23/09/2017
“ಅರ್ಥೇಷು ಅಭಿಜ್ಞಃ” ಎಂಬ ಶ್ರೀ ವೇದವ್ಯಾಸದೇವರ ವಚನದ ಅರ್ಥವಿವರಣೆ ಮತ್ತು ಆ ತತ್ವವನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಕ್ರಮವನ್ನು ವಿವರಿಸುವ ಭಾಗ. ದೇವರು ಜಗತ್ತಿಗೆ ಸೃಷ್ಟ್ಯಾದಿಗಳನ್ನು ನೀಡುತ್ತಾನೆ ಎನ್ನುವದನ್ನು ಶಾಸ್ತ್ರಗಳ ಬೆಂಬಲವಿರುವ ಯುಕ್ತಿಗಳಿಂದ ತಿಳಿಯಬಹುದು ಎಂದು ವೇದವ್ಯಾಸದೇವರು ತಿಳಿಸಿದರು. ಆಗ ಪ್ರಶ್ನೆ ಮೂಡುತ್ತದೆ — ಕುಂಬಾರನಿಗೆ ಮಡಿಕೆ ನಿರ್ಮಾಣ ಮಾಡುವ ಜ್ಞಾನ ಮಾತ್ರ ಇರುತ್ತದೆ. ಆ ಮಡಿಕೆಯನ್ನು ಯಾರು ಕೊಳ್ಳುತ್ತಾರೆ, ಏನು ಮಾಡುತ್ತಾರೆ, ಆ ಮಡಿಕೆ ಮುಂದೇನಾಗುತ್ತದೆ ಇತ್ಯಾದಿ ಜ್ಞಾನಗಳಿರುವದಿಲ್ಲ. ದೇವರು ಕುಂಬಾರನಂತಾದರೆ ಅವನೂ ಸಹ ಕುಂಬಾರನಂತೆ ಅಸರ್ವಜ್ಞನಾಗಬೇಕಾಗುತ್ತದೆ ಎಂದು. ಈ ಪ್ರಶ್ನೆಗೆ ಭಾಗವತ ಮತ್ತು ಭಾಗವತತಾತ್ಪರ್ಯಗಳು ನೀಡುವ ಉತ್ತರದ ಅನುಸಂಧಾನ ಈ ಉಪನ್ಯಾಸದಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋsನ್ವಯಾದಿತರತಃ ಚ “ಅರ್ಥೇಷ್ವಭಿಜ್ಞಃ” ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯ — ಅಭಿಜ್ಞಃ ಸರ್ವಜ್ಞಃ । ಅತೋ ಯುಜ್ಯತೇ । “ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾತ್”
Play Time: 51:12
Size: 6.50 MB