10/09/2017
ಜನ್ಮಾದ್ಯಸ್ಯ ಎಂಬ ಶಬ್ದಗಳ ಅರ್ಥ ಮತ್ತು ನಿತ್ಯಜೀವನದಲ್ಲಿ ಅದರ ಅನುಸಂಧಾನ ಹೇಗಿರಬೇಕು ಎನ್ನುವದನ್ನು ವಿವರಿಸುವ ಉಪನ್ಯಾಸ. ಶ್ರೀ ವೇದವ್ಯಾಸದೇವರ ಮಂಗಲಾಚರಣ ಪದ್ಯಕ್ಕೆ ಅರ್ಥವನ್ನು ಹೇಳುತ್ತ ಶ್ರೀಮದಾಚಾರ್ಯರು ಮೊದಲಿಗೆ “ತಂ ಪರಂ ಧೀಮಹಿ” ಎಂದು ಅನ್ವಯವನ್ನು ತೋರಿಸಿದ್ದಾರೆ. ಕ್ಲಿಷ್ಟವಿಷಯಗಳನ್ನು ಮಾತ್ರ ನಿರ್ಣಯ ಮಾಡಲು ಹೊರಟಿರುವ ಆಚಾರ್ಯರು ಸರಳವಾದ ಈ ವಿಷಯವನ್ನು ತಿಳಿಸಲು ಕಾರಣವೇನು ಎಂಬ ಪ್ರಶ್ನೆಗೆ ಶ್ರೀಮಟ್ಟೀಕಾಕಾೃತ್ಪಾದರು ನೀಡಿದ ಉತ್ತರದ ಅನುಸಂಧಾನ ಇಲ್ಲಿದೆ. ಜನ್ಮಾದ್ಯಸ್ಯ ಯತಃ ಎನ್ನುವಲ್ಲಿ ಇರುವ ಜನ್ಮಾದಿ ಎಂಬ ಶಬ್ದದ ಕುರಿತು ದರ್ಶನಪ್ರಪಂಚದಲ್ಲಿ ವಿಸ್ತೃತವಾದ ಚರ್ಚೆಯಿದೆ. ಜನ್ಮಾದಿ ಎಂದರೆ ಸೃಷ್ಟಿ ಸ್ಥಿತಿ ಲಯಗಳು ಎಂದು ಅನೇಕರ ವಾದ. ಆದರೆ ಶ್ರೀಮದಾಚಾರ್ಯರು ಜನ್ಮಾದಿ ಎಂದರೆ ಕೇವಲ ಮೂರಲ್ಲ, ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಅಜ್ಞಾನ, ಜ್ಞಾನ, ಬಂಧ, ಮೋಕ್ಷ ಎಂಬ ಎಂಟು ಪದಾರ್ಥಗಳು ಎಂದು ಅರ್ಥ ಮಾಡುತ್ತಾರೆ. ಈ ಎಂಟನ್ನು ಒಪ್ಪಬೇಕಾದ ಅನಿವಾರ್ಯತೆಯೇನು ಎನ್ನುವದಕ್ಕೆ ಶ್ರೀಮಚ್ಚಂದ್ರಿಕಾಚಾರ್ಯರು ತಾತ್ಪರ್ಯಚಂದ್ರಿಕಾಗ್ರಂಥದಲ್ಲಿ ಅದ್ಭುತವಾದ ಉತ್ತರಗಳನ್ನು ನೀಡಿದ್ದಾರೆ. ಆ ಉತ್ತರಗಳ ಸಂಗ್ರಹ ಇಲ್ಲಿದೆ. ಮೊದಲ ಶ್ಲೋಕದ ಕುರಿತ ಮೂರನೆಯ ಉಪನ್ಯಾಸ. ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।।
Play Time: 48:31
Size: 6.50 MB