(You can only view comments here. If you want to write a comment please download the app.)
Saritha,MANGALORE
8:14 AM , 17/11/2020
Gurugale anantha koti pranamagalu e upanyasadalalli aarambika karmakke navu kaaranaru Alla adu anadhi antha gottayitu. Vandanegalu
Shreesha Vitthala,Bangalore
8:40 AM , 03/10/2020
Namaskara gurugale,
As per my understanding of the pravachana the first yoni is decided by arambhika karma. If tree or animal is the first yoni then the jeeva will have no intellect. Hence no question of punya or paapa. So how will the next yoni be decided?
Vishnudasa Nagendracharya
ಮನುಷ್ಯಜನ್ಮ ದೊರೆತು ಪುಣ್ಯ ಪಾಪ ಮಾಡುವವರೆಗೆ ಆರಂಭಿಕ ಕರ್ಮವೇ ಜನ್ಮಗಳನ್ನು ನೀಡುತ್ತದೆ.
Mahadi Sethu Rao,Bengaluru
6:57 PM , 14/06/2020
HARE KRISHNA.
Loki,Mysore
10:12 PM, 16/04/2020
ಧನ್ಯವಾದಗಳು ಗುರುಗಳೇ 🙏
Vijaya bharathi k b,Bangalore
2:47 PM , 20/05/2018
🙏🙏
Mrs laxmi padaki,Pune
12:20 PM, 26/04/2018
👏👏👏👏👏
Jayashree Karunakar,Bangalore
11:30 PM, 08/11/2017
ಗುರುಗಳೆ
ಜೀವನೆ ಪ್ರತಿಬಿಂಬ ಜೀವನೆ ಉಪಾಧಿ ಹೇಗೆ ಅನ್ನುವುದನ್ನು
ತಾವು ನೀಡುವ ಶ್ರೀಮದ್ಭಾಗವತವೇ ಅದ್ಭುತವಾಗಿ ಅಥ೯ಮಾಡಿಸುತ್ತದೆ. ಮತ್ತೆ ಮತ್ತೆ ಕೇಳುವಾಗ ಹೊಸ ಹೂಸ ಅಥ೯ಗಳು ಗೊಚರವಾಗುತ್ತದೆ.
ಜೀವರಿಗೆ ೨ ಉಪಾಧಿಗಳಿವೆ
ಒಳಗಿನ ಉಪಾಧಿ ಅಂದರೆ ಸ್ವರೂಪೋಪಾಧಿ, ಆದು ಬರುವುದು ಚೇತನವಾದ ಉಪಾಧಿಯಿಂದ. ಹಾಗಾದರೆ ಅದು ಜೀವನೆ ಆಗಿರಬೇಕು. ಆದ್ದರಿಂದ ಜೀವನೆ ಉಪಾಧಿ . ಇಲ್ಲಿ ಪ್ರತಿಬಿಂಬವೂ ಚೇತನ ಉಪಾಧಿಯೂ ಚೇತನ, ಅಂದರೆ ಜೀವನೆ ಪ್ರತಿಬಿಂಬ ಮತ್ತು ಜೀವನೆ ಉಪಾಧಿ ಎಂದು ಅಥ೯ವಾಯಿತು. ಅನಂತಕಾಲದವರೆಗೆ ಇರುವಂತದ್ದು
ಎರಡನೆಯದು ಬಾಹ್ಯಉಪಾಧಿ ಅಂದರೆ ಅನಿತ್ಯವಾದದ್ದು, ಆಚೇತನವಾದದ್ದು ಮತ್ತು ನಾವು ಕಳೆದುಕೊಳ್ಳಲೇಬೇಕಾದದ್ದು.ಇಲ್ಲಿ ಉಪಾಧಿಯೂ ಅಚೇತನ ಮತ್ತು ಪ್ರತಿಬಿಂಬವೂ ಅಚೇತನವಾದದ್ದು.
ಗುರುಗಳೆ
ನಮ್ಮ ಸ್ವಭಾವದಲ್ಲಿಯೆ ನಾವೂಮ್ಮೆ ಸಂಸಾರಕ್ಕೆ ಬಂದು ಮುಕ್ತರಾಗಬೇಕೆಂಬ ಗುಣವಿದೆ ಎಂದಿರಿ. ಆದರೆ ಸಂಸಾರಕ್ಕೆ ಬಂದವರೆಲ್ಲೂ ಮುಕ್ತರಾಗುತ್ತಾರೆಯೆ ? ಇಲ್ಲ ಯೋಗ್ಯವಾದವರಿಗೆ ಮಾತ್ರ ಎಂದಾದರೆ, ಬೇರೆಯವರನ್ನು ಯಾಕೆ ಸಂಸಾರಕ್ಕೆ ಬೀಳಿಸುವುದು ?
Vishnudasa Nagendracharya
ಈಗಾಗಲೇ ಅನೇಕ ಉಪನ್ಯಾಸಗಳಲ್ಲಿ ಇದಕ್ಕೆ ಉತ್ತರ ನೀಡಿದ್ದೇನೆ.
ಉತ್ತಮ ಜೀವರು ಸಂಸಾರಕ್ಕೆ ಬಂದು ಮುಕ್ತರಾಗುತ್ತಾರೆ. ಮುಕ್ತರಾಗಲು ಸಂಸಾರಕ್ಕೆ ಬರಲೇಬೇಕು.
ಅಧಮ ಜೀವರು ಸಂಸಾರಕ್ಕೆ ಬಂದು ತಾಮಸಮುಕ್ತಿಯನ್ನು (ಅಂಧಂತಮಸ್ಸನ್ನು ) ಪಡೆಯುತ್ತಾರೆ. ತಮಸ್ಸಿಗೆ ಹೋಗಲು ಸಂಸಾರಕ್ಕೆ ಬರಲೇ ಬೇಕು.
ಮಧ್ಯಮ ಜೀವರು ಸಂಸಾರದಲ್ಲಿಯೇ ಇರುವವರು. ಹೀಗಾಗಿ ಸದಾ ಸಂಸಾರದಲ್ಲಿರುತ್ತಾರೆ.
ಆಯಾಯ ಜೀವರ ಸ್ವಭಾವದ ಅಭಿವ್ಯಕ್ತಿಯಾಗಲು ಅವರು ಸಂಸಾರಕ್ಕೆ ಬರಲೇಬೇಕು. ಸೃಷ್ಟಿಗೆ ಬಂದು ಸಂಸಾರವನ್ನು ದಾಟುವವರು ಉತ್ತಮರು. ಸಂಸಾರದಲ್ಲಿಯೇ ಉಳಿಯುವವರು ಮಧ್ಯಮರು. ಸಂಸಾರರಿಂದ ತಮಸ್ಸನ್ನು ಪಡೆಯುವವರು ಅಧಮರು.
Jayashree Karunakar,Bangalore
5:45 PM , 27/10/2017
ಗುರುಗಳೆ
೧. ಸ್ವರೂಪ ದೇಹಕ್ಕೂ, ಮುಕ್ತರ ದೇಹಕ್ಕೂ, ಮೋಕ್ಷದಲ್ಲಿರುವ ದೇಹಕ್ಕೂ ಎನು ವೆತ್ಯಾಸ ?
೨. ಜೀವನು ಎಷ್ಟು ಯೋನಿಗಳಲ್ಲಿ ಪ್ರಯಾಣ ಮಾಡಿ ಮೋಕ್ಷವನ್ನು ಪಡೆಯುತ್ತಾನೆ ? ಸ್ವರೂಪ ದೇಹದಲ್ಲಿರುವಾಗಲೇ ಅವನ ಪ್ರಯಾಣದ ರೀತಿಯು ನಿಗದಿಯಾಗಿರುತ್ತದೆ ಅಲ್ಲವೆ ?
ನಾವು ಊರಿಗೆ ಹೋಗುವಾಗ ನಡುವೆ ಸಿಗುವ ಯಾವ ಎಲ್ಲ ಸ್ಥಳಗಳ ಮೂಲಕ ನಾವು ಹೋಗುತ್ತೇವೆ ಅನ್ನುವ ಜ್ಞಾನ ಇರುವ ಹಾಗೆ ಅಲ್ಲವೆ?
೩.ಮೊದಲ ಯೋನಿ ಸಿಗುವುದು ಆರಂಭಿಕ ಕಮ೯ ಯಾವ ರೀತಿ ಇದೆಯೂ ಅದರಂತೆ ನಿಧಾ೯ರವಾಗುವದೇ ? ಅಂದರೆ ನಾವು ಮಾಡಿದ ಕಮ೯ವಲ್ಲ ಅಲ್ಲವೆ ?
Vishnudasa Nagendracharya
1. ಏನೂ ವ್ಯತ್ಯಾಸವಿಲ್ಲ..
2. ಜೀವರಾಶಿಯ ಸಮಗ್ರ ಯಾತ್ರೆಯೂ ಪೂರ್ವನಿರ್ಧಾರಿತ. ಆದರೆ ನಮಗೆ ಗೊತ್ತಿರುವದಿಲ್ಲ. ದೇವರಿಗೆ ಮತ್ತು ಋಜುದೇವತೆಗಳಿಗೆ ಮಾತ್ರ ಸಮಗ್ರವಾಗಿ ಗೊತ್ತಿರುತ್ತದೆ. ಉಳಿದ ದೇವತೆಗಳಿಗೂ ಸಹ ಬಹುತೇಕ ಪೂರ್ಣವಾಗಿ ತಿಳಿದಿರುತ್ತದೆ. ಇಷ್ಟೇ ಯೋನಿಗಳು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮನುಷ್ಯಜೀವರು ಪ್ರಾಯಃ ಎಲ್ಲ ಯೋನಿಗಳಲ್ಲಿಯೂ ಹುಟ್ಟಿ ಬಂದಿರುತ್ತೇವೆ.
3. ಆರಂಭಕಕರ್ಮದ ಕುರಿತು ಸಾಕಷ್ಟು ವಿವರಿಸಿ ತಿಳಿಸುವ ಅಗತ್ಯವಿದೆ. ಕಾಮೆಂಟುಗಳಲ್ಲಿ ಸಾಧ್ಯವಿಲ್ಲ. ಪ್ರತ್ಯೇಕ ಉಪನ್ಯಾಸ ಲೇಖನ ಆಗಬೇಕು. ಸೃಷ್ಟಿಪ್ರಕರಣದ ಕುರಿತು ಉಪನ್ಯಾಸ ಮಾಡುವ ಸಂದರ್ಭದಲ್ಲಿ ವಿವರಿಸುತ್ತೇನೆ.
Anilkumar B Rao,Bangalore
10:10 AM, 25/10/2017
ಆಚಾರ್ಯರಿಗೆ ಅನಂತ ನಮಸ್ಕಾರಗಳು. ಇವತ್ತು ಬಿಳಿಗ್ಗೆ ಈ 18ನೇ ಉಪನ್ಯಾಸ 2ನೇ ಬಾರಿ ಕೇಳಿದೆ. ಒಂದು ರೀತಿಯ ದಿವ್ಯ ಅನುಭವ. ನಾನು ಇಷ್ಟು ದಿನ 19 ವರ್ಷಗಳಿಂದ ಮಾಡ್ತಾ ಇರೊ engineer ಕೆಲಸ ಬಿಟ್ಟು ಸಂಪೂರ್ಣ ಶಾಸ್ತ್ರಾಧ್ಯಯನಕ್ಕೆ ಕುಳಿತುಕೋ ಬೇಕು ಅನ್ನೋ ಭಾವನೆ ಬರ್ತಾ ಇದೆ. ತಾವು ಮತ್ತು ತಮ್ಮ ಅಂತರ್ಯಾಮಿಯೇ ನನಗೆ ದಾರಿ ತೋರಿಸ ಬೇಕು. ಗುರುಭ್ಯೋ ನಮಃ.
Vishnudasa Nagendracharya
ದೇವರು ಅವಶ್ಯವಾಗಿ ದಾರಿ ತೋರಿಸುತ್ತಾನೆ. ಅವನನ್ನು ಪ್ರಾರ್ಥಿಸಿ.
P.R.SUBBA RAO,BANGALORE
6:30 PM , 08/10/2017
ಶ್ರೀ ಗುರುಭ್ಯೋನಮಃ
SB018-3: ಹಾಗೇಯೇ ಮಾಡುತ್ತೇನೆ ಗುರುಗಳೇ. ಒಂದು ಪುಸ್ತಕದಲ್ಲಿ ನೋಟ್ಸ್ ಬರೆಯಲಿಕ್ಕೆ ಶುರು ಮಾಡುತ್ತೇನೆ
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
P.R.SUBBA RAO,BANGALORE
8:16 PM , 07/10/2017
ಶ್ರೀ ಗುರುಭ್ಯೋನಮಃ
SB018: ಜೀವ ಮತ್ತು ಜೀವನ ಆರಂಭಿಕ ಕರ್ಮ ಇತ್ಯಾದಿ ಭಗವಂತನಿಂದ ನಿರ್ಮಿತವಾಗಿಲ್ಲ ಎಂದರೆ, ಮತ್ತೂ ಅವುಗಳು ಅನಾದಿ ಅಂದರೆ ಅದನ್ನು ನಿರ್ಮಿಸಿದವರು ಯಾರು ಎಂಬ ಪ್ರಶ್ನೆ ಬರುತ್ತದೆಯಲ್ಲ ಗುರುಗಳೇ? ನಾವು ಹಿಂದೆ ದೇವರ ಅಸ್ತಿತ್ವದ ಬಗ್ಗೆ ತಿಳಿಯುವಾಗ ಇದೇ ತರ್ಕ ಉಪಯೋಗಿಸಿದ್ದೆವಲ್ಲ? ಪ್ರಶ್ನೆಯಲ್ಲಿ ತಪ್ಪಿದ್ದರೆ ದಯಮಾಡಿ ಕ್ಷಮಿಸಿ
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
Vishnudasa Nagendracharya
ಅನಾದಿ ಎಂದರೇ ಕಾರಣವಿಲ್ಲದ್ದು ಎಂದರ್ಥ.
ದೇವರು ಹೇಗೆ ಅನಾದಿಯೋ ಹಾಗೆ ಕರ್ಮ, ಲಿಂಗಶರೀರ, ಜೀವ, ಲಕ್ಷ್ಮೀ, ಅವ್ಯಾಕೃತಾಕಾಶ, ಪ್ರಕೃತಿ, ವೇದಗಳು ಇವು ಅನಾದಿ ಪದಾರ್ಥಗಳು. ಇವುಗಳಿಗೆ ಕಾರಣವಿಲ್ಲ.
ಭಗವಂತನಂತೆ ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿವೆ.
ಎಲ್ಲದಕ್ಕೂ ಕಾರಣವಿದೆಯಾದ್ದರಿಂದ ದೇವರಿಗೂ ಕಾರಣವಿದೆ ಎಂದು ಪ್ರಶ್ನೆ ಮಾಡಿದಾಗ, ವೇದಗಳು ಹೇಳುತ್ತವೆ ದೇವರಿಗೆ ಕಾರಣವಿಲ್ಲ ಅವನು ಅನಾದಿ ಎನ್ನುವದು ಹೇಗೆ ಉತ್ತರವೋ, ಹಾಗೆ ಈ ಪದಾರ್ಥಗಳಿಗೆ ಕಾರಣವಿಲ್ಲ ಎಂದೇ ಶಾಸ್ತ್ರಗಳು ತಿಳಿಸುತ್ತವೆ ಎನ್ನುವದೇ ಉತ್ತರ.
P.R.SUBBA RAO,BANGALORE
8:07 PM , 07/10/2017
ಶ್ರೀ ಗುರುಭ್ಯೋನಮಃ
SB018: ಈ ಭಾಗವನ್ನು ಅರ್ಥ ಮಾಡಿ ಕೊಳ್ಳುವುದು ಕಷ್ಟ ಇದೆ. ಬಹಳ ಅರ್ಥಗರ್ಭಿತವಾಗಿದೆ. ಬಹಳ ಸಲ ಕೇಳಬೇಕು
ಏಳು ಆವರಣಗಳನ್ನು ಪ್ರತ್ಯೇಕವಾಗಿ ಮನನ ಮಾಡಬೇಕು ಎಂದೆನಿಸುತ್ತದೆ
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
Vishnudasa Nagendracharya
ಶ್ರೀಮದ್ ಭಾಗವತದ ಈ ಎಲ್ಲ ಪ್ರವಚನಗಳೂ ಕೇವಲ ಪ್ರವಚನದ ರೂಪದಲ್ಲಿಲ್ಲ. ಪಾಠಗಳ ರೂಪದಲ್ಲಿಯೂ ಇವೆ. ಪಾಠ-ಪ್ರವಚನದ ಮಿಶ್ರಣರೂಪವಿದು. ಕೇಳುವ ವಿಷಯಗಳನ್ನೆಲ್ಲ ನೀವೊಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡು ಮತ್ತೆ ಪ್ರವಚನ ಕೇಳಿದಲ್ಲಿ ನಿಮಗಿದು ಪೂರ್ಣ ಪ್ರಮಾಣದ ಪಾಠವಾಗುತ್ತದೆ. ವಿಷಯಗಳು ಸ್ಪಷ್ಟವಾಗುತ್ತವೆ.
Meera gj,Bangalore
3:03 PM , 03/10/2017
A problem well understood is half solved antha helthare jeevaanadalli idda didda samasyeendare tappu endu teledaru yake tappu maduvevu adhare e bhavaroopi agjnanadakuritu keledada samasye gottayitu innu idannu saremadu ende devarannu prartisabeku
Vishnudasa Nagendracharya
You have understood it perfectly.
H. Suvarna kulkarni,Bangalore
12:28 AM, 18/09/2017
ಪೂಜ್ಯರೇ ಪ್ರತಿಯೊಬ್ಬ ಜೀವನು ಉತ್ತಮ ಸಾಧನೆ ಮಾಡಲು ಒಳ್ಳೆಯ ಯೋಗ್ಯತೆ ಪಡೆಯಲು ಯಾವರೀತಿಯ ಪ್ರಯತ್ನ ಮಾಡಬೇಕು. ತಿಳಿಸಿ ಕೊಡಿ ಧನ್ಯವಾದಗಳು
Vishnudasa Nagendracharya
ನಿರಂತರ ಹರಿಸ್ಮರಣೆ
ಪರೋಪಕಾರಾದಿ ಸದ್ಧರ್ಮಗಳು
ತೀರ್ಥಕ್ಷೇತ್ರಗಳ ಸೇವನೆ
ಮಹಾಗುರುಗಳ ಸೇವೆ
ಶಾಸ್ತ್ರಗಳ ನಿರಂತರ ಅಧ್ಯಯನ
ನಿರಂತರ ಭಗವತ್ಪೂಜೆ
ಶಾಸ್ತ್ರೋಕ್ತಕರ್ಮಗಳ ಅನುಷ್ಠಾನ
ಇವು ನಮ್ಮ ಸ್ವರೂಪಯೋಗ್ಯತೆಯನ್ನು ಅಭಿವ್ಯಕ್ತಗೊಳಿಸುವ ದಿವ್ಯಸಾಧನಗಳು.
SRINIDHI,Bengaluru
9:54 PM , 16/09/2017
Kva Sudha kva kathaa loke, kva kachah kVA manirmahaan...
Srikanth Joshi,Hyderabad
6:59 PM , 16/09/2017
Gurugalige Namaskara . Nimma ee pravachana kelida mele manasina endigu muttada jagadalli muttida Hosa anubhava.
Jayashree Karunakar,Bangalore
1:43 PM , 16/09/2017
ಗುರುಗಳೆ
೧.ಉಪಾಧಿ ಶಬ್ದದ ಅಥ೯ವೇನು
ಇದು ಜೀವನಿಗೆ ಬಿಂಬರೂಪನಾದ ಪರಮಾತ್ಮನೀಡಿದ್ದೇ
೨. ಆರಂಭಿಕ ಕಮ೯ವು ಭಗವಂತನ ಅಧೀನವಲ್ಲವೇ
ಅದು ದುಷ್ಟ ಕಮ೯ವ ಅಥವ ಒಳ್ಳೆಯ ಕಮ್೯ವ. ಅದನ್ನು ಕಾರಣವಿಲ್ಲದೆ ನಮ್ಮಿಂದ ಮಾಡಿಸಿದ್ದೆ ?
ಮುಂದೆ ಅನುಭವಿಸುವುದೆಲ್ಲವೂ ಇದರ ಫಲವೆ ಅಲ್ಲವೇ.
ಹಾಗಾದರೆ ನಮ್ಮ ಕಮ೯ಕ್ಕೆ ನಾವೆ ಹೊಣೆ ಹೇಗಾಗುತ್ತದೆ
Vishnudasa Nagendracharya
ಉಪಾಧಿ ಎಂದರೆ Medium.
ಬಿಂಬದ ಪ್ರತಿಬಿಂಬ ಕಾಣಬೇಕಾದರೆ ಕನ್ನಡಿಯೆಂಬ Medium ಬೇಕು. ಇಲ್ಲಿ ಕನ್ನಡಿ ಉಪಾಧಿ.
ಹಾಗೆ ಜೀವನು ಶ್ರೀಹರಿಯ ಪ್ರತಿಬಿಂಬನಾಗಬೇಕಾದರೂ ಒಂದು ಉಪಾಧಿ ಬೇಕು. ಇಲ್ಲಿ ಜೀವನೇ ಉಪಾಧಿ, ಜೀವನೇ ಪ್ರತಿಬಿಂಬ. ( ಎರಡೂ ಒಂದೇ ಹೇಗಾಗುತ್ತದೆ ಎನ್ನುವದು ತುಂಬ ವಿಸ್ತಾರವಾಗಿ ಅರ್ಥ ಮಾಡಿಸಬೇಕಾದ ವಿಷಯ, ಗೀತೆಯ ಎರಡನೆಯ ಅಧ್ಯಾಯದ ಉಪನ್ಯಾಸವನ್ನು ಮಾಡಬೇಕಾದರೆ ಅಥವಾ ಸ್ವಾಧ್ಯಾಯಸುರಭಿಯಲ್ಲಿ ಇದನ್ನು ವಿವರಿಸುತ್ತೇನೆ.)
ಜೀವವೇ ಉಪಾಧಿಯಾದ್ದರಿಂದ ಉಪಾಧಿ ದೇವರಿಂದ ನಿರ್ಮಿತವಾದದ್ದಲ್ಲ.
ಬೇರೆ ಬೇರೆ ಪದಾರ್ಥಗಳ ಕುರಿತು ಭಗವಂತನ ಅಧೀನವಲ್ಲವೇ ಎಂದು ನೀವು ಅನೇಕ ಬಾರಿ ಪ್ರಶ್ನೆ ಕೇಳಿದ್ದೀರಿ. ಸಂಶಯವೇ ಇಲ್ಲ. ಜಗತ್ತಿನ ಸಕಲ-ಸಕಲ ಪದಾರ್ಥಗಳೂ ಶ್ರೀಹರಿಯ ಅಧೀನವೇ. ಆದರೆ ಎಲ್ಲವೂ ಶ್ರೀಹರಿಯಿಂದ ನಿರ್ಮಿತವಾಗಬೇಕಾಗಿಲ್ಲ. (ಲಿಂಗದೇಹದ ಕುರಿತ ಕಾಮೆಂಟಿಗೆ ಉತ್ತರಿಸಬೇಕಾದರೆ ವಿವರಿಸಿದ್ದೇನೆ.)
ಆ ಆರಂಭಿಕ ಕರ್ಮ, ಲಿಂಗದೇಹದಂತೆ ಅನಾದಿಯಾದದ್ದು. ಅನಾದಿ ಎಂದರೇ ಕಾರಣವಿಲ್ಲದ್ದು. ದೇವರು, ಜೀವರು, ಪ್ರಕೃತಿ, ಕಾಲ, ಆಕಾಶ, ಆರಂಭಿಕಕರ್ಮ ಮುಂತಾದ ಅನೇಕ ಪದಾರ್ಥಗಳು ಅನಾದಿ. ಅಂದರೆ ಕಾರಣರಹಿತವಾದದ್ದು.
ನಮ್ಮ ಸ್ವಭಾವದಲ್ಲಿಯೇ ನಾವೊಮ್ಮೆ ಸಂಸಾರಕ್ಕೆ ಬಂದು ಮುಕ್ತರಾಗಬೇಕು ಎಂಬ ಗುಣವಿರುವದರಿಂದ ಎಲ್ಲದಕ್ಕೂ ನಾವೇ ಹೊಣೆ. ದೇವರು ಒಳಗೆ ನಿಂತ ಪ್ರೇರಕಶಕ್ತಿ.
Shantha.raghothamachar,Bangalore
12:14 PM, 16/09/2017
ನಮಸ್ಕಾರ ಗಳು. ಇದು ಪರ್ವಕಾಲ ಇದು ಪವಿತ್ರ ವಾದಕಾಲ.ನಿಮ್ಮ ನಿಮಿತ್ತ ದಿಂದನಮ್ಮ ಉದ್ದಾರ ವಾಗುತ್ತಿದೆ ಈ ಮಾತನ್ನು ಹೇಳುವಾಗ ಕಂಠಗದ್ಘದಿತವಾಗುತ್ತದೆ.ಆಚಾರ್ಯ ರೇ ಪ್ರತಿ ಜೀವವೂ ೮೪ ಲಕ್ಷ ಯೋನಿ ಯಲ್ಲಿ ಹುಟ್ಟಿ ಬರಬೇಕೆಂದು ಶಾಸ್ತ್ರ ಹೇಳುತ್ತದೆ ಯೆ?
Vishnudasa Nagendracharya
ಪ್ರತಿಯೊಬ್ಬ ಜೀವನೂ 84 ಲಕ್ಷಯೋನಿಗಳಲ್ಲಿ ಹುಟ್ಟಿ ಬರುವದಿಲ್ಲ. ಪಿಶಾಚಯೋನಿಯೂ ಒಂದು ಯೋನಿ. ಬ್ರಹ್ಮಾದಿಗಳಿಗೆ ಅದು ಇಲ್ಲವೇ ಇಲ್ಲ.
ಯಾವುದೇ ರೀತಿಯ ಯೋನಿಯೂ ಕರ್ಮದಿಂದಲೇ ಬರುವಂತದ್ದು. ಅದರಲ್ಲಿ ಬಹುತೇಕ ಯೋನಿಗಳು ಪಾಪಕರ್ಮದಿಂದಲೇ ಬರುವಂತಹುದ್ದು. ಉತ್ತಮೋತ್ತಮ ಜೀವರಲ್ಲಿ ಪಾಪಕರ್ಮಗಳು ತುಂಬ ಕಡಿಮೆ, ಹೀಗಾಗಿ ಆ ಯೋನಿಗಳೇ ಬರುವದಿಲ್ಲ. ಜೀವನ ಯೋಗ್ಯತೆ ಸಣ್ಣದಾಗುತ್ತಿದ್ದಂತೆ ಪಾಪಕರ್ಮಗಳು ಅಧಿಕವಾಗುತ್ತವೆ. ಹೀಗಾಗಿ ಯೋನಿಗಳೂ ಅಧಿಕವಾಗುತ್ತವೆ.
P N Deshpande,Bangalore
11:55 AM, 16/09/2017
Most invaluable pravachan.cant describe by words.A great Guru.
Harikrishna B L,Haveri
9:03 AM , 16/09/2017
Gurugale, your Bhagavat disourses have become a part of our life. My day doesnt start without your pravachan. We are indebted you forever for giving such great knowledge.
This particular pravachan ssems like an ocean to me. We are learning new things every day.
Vishnudasa Nagendracharya
ಶ್ರೀಮದ್ ಭಾಗವತದ ಪ್ರವಚನಗಳು ಎಲ್ಲ ಸಜ್ಜನರಿಗೂ ತಲುಪುತ್ತಿರುವದು, ಪರಿಣಾಮವನ್ನುಂಟು ಮಾಡುತ್ತಿರುವದು ತುಂಬ ಸಂತೋಷವನ್ನು ನೀಡುತ್ತಿದೆ.
ಶ್ರೀ ಹರಿ-ವಾಯು-ದೇವತಾ-ಗುರುಗಳ ಕರುಣೆ ಹೀಗೆಯೇ ನಮ್ಮೆಲ್ಲರ ಮೇಲಿರಲಿ. ನಾವೆಲ್ಲರೂ ನಿರಂತರವಾಗಿ ಭಾಗವತಕಥಾಮೃತದಲ್ಲಿ ಆಸಕ್ತರಾಗಿರುವಂತೆ ನಮ್ಮನ್ನು ಅನುಗ್ರಹಿಸಲಿ.
Sangeetha prasanna,Bangalore
9:15 AM , 16/09/2017
ಹರೇ ಶ್ರೀನಿವಾಸ .ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .ಎಷ್ಟೋ ಜನ್ಮಗಳ ಪುಣ್ಯದ ಫಲವಾಗಿ ನಮಗೆ ಈ ಭಾಗವತ ಶ್ರವಣದ ಅನುಗ್ರಹವಾಗುತ್ತಿದೆ .ಈ ತರಹದ ವ್ಯಾಖ್ಯಾನವನ್ನು ಮೊದಲ ಬಾರಿ ಕೇಳುವ ಸೌಭಾಗ್ಯ ನಮಗೆ ದೇವರ ಅನುಗ್ರಹವಾಗಿ ಒದಗಿ ಬಂದಿದೆ .🙏🙏🙏🙏
Vishnudasa Nagendracharya
ಈ ಎಲ್ಲವೂ ಶ್ರೀಯಾದವಾರ್ಯರು, ಶ್ರೀವಿಜಯಧ್ವಜತೀರ್ಥಶ್ರೀಪಾದಂಗಳವರು ಮುಂತಾದ ಸಮಸ್ತ ಗುರುಗಳ ಅಂತರ್ಯಾಮಿಯಾದ ಮಧ್ವವಲ್ಲಭ ಶ್ರೀ ವೇದವ್ಯಾಸದೇವರ ಅನುಗ್ರಹ. ಅವರು ಬರೆದಿಟ್ಟ ಗ್ರಂಥಗಳಲ್ಲಿನ ಲೇಶಾಂಶದ ಚಿಂತನೆಯಿದು. ಅವರು ಕರುಣಿಸಿದ ಜ್ಞಾನದಿಂದ, ಅವರ ಅನುಗ್ರಹದ ಶಕ್ತಿ ಯಿಂದ ಈ ಕಾರ್ಯ ನಡೆಯುತ್ತಿದೆ.