10/09/2017
ಶ್ರೀ ವೇದವ್ಯಾಸದೇವರ ಮಂಗಳಾಚಾರಣೆಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿರುವ ಅದ್ಭುತವಾದ ಕಾರಣದೊಂದಿಗೆ, ಜನ್ಮಾದ್ಯಸ್ಯ ಯತಃ ಎಂಬ ಸಮಗ್ರ ಶ್ಲೋಕದ ಅರ್ಥವನ್ನು ಇಲ್ಲಿ ಅವರ ವಾಕ್ಯಗಳಿಂದಲೇ ವಿವರಿಸಲಾಗಿದೆ. ಮೊದಲ ಶ್ಲೋಕದಲ್ಲಿ ಪರಮಾತ್ಮನ ಲಕ್ಷಣಗಳನ್ನು ತಿಳಿಸಿದ್ದಾರೆ. ಈ ಲಕ್ಷಣಗಳನ್ನು ಯಾಕಾಗಿ ತಿಳಿಸಬೇಕು ಎನ್ನುವದಕ್ಕೆ ಶ್ರೀ ವಿಜಯಧ್ವಜತೀರ್ಥಗುರುರಾಜರು ನೀಡಿರುವ ಪರಮಾದ್ಭುತವಾದ ಎರಡು ಉತ್ತರಗಳ ವಿವರಣೆ ಇಲ್ಲಿದೆ. ಮೊಲದ ಕೋಡು ಅತ್ಯಂತ ಅಸತ್ಯವಾದ ಪದಾರ್ಥ. ಜಗತ್ತಿನ ಯಾವ ವ್ಯಕ್ತಿಯೂ ಅದನ್ನು ಕಂಡಿಲ್ಲ. ಹಾಗೆ ದೇವರನ್ನೂ ಸಹ ಯಾರೂ ಕಂಡಿಲ್ಲ. ಅಂದಮೇಲೆ ದೇವರಿಗೂ ಮೊಲದ ಕೋಡಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ತಪ್ಪದೇ ಕೇಳಿ. ಮೊದಲ ಶ್ಲೋಕದ ಕುರಿತ ಎರಡನೆಯ ಉಪನ್ಯಾಸ. ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।।
Play Time: 38:49
Size: 7.09 MB