14/09/2017
ಭಗವಂತನೇ ಸರ್ವಪ್ರದ ಎನ್ನುವ ತತ್ವವನ್ನು ಭಾಗವತೋತ್ತಮರಾದ ಶ್ರೀ ವಸುದೇವ ದೇವಕಿಯರು ಯಾವ ರೀತಿ ಅನುಷ್ಠಾನ ಮಾಡುತ್ತಿದ್ದರು ಎಂಬ ಮಾತಿನ ನಿರೂಪಣೆಯೊಂದಿಗೆ “ಜನ್ಮಾದ್ಯಸ್ಯ ಯತಃ” ಎಂಬ ವಾಕ್ಯ ಹೇಳುವ ತತ್ವವನ್ನು ಯಾವ ರೀತಿ ಅನುಸಂಧಾನಕ್ಕೆ ತರಬೇಕು ಎನ್ನುವದರ ಕುರಿತ ಚಿಂತನೆ ಇಲ್ಲಿದೆ. ಬ್ರಹ್ಮದೇವರಿಂದ ಆರಂಭಿಸಿ ದೇವ, ಋಷಿ, ಪಿತೃ, ಮನುಷ್ಯರು, ಪ್ರಾಣಿ, ಪಕ್ಷಿಗಳು, ರಾಜಸರು, ತಾಮಸರೆಂಬ ಎಲ್ಲ ಚೇತನರಿಗೂ, ಅವ್ಯಾಕೃತ ಆಕಾಶ, ಪ್ರಕೃತಿ, ವೇದಗಳು, ಬ್ರಹ್ಮಾಂಡದಿಂದ ಅರಂಭಿಸಿ ನಾವು ಉಪಯೋಗಿಸುವ ಸಕಲ ಪದಾರ್ಥಗಳ ವರೆಗೆ ಪರಮಾತ್ಮನೇ ಸೃಷ್ಟ್ಯಾದಿಪ್ರದ ಎಂಬ ತತ್ವದ ನಿರೂಪಣೆ ಇಲ್ಲಿದೆ. ಶ್ರೀಮಂತ್ರಾಲಯಪ್ರಭುಗಳು ತಿಳಿಸಿದ ಒಂದು ಅದ್ಭುತವಾದ ಸಾಂಪ್ರದಾಯಿಕ ಅರ್ಥದ ವಿವರಣೆಯೊಂದಿಗೆ. ಮೊದಲನೆಯ ಶ್ಲೋಕದ ಕುರಿತ ಐದನೆಯ ಉಪನ್ಯಾಸ
Play Time: 39:28
Size: 6.50 MB