ಭಗವಂತ ಜ್ಞಾನ-ಆನಂದಸ್ವರೂಪ, ಅನಂತಗುಣಪರಿಪೂರ್ಣ ಎಂಬ ದಿವ್ಯ ವಿಷಯಗಳ ಕುರಿತು ನಾವಿಲ್ಲಿ ತಿಳಿಯುತ್ತೇವೆ. ಧೀಮಹಿ ಎಂಬ ಪ್ರಯೋಗಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿರುವ ಐದು ಕಾರಣಗಳ ಚಿಂತನೆಯೊಂದಿಗೆ.
(You can only view comments here. If you want to write a comment please download the app.)
Mahadi Sethu Rao,Bengaluru
3:18 PM , 19/06/2020
HARE KRISHNA.
Mahadi Sethu Rao,Bengaluru
3:17 PM , 19/06/2020
HARE KRISHNA.
Santosh Patil,Gulbarga
9:32 AM , 26/12/2019
Thanks Gurugale
Arunakunara S,Bengaluru
9:32 AM , 23/01/2018
ಶ್ರೀ ಗುರುಭ್ಯೋ ನಮಃ
ಸುದರ್ಶನ ಶ್ರೀ. ಲ.,ಬೆಂಗಳೂರು
4:14 PM , 29/10/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
ರಂಗ ಕೊಳಲಲೂದಬೇಕಾದರೆ ತನ್ನ ಅನಂತಾನಂದವನ್ನು ತಾನು ಯಾಕೆ ಆಸ್ವಾದಿಸುತ್ತಾನೆ ಗುರುಗಳೆ🙏
ಅವನು ನಿತ್ಯತೃಪ್ತನಾಗಿ, ನಿರತಿಶಯವಾದ ದುಃಖರಹಿತವಾದ ಆನಂದವನ್ನು ಪರಿಪೂರ್ಣವಾಗಿ ಹೊಂದಿದವನಾಗಿದ್ದಾಗ ಯಾಕೆ ಹೀಗೆ ಮಾಡುತ್ತಾನೆ ಶ್ರೀ ಕೃಷ್ಣ ?
Vishnudasa Nagendracharya
ಆನಂದಕ್ಕಾಗಿ ಕೊಳಲನ್ನೂದಿದರೆ ನಿತ್ಯತೃಪ್ತತ್ವ ಹೋಗುತ್ತದೆ.
ದೇವರು ಆನಂದಕ್ಕಾಗಿ ಕೊಳಲನ್ನೂದುವದಲ್ಲ, ಆನಂದದಿಂದ ಕೊಳಲನ್ನೂದುವದು... ಹೀಗಾಗಿ ಸರ್ವಥಾ ದೋಷವಲ್ಲ.
ಮತ್ತು ದೇವರು ಲೀಲೆಗಳು ಸಜ್ಜೀವರಿಗೆ ಆನಂದವನ್ನು ನೀಡಲಿಕ್ಕಾಗಿ. ಯತ್ರ ತ್ರಿಸರ್ಗಃ ಅಮೃಷಾ. ಆ ಗೋಕುಲದ ಸಜ್ಜೀವರಿಗೆ ದಿವ್ಯಾನಂದವನ್ನು ಕರುಣಿಸುವದಕ್ಕಾಗಿ ಭಗವಂತ ಕೊಳಲನ್ನೂದಿದ.
ಸುದರ್ಶನ ಶ್ರೀ. ಲ.,ಬೆಂಗಳೂರು
11:16 PM, 11/10/2017
೧) ಗಾಯತ್ರಿಯಿಂದ ಪ್ರತಿಪಾದ್ಯನಾದವನು ಭಗವಂತ ಎಂದು ತಿಳಿಸಲು
೨) ಸ್ತ್ರೀ ಶೂದ್ರರು ಗಾಯತ್ರಿ ಮಂತ್ರದಿಂದ ಪಡೆಯಬಹುದಾದ ಫಲವನ್ನು ಭಗವಂತನ ರಚನವಾದ ಶ್ರೀಮದ್ಭಾಗವತದ ಮಂಗಳಾಚರಣ ಶ್ಲೋಕದಿಂದ ಪಡೆಯಬಹುದು ಎಂದು ತಿಳಿಸಲು
೩) ಅನಂತ ಶಾಸ್ತ್ರಗಳ ಸಂಗ್ರಹವಾದ ಗಾಯತ್ರಿ ಮಂತ್ರದಿಂದ ಪ್ರತಿಪಾದ್ಯನಾದ ಪರಬ್ರಹ್ಮ ಶ್ರೀಮದ್ಭಾಗವತದಿಂದಲೂ ಪ್ರತಿಪಾದ್ಯನಾಗಿದ್ದಾನೆ ಎಂದು ತಿಳಿಸಲು
೪) ಅನ್ಯತಮವಾದ ಪುರಾಣವಲ್ಲ ಭಾಗವತ. ಗಾಯತ್ರಿ ಮಂತ್ರ ಹೇಗೆ ಮಂತ್ರಗಳ ರಾಜವೋ ಪುರಾಣಗಳ ರಾಜ ಶ್ರೀಮದ್ಭಾಗವತ ಎಂದು ತಿಳಿಸಲು ಮಂತ್ರರಾಜವಾದ ಗಾಯತ್ರಿ ಮಂತ್ರದ ಶಬ್ದವನ್ನು ಇಲ್ಲಿ ಪ್ರಯೋಗಿಸಿದ್ದಾರೆ ಶ್ರೀ ವೇದವ್ಯಾಸದೇವರು
೫) ಬ್ರಹ್ಮಸೂತ್ರಗಳನ್ನು ಅಧಿಕಾರವಿಲ್ಲದವರು ಅಧ್ಯಯನ ಮಾಡಬಾರದು, ಇನ್ನು ಮಹಾಭಾರತವನ್ನು ಮಂದಬುದ್ಧಿಗಳಿಗೆ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅಧ್ಯಯನ ಮಾಡಲು ಅಶಕ್ತರನ್ನು, ಅಧಿಕಾರವಿಲ್ಲದವರನ್ನು ಒಳಗೊಂಡ ಸಮಸ್ತ ಸಜ್ಜನ ವರ್ಗಕ್ಕೆ ಶ್ರೀಮದ್ಭಾಗವತದಲ್ಲಿ ಅಡಗಿರುವ ಮಹಾಫಲಗಳನ್ನು ತೋರಿಸಲು ಶ್ರೀ ವೇದವ್ಯಾಸ ದೇವರು ಅಲೌಕಿಕವಾದ ಛಾಂದಸವಾದ ವೇದಗಳ ಪದವನ್ನು ಬಳಿಸಿದರು ಲೌಕಿಕ ಪದದ ಜಾಗದಲ್ಲಿ
೬) ಶ್ರೀಮದ್ಭಾಗವತಗ್ರಂಥ ಬ್ರಹ್ಮಸೂತ್ರಗಳ ಅರ್ಥವನ್ನು ಹೊಂದಿದೆ, ವೇದೋಕ್ತ ತತ್ವಗಳ ಹೊಂದಿರುವ ಮಹಾಭಾರತವನ್ನು ಅರ್ಥಮಾಡಿಕೊಳ್ಳಲು ಶ್ರೀಮದ್ಭಾಗವತ ಬೇಕು, ಗಾಯತ್ರಿ ಮಂತ್ರದ ೨೪ ಅಕ್ಷರಗಳ ಅರ್ಥವನ್ನು ತಿಳಿಸುತ್ತದೆ ೧೨ ಸ್ಕಂದಗಳ ೧೮೦೦೦ ಗ್ರಂಥಗಳ ಭಾಗವತ, ವೇದಾರ್ಥಗಳನ್ನು ಸಮೃದ್ಧವಾಗಿ ಹೊಂದಿದೆ ಶ್ರೀಮದ್ಭಾಗವತಗ್ರಂಥ
ಹೀಗಾಗಿ ಶ್ರೀ ವೇದವ್ಯಾಸದೇವರು ಧೀಮಹಿ ಎನ್ನುವ ಪದಪ್ರಯೋಗ ಮಾಡಿದ್ದಾರೆ.
ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು🙏😊
Vishnudasa Nagendracharya
ತುಂಬ ಸುಂದರವಾಗಿದೆ, ಸುದರ್ಶನ.
ಪ್ರತಿಯೊಂದು ಉಪನ್ಯಾಸದ ಸಾರಾಂಶವನ್ನೂ ಹೀಗೆಯೇ ಸಂಗ್ರಹಿಸು.
ಭಾಗವತ ಪ್ರವಚನಗಳು ನಮಗೆ ಅಮೂಲ್ಯ ಜ್ಞಾನವನ್ನು ನೀಡುತ್ತಿವೆ.
Jayashree Karunakar,Bangalore
3:29 PM , 06/10/2017
ಗುರುಗಳೆ ಸ್ತ್ರೀ ಶೂದ್ರರಿಗೂ ಅನುಕೂಲವಾಗುವಂತೆ ಗಾಯಿತ್ರೀ ಮತ್ತು ಸಕಲ ವೇದಾಥ೯ಸಾರವೂ ಶ್ರೀಮದ್ಬಾಗವತದಲ್ಲಿ ಅಡಗಿದೆ ಎಂದಾದಲ್ಲಿ, ಪುರುಷ ಬ್ರಾಹ್ಮಣರು ಮತ್ತೆ ಪ್ರತ್ಯೇಕವಾಗಿ ಗಾಯತ್ರೀಮಂತ್ರವನ್ನು ,ಇದರ ಮೊದಲಿಗೆ ಹೇಳುವ ಅವಶ್ಯಕತೆ ಎನು ? ಅವರಿಗೂ ಇದರಲ್ಲಿಯೇ ಗಾಯತ್ರೀ ಮಂತ್ರದ ಫಲ ದೊರೆಯುವದಿಲ್ಲವೇ ?
Vishnudasa Nagendracharya
ಅತ್ಯಂತ ಅಶಕ್ತರಾದವರು, (ಎಂಟು ವರ್ಷದ ಕೆಳಗಿನ ಮಕ್ಕಳಿಗೆ ಎಂಬತ್ತು ವರ್ಷದ ನಂತರದವರು, ಬಸುರಿ ಬಾಣಂತಿಯರು ) ಏಕಾದಶಿಯ ದಿವಸ ಅತ್ಯಂತ ಲಘು ಆಹಾರವನ್ನು ಸ್ವೀಕರಿಸಬಹುದು ಎಂದು ಶಾಸ್ತ್ರ ಅನುಮತಿಸುತ್ತದೆ. ಇದರರ್ಥ ಉಪವಾಸ ಮಾಡುವ ಸಾಮರ್ಥ್ಯವಿದ್ದವರೂ ಸ್ವೀಕರಿಸಬೇಕು ಎಂದಾಗಾವದಿಲ್ಲ.
ಹಾಗೆ, ಗಾಯತ್ರಿ ಇರುವದು ಪಠಿಸಲು. ಯೋಗ್ಯ ಅಧಿಕಾರಿಗಳು ಅದನ್ನು ಪಠಿಸಬೇಕು. ಭಾಗವತದಿಂದ ಅದರ ಅರ್ಥವನ್ನು ತಿಳಿದು ಪಠಿಸಿ ಎಂದು ಶಾಸ್ತ್ರ ತಿಳಿಸುತ್ತದೆ.
ಪಠಿಸುವ ಅಧಿಕಾರವಿಲ್ಲದವರಿಗೆ ಭಾಗವತವನ್ನು ಪಠಿಸುವದರಿಂದಲೇ ಶ್ರೀಹರಿ ಫಲವನ್ನು ನೀಡುತ್ತಾನೆ.
ಅತ್ಯಂತ ಅಶಕ್ತರಾದವರು ಏಕಾದಶಿಯ ದಿವಸ ನೀರನ್ನೋ ಹಾಲನ್ನೋ ಕುಡಿದಲ್ಲಿ ಅವರಿಗೂ ಶ್ರೀಹರಿ ಏಕಾದಶಿಯ ಫಲವನ್ನು ನೀಡಿ ಅನುಗ್ರಹಿಸುವಂತೆ. ಶಾಸ್ತ್ರ ಅನುಮತಿಸಿದೆ ಎಂದು ಅವರು ಹೊಟ್ಟೆ ತುಂಬ ಉಂಡಲ್ಲಿ ಅಥವಾ ತಿನ್ನಬಾರದ್ದನ್ನು ತಿಂದಲ್ಲಿ ಅವರಿಗೂ ದುಷ್ಫಲವುಂಟಾಗುತ್ತದೆ.
ತಾತ್ಪರ್ಯ - ಶಾಸ್ತ್ರ ಯಾವುದನ್ನು ಯಾರಿಗೆ ವಿಧಿಸಿದೆಯೋ ಅವರು ಅದನ್ನು ಪಾಲಿಸಬೇಕು. ನಮಗೆ ವಿಧಿಸಿರದೇ ಇರುವದನ್ನು ಪಾಲಿಸಬಾರದು.
ನಮಸ್ಕಾರಗಳು, ಈ ಉಪನ್ಯಾಸದ ಇನ್ನೊಂದು ವಿಶೇಷ ಈ ಉಪನ್ಯಾಸದಲ್ಲಿ ನಿರೂಪಿತವಾದ ವಿಷಯ ಈ ಉಪನ್ಯಾಸದ ಸಂಖ್ಯೆಯಿಂದಲೂ ನಿರೂಪಿಸಲ್ಪಟ್ಟಿದೆ, ಈ ಉಪನ್ಯಾಸದ ಸಂಖ್ಯೆ 37, 3+7=10 ಅಂದರೆ ದಶ, ದಶ ಅಂದರೆ ಪೂರ್ಣ ಅರ್ಥಾತ್ ಪರಿಪೂರ್ಣ, ಪರಿಪೂರ್ಣನಾದ ಶ್ರೀಹರಿಗೆ ಅನಂತಾನಂತ ಶಿರಸಾಷ್ಟಾಂಗ ಪ್ರಣಾಮಗಳು. ಹರಿಃ ಓಂ.