01/10/2017
ಮೂಲರೂಪದ ಪರಮಾತ್ಮ ಏನು ಅನಂತ ರೂಪಗಳನ್ನು ಸ್ವೀಕರಿಸುತ್ತಾನೆ ಅದನ್ನು ಶುದ್ಧಸೃಷ್ಟಿ ಎನ್ನುತ್ತಾರೆ. ನಾವು ಹಿಂದೆ ತಿಳಿದ ನಾಲ್ಕು ವಿಧವಾದ ಸೃಷ್ಟಿಯೂ ದೇವರಲ್ಲಿಲ್ಲ, ಅವನದು ಕೇವಲ ಪ್ರಾದುರ್ಭಾವ. ಆ ಪ್ರಾದುರ್ಭಾವದ ಬಗೆಯನ್ನು ಆಚಾರ್ಯರು ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಅದರ ವಿವರಣೆ ಇಲ್ಲಿದೆ. ಒಂದು ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಪರಮಾತ್ಮ ಪ್ರಾದುರ್ಭೂತನಾಗುತ್ತಾನೆ ಎನ್ನುತ್ತಾರೆ ವೇದವ್ಯಾಸದೇವರು ಮತ್ತು ಶ್ರೀಮದಾಚಾರ್ಯರು. ಶ್ರೀವಿಜಯಧ್ವಜತೀರ್ಥಶ್ರೀಪಾದಂಗಳವರು ಈ ತತ್ವವನ್ನು ನಿರೂಪಣೆ ಮಾಡುತ್ತ, ಕಟ್ಟಿಗೆಯಲ್ಲಿ ಬೆಂಕಿ ಇರುವಂತೆ ಒಬ್ಬನೇ ಪರಮಾತ್ಮ ಸಕಲ ಪದಾರ್ಥಗಳಲ್ಲಿ ಇದ್ದಾನೆ ಮತ್ತು ಯಾವುದೇ ಬೆಂಕಿಯಲ್ಲಾದರೂ ಹೇಗೆ ಶಕ್ತಿ ಪರಿಪೂರ್ಣವೋ ಹಾಗೆ ಮೂಲರೂಪ ಮತ್ತು ಅವತಾರರೂಪಗಳಲ್ಲಿ ಪರಮಾತ್ಮನ ಶಕ್ತಿ ಪರಿಪೂರ್ಣ ಎನ್ನುವದನ್ನು ತಿಳಿಸುತ್ತಾರೆ. ದೀಪದಿಂದ ದೀಪ ಹುಟ್ಟಿದಾಗ, ಮೊದಲನೆಯ ದೀಪ ಬೇರೆ ಎರಡನೆಯ ದೀಪ ಬೇರೆ, ಭೇದವಿದೆಯಲ್ಲ, ಹಾಗೆ ದೇವರ ರೂಪಗಳಲ್ಲಿಯೂ ಭೇದವಿದೆಯೇ ಎಂಬ ಮುಂದಿನ ಪ್ರಶ್ನೆಗೆ ಶ್ರೀ ಯಾದವಾರ್ಯರು ಉತ್ತರ ನೀಡಿದ್ದಾರೆ. ಆ ಪೂರ್ವಾಚಾರ್ಯರ ಪ್ರತಿಪಾದನೆಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ.
Play Time: 45:14
Size: 6.50 MB