24/09/2017
ಬೇರೆಯವರ ಸರ್ವಜ್ಞತ್ವವನ್ನು ಯುಕ್ತಿಯಿಂದ ಪ್ರತಿಪಾದಿಸಲು ಸಾಧ್ಯವಿಲ್ಲ, ಆದರೆ ವೇದಗಳು ತಿಳಿಸುವ ಭಗವಂತನ ಸರ್ವಜ್ಞತ್ವವನ್ನು ಯುಕ್ತಿಯಿಂದಲೂ ನಿರ್ಣಯ ಮಾಡಿಕೊಳ್ಳಲು ಸಾಧ್ಯ ಎಂಬ ವಿಷಯದ ನಿರೂಪಣೆ ಇಲ್ಲಿದೆ. ಜಗತ್ತಿನ ಎಲ್ಲ ಮತದವರು ಹೇಳುವ ಮಾತು — ನಮ್ಮ ಮೂಲಪುರುಷರಾದ ಗುರುಗಳು ಸರ್ವಜ್ಞರು, ಆದ್ದರಿಂದ ನಮ್ಮ ಮತ ಸತ್ಯ ಎಂದು. ಈ ಮಾತಿಗೆ ಭಗವತ್ಪಾದರು ಅನುವ್ಯಾಖ್ಯಾನದಲ್ಲಿ ನೀಡಿರುವ ಉತ್ತರದ ಸಂಗ್ರಹ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — ಜನ್ಮಾದ್ಯಸ್ಯ ಯತೋsನ್ವಯಾದಿತರತಃ ಚ “ಅರ್ಥೇಷ್ವಭಿಜ್ಞಃ” ಸ್ವರಾಟ್ ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ । ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। ಭಾಗವತತಾತ್ಪರ್ಯ — ಅಭಿಜ್ಞಃ ಸರ್ವಜ್ಞಃ । ಅತೋ ಯುಜ್ಯತೇ । “ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾತ್”
Play Time: 29:05
Size: 5.44 MB