21/09/2017
ಸರಿಯಾಗಿ ನಿರ್ಣಯಿಸಲ್ಪಟ್ಟ ವೇದಾದಿಶಾಸ್ತ್ರಗಳಿಂದ ದೇವರನ್ನು ತಿಳಿಯಬೇಕು, ಆ ವೇದಶಾಸ್ತ್ರದ ಬೆಂಬಲವಿರುವ ಯುಕ್ತಿಯಿಂದಲೂ ದೇವರನ್ನು ತಿಳಿಯಬಹುದು ಎಂದು ಶ್ರೀ ವೇದವ್ಯಾಸದೇವರು ಅನ್ವಯಾತ್ ಇತರತಃ ಎಂಬ ಶಬ್ದಗಳಿಂದ ತಿಳಿಸುತ್ತಿದ್ದಾರೆ. ಇಲ್ಲಿ ಯುಕ್ತಿ ಎಂದು ಹೇಳಲು ಬಳಸಿದ ಶಬ್ದ ಇತರತಃ ಎಂದು. ಇತರ ಎಂದರೆ ಬೇರೆಯದು ಎಂದರ್ಥ. ಇಲ್ಲಿ ಯುಕ್ತಿಯೇ ಎಂದು ಆ ಶಬ್ದಕ್ಕೆ ಹೇಗೆ ಅರ್ಥವಾಗುತ್ತದೆ ಮತ್ತು ತರ್ಕವನ್ನು ಪ್ರಮಾಣ ಎಂದು ಹೇಗೆ ಒಪ್ಪುವದು ಎನ್ನುವ ಪ್ರಶ್ನೆಗಳಿಗೆ ಉತ್ತರವಿದೆ. ತರ್ಕದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಹೀಗಾಗಿ ತರ್ಕ ಪ್ರಮಾಣವಲ್ಲ ಎನ್ನುವದು ಕೆಲವರ ವಾದ. ಯುಕ್ತಿಯಿಂದಲೇ ಯುಕ್ತಿಯನ್ನು ನಿರಾಕರಣೆ ಮಾಡಹೊರಟ ಈ ಜನರ ಮಾತಿಗೆ ಆಚಾರ್ಯರು ನೀಡಿರುವ ದಿವ್ಯವಾದ ಉತ್ತರಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋsನ್ವಯಾತ್ “ಇತರತಃ” ಚಾರ್ಥೇಷ್ವಭಿಜ್ಞಃ ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯ — ಇತರತಃ । ತರ್ಕತಃ । ಸೃಷ್ಟಿಸ್ಥಿತ್ಯಪ್ಯಯೇಹಾದೇಃ ಶ್ರುತಿಸ್ಮೃತಿಸಮನ್ವಯಾತ್। “ಯುಕ್ತಿತಶ್ಚೇತ್ತೃಪೂರ್ವಾದೇಃ” ಶ್ರೀಬ್ರಹ್ಮಭವಪೂರ್ವಿಣಃ। ಸುರಗಂಧರ್ವಮನುಜಪಿತೃದೈತ್ಯಾತ್ಮನಃ ಪೃಥಕ್ । ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾನ್ನಚಾಪರಃ।
Play Time: 40:16
Size: 7.36 MB