26/09/2017
ಮೊದಲ ಪದ್ಯದಲ್ಲಿನ “ಸ್ವರಾಟ್” ಎಂಬ ಶಬ್ದದ ಅರ್ಥಾನುಸಂಧಾನ. ಒಂದು ಮಡಿಕೆ ನಿರ್ಮಾಣ ಮಾಡಲು ಗಾಳಿ ಮಳೆ ಚಳಿಯಿಂದಾರಂಭಿಸಿ ನೂರು ವಿಘ್ನಗಳಿವೆ. ಒಂದು ಸಣ್ಣ ಮನೆ ಕಟ್ಟಲು ಸಾವಿರ ಸಮಸ್ಯೆಗಳಿವೆ. ಕೇವಲ ಮನುಷ್ಯರಿಗಲ್ಲ, ದೇವತೆಗಳಿಗೂ ಸಹ ವಿಘ್ನಗಳು ಸಮಸ್ಯೆಗಳು ಇದ್ದದ್ದು ಕಂಡಿದೆ. ಎಲ್ಲರೂ ಮತ್ತೊಬ್ಬರ ಅಧೀನರೇ. ಅಂದಮೇಲೆ ಇಂತಹ ದೊಡ್ಡ ಬ್ರಹ್ಮಾಂಡವನ್ನು ನಿರ್ಮಾಣ ಮಾಡಿದ ದೇವರು ಎಲ್ಲರಿಗಿಂತ ಹೆಚ್ಚು ಕಷ್ಟ ಪಟ್ಟಿರಬೇಕಲ್ಲವೇ? ಎನ್ನುವ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ನೀಡಿದ, ಶ್ರೀಮದಾಚಾರ್ಯರು ವಿವರಿಸಿದ ಉತ್ತರದ ನಿರೂಪಣೆ ಇಲ್ಲಿದೆ. ದೇವರ ಸ್ವಾತಂತ್ರ್ಯವನ್ನು ಪ್ರತೀನಿತ್ಯ ಚಿಂತನೆ ಮಾಡುವ ಕ್ರಮ, ಅದರಿಂದ ಉಂಟಾಗುವ ಮಹತ್ತರ ಪ್ರಯೋಜನಗಳ ವಿವರಣೆಯೊಂದಿಗೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — जन्माद्यस्य यतोन्वयादितरतः शास्त्रेष्वभिज्ञः “स्वराट्” तेने ब्रह्म हृदा य आदिकवये मुह्यन्ति यं सूरयः । तेजोवारिमृदां यथा विनिमयो यत्र त्रिसर्गो मृषा धाम्ना स्वेन सदा निरस्तकुहकं सत्यं परं धीमहि ।।1।। ಭಾಗವತತಾತ್ಪರ್ಯ — “यं कामये तं तमुग्रं कृणोमि” “मम योनिः” इत्यन्येषां तदपेक्षत्वात् । न चान्यापेक्षोसौ । स्वराट् । अनन्याधिपतिश्चासौ गरीयान् ब्रह्मणो यतः।
Play Time: 48:34
Size: 6.50 MB