30/09/2017
ಮೃಷಾ ಎನ್ನುವಶಬ್ದಕ್ಕೆ ವ್ಯರ್ಥ ಎನ್ನುವ ಅರ್ಥವನ್ನು ಹೇಳಿ ಆಚಾರ್ಯರು ದೇವರಿಗೆ ಸೃಷ್ಟಿಯಿಂದ ಪ್ರಯೋಜನವಿಲ್ಲ ಎನ್ನುವದನ್ನು ಪ್ರತಿಪಾದಿಸುತ್ತಾರೆ. ಮೃಷಾ ಎನ್ನುವದಕ್ಕೆ ಸುಳ್ಳು ಎನ್ನುವ ಅರ್ಥ ಪ್ರಸಿದ್ಧ, ವ್ಯರ್ಥ ಎನ್ನುವದು ಹೇಗೆ ಅರ್ಥವಾಗಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದ್ ಭಾಗವತದಿಂದಲೇ ಆಚಾರ್ಯರು ನಮಗೆ ಉತ್ತರ ನೀಡುತ್ತಾರೆ. ಆ ವಾಕ್ಯದ ವಿವರಣೆ ಹಾಗೂ ಈ ಜಗತ್ತೆಲ್ಲವೂ ಸುಳ್ಳು ಯಾಕಾಗಿರಬಾರದು ಎನ್ನುವ ಪ್ರಶ್ನಗೆ ಮೊದಲಶ್ಲೋಕ ನೀಡುವ ಉತ್ತರಗಳ ಸಂಗ್ರಹ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — जन्माद्यस्य यतोन्वयादितरतः शास्त्रेष्वभिज्ञः स्वराट् तेने ब्रह्म हृदा य आदिकवये मुह्यन्ति यं सूरयः। तेजोवारिमृदां यथा विनिमयो यत्र त्रिसर्गो “मृषा” धाम्ना स्वेन सदा निरस्तकुहकं सत्यं परं धीमहि ।।1।। ಭಾಗವತತಾತ್ಪರ್ಯ — मृषा वृथैव । “भित्वा मृषाश्रुः” इतिवत् । एष त्रिसर्गो विष्णोस्तु वृथा लोकस्य चावृथा ।
Play Time: 33:52
Size: 6.26 MB