30/09/2017
ದೇವರು ತನಗಾಗಿ ಸೃಷ್ಟಿ ಮಾಡಿದರೆ ಅಪರಿಪೂರ್ಣನಾಗುತ್ತಾನೆ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದರೆ, ಮತ್ತೊಬ್ಬರಿಗೆ ಸುಲಭವಾಗಿ ಫಲವನ್ನು ನೀಡಲಿಕ್ಕಾಗದೆ ಇಷ್ಟೆಲ್ಲ ಮಹಾಪ್ರಯತ್ನದ ಸೃಷ್ಟ್ಯಾದಿಗಳನ್ನು ಮಾಡುತ್ತಾನೆ ಎಂದಾಗುತ್ತದೆ. ಎರಡೂ ಪಕ್ಷದಲ್ಲಿಯೂ ಅವನು ಅಪರಿಪೂರ್ಣ, ಅಸ್ವತಂತ್ರ, ಅಸರ್ವಜ್ಞ ಎಂದೇ ಸಿದ್ಧವಾಗುತ್ತದೆ ಎಂಬ ಪ್ರಶ್ನೆಗಳಿಗೆ ಭಾಗವತ ನೀಡಿರುವ ದಿವ್ಯ ಉತ್ತರಗಳ ಸಂಗ್ರಹ ಇಲ್ಲಿದೆ. ಪ್ರಯೋಜನವಿಲ್ಲದೇ ಯಾರೂ ಯಾವ ಕಾರ್ಯವನ್ನೂ ಮಾಡುವದಿಲ್ಲ. ಮನುಷ್ಯ ಕುಳಿತಲ್ಲಿಂದ ಅಲ್ಲಾಡಬೇಕಾದರೂ ಅವನಿಗೊಂದು ಪ್ರಯೋಜನ ಬೇಕು. ಹೀಗಾಗಿ ದೇವರು ಮಾಡುವ ಈ ಸೃಷ್ಟ್ಯಾದಿಗಳಿಂದ ಅವನಿಗೇನಾದರೂ ಪ್ರಯೋಜನವಿರಲೇಬೇಕು. ಇರದೇ ಇರಲು ಸಾಧ್ಯವೇ ಇಲ್ಲ. ಪ್ರಯೋಜನವಿದೆ ಎಂದಾದರೆ ಆ ಫಲವನ್ನು ಅವನು ಪಡೆದಿಲ್ಲ, ಪಡೆಯುವದಕ್ಕಾಗಿ ಸೃಷ್ಟಿ ಮಾಡುತ್ತಿದ್ದಾನೆ ಎಂತಾಗುತ್ತದೆ. ಆ ಫಲ ಅವನ ಬಳಿ ಮೊದಲೇ ಇಲ್ಲ ಎಂದಾದರೆ ಅವನು ಅಪರಿಪೂರ್ಣ ಎಂದಾಯಿತು. ಆ ಫಲವನ್ನು ಪಡೆಯುವ ಜ್ಞಾನ ಮತ್ತು ಶಕ್ತಿ ಎರಡೂ ಅವನ ಬಳಿ ಇಲ್ಲ ಎಂದಾಯಿತು. ಅಂದ ಮೇಲೆ ಅವನು ಸರ್ವಜ್ಞನೂ ಅಲ್ಲ, ಸ್ವತಂತ್ರನೂ ಅಲ್ಲ ಎಂದಾಯಿತು. ಸರ್ವಜ್ಞನಾಗದೇ ಇದ್ದರೆ ಸ್ವತಂತ್ರನಾಗದೇ ಇದ್ದರೆ ಸೃಷ್ಟ್ಯಾದಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನೀವೇ ಒಪ್ಪಿರುವ ಕಾರಣ ದೇವರು ಜಗಜ್ಜನ್ಮಾದಿ ಕಾರಣನಲ್ಲ ಎಂದೇ ನಿರ್ಣಯವಾಗುತ್ತದೆ ಎಂಬ ಪ್ರಶ್ನೆಗೆ, ಹಾಗೂ ದೇವರು ತನಗಾಗೇನೂ ಸೃಷ್ಟಿ ಮಾಡುವದಿಲ್ಲ, ಮತ್ತೊಬ್ಬರಿಗಾಗಿ ಸೃಷ್ಟಿ ಮಾಡುತ್ತಾನೆ ಎಂದಾದಲ್ಲಿ, ಅವರು ಬಯಸುವ ಫಲವನ್ನು ಸುಲಭವಾಗಿ ನೀಡುವ ಸಾಮರ್ಥ್ಯವಿಲ್ಲದೆ ಇಷ್ಟೆಲ್ಲ ಮಹಾಪ್ರಯತ್ನ ಮಾಡಿ ಸೃಷ್ಟ್ಯಾದಿಗಳನ್ನು ಮಾಡಿರುವದರಿಂದಲೂ ಅವನು ಸರ್ವಜ್ಞನಲ್ಲ, ಸ್ವತಂತ್ರನಲ್ಲ ಎಂದೇ ಸಿದ್ಧವಾಗುತ್ತದೆ, ಎಂಬ ಆಕ್ಷೇಪಕ್ಕೆ ಶ್ರೀ ವೇದವ್ಯಾಸದೇವರು ನೀಡಿರುವ ಮತ್ತು ಶ್ರೀಮದಾಚಾರ್ಯರು ಸಮರ್ಥಿಸಿರುವ ದಿವ್ಯ ಉತ್ತರಗಳ ನಿರೂಪಣೆ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — जन्माद्यस्य यतोन्वयादितरतश्चार्थेष्वभिज्ञः स्वराट् तेने ब्रह्म हृदा य आदिकवये मुह्यन्ति यं सूरयः। “तेजोवारिमृदां यथा विनिमयो यत्र त्रिसर्गो मृषा” धाम्ना स्वेन सदा निरस्तकुहकं सत्यं परं धीमहि ।।1।। ಭಾಗವತತಾತ್ಪರ್ಯ — न चातृप्तः प्रवर्तते । किन्तु मृषा वृथैव । “भित्वा मृषाश्रुः” इतिवत् । “देवस्यैष स्वभावोयम्” इति च । यत्रेतिविशेषणान्नान्यत्र । स्वविषय एव वृथा । जीवेश्वरजडानां सर्गस्त्रिसर्गः । एकस्य तेजसो बहुत्ववदीश्वरसर्गः । वारिनिमित्तप्रतिबिम्बवज्जीवसर्गः । मृदो घटादिवदव्यक्ताज्जडसर्गः । तेजसो रूपवद्रूपं बहुधा कुरुते हरिः । वारिस्थतेजःप्रतिमा जीवास्तस्माद् विनिर्गताः ।। कुलालेन मृदा यद्वन्निर्मीयन्ते घटादयः । विष्णुनैवं प्रकृत्यैव निर्म्यते जगदीदृशम् ।। एष त्रिसर्गो विष्णोस्तु वृथा लोकस्य चावृथा ।
Play Time: 50:09
Size: 1.88 MB