20/09/2017
ವೇದ-ಪುರಾಣ-ಸ್ಮೃತಿಗಳ ಪರಸ್ಪರ ಸಮನ್ವಯ ಹೇಗೆ? ವೇದಗಳು ಅತ್ಯಂತ ಕ್ಲಿಷ್ಟವಾದ ಶಬ್ದಗಳಿಂದ ಕೂಡಿವೆ, ಪುರಾಣಗಳು ವಿರುದ್ಧವಾದ ಕಥೆ ವಿಷಯಗಳಿಂದ ಕೂಡಿವೆ. ಸ್ಮೃತಿಗಳು ವಿರುದ್ಧವಾದ ಆಚರಣೆಗಳಿಂದ ಕೂಡಿವೆ. ಏಕೆ ಹೀಗೆ ನಿರೂಪಣೆಯಾಗಿವೆ, ಮತ್ತು ಇವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಕ್ರಮವೇನು ಎನ್ನುವ ಪ್ರಶ್ನೆಗೆ ಮುನಿತ್ರಯರು ತಮ್ಮ ಗ್ರಂಥಗಳಲ್ಲಿ ಅದ್ಭುತವಾದ ಉತ್ತರವನ್ನು ಮತ್ತು ಕ್ರಮವನ್ನು ತೋರಿಸಿಕೊಟ್ಟಿದ್ದಾರೆ. ಆವರ ವಚನಗಳ ವಿವರಣೆ ಇಲ್ಲಿದೆ, ದೃಷ್ಟಾಂತಗಳೊಂದಿಗೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋ “ಅನ್ವಯಾತ್” ಇತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯ — ಅನ್ವಯಾತ್ । ಯತೋ ವಾ ಇಮಾನಿ ಭೂತಾನಿ ಇತ್ಯಾದಿ ಶ್ರುತಿಸ್ಮೃತಿಭ್ಯಃ । “ಸೃಷ್ಟಿಸ್ಥಿತ್ಯಪ್ಯಯೇಹಾದೇಃ “ಶ್ರುತಿಸ್ಮೃತಿಸಮನ್ವಯಾತ್”। ಯುಕ್ತಿತಶ್ಚೇತ್ತೃಪೂರ್ವಾದೇಃ ಶ್ರೀಬ್ರಹ್ಮಭವಪೂರ್ವಿಣಃ। ಸುರಗಂಧರ್ವಮನುಜಪಿತೃದೈತ್ಯಾತ್ಮನಃ ಪೃಥಕ್ । ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾನ್ನಚಾಪರಃ।
Play Time: 49:01
Size: 6.50 MB