ತು ಭಗವತ್ಪಾದರು ಈ ಮಂಗಲಾಚರಣೆಗಳನ್ನೇ ಏಕೆ ಮಾಡಿದರು ಎನ್ನುವ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರ ಪಡೆಯುತ್ತೇವೆ.
Play Time: 27:22
Size: 5.12 MB