13/10/2017
ಶ್ರೀಮದ್ ಭಾಗವತದಿಂದ ಪ್ರತಿಪಾದ್ಯವಾದದ್ದು “ವಾಸ್ತವ-ವಸ್ತು” ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ದೇವರನ್ನು ವಸ್ತು ಎನ್ನುವ ಶಬ್ದದಿಂದ ಕರೆಯಲು ಕಾರಣವೇನು, ಆ ಶಬ್ದದ ಅರ್ಥವೇನು ಎಂದು ತಿಳಿಸುತ್ತ ಭಗವತ್ಪಾದರು ಅಪೂರ್ವ ಪ್ರಮೇಯಗಳನ್ನು ನಮಗೆ ತಿಳಿಸುತ್ತಾರೆ. ಆ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ. ಶಿವದಮ್, ತಾಪತ್ರಯೋನ್ಮೂಲನಂ ಎಂಬ ಶಬ್ದಗಳ ವಿವರಣೆಯೊಂದಿಗೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — वेद्यं वास्तवमत्र वस्तु शिवदं तापत्रयोन्मूलनम् ಭಾಗವತತಾತ್ಪರ್ಯ — वस्तु अप्रतिहतं नित्यम् च । स्कान्दे च — “वसनाद् वासनाद् वस्तु नित्याप्रतिहतं यतः । वासनेदं यतस्तुन्नमतस्तद्ब्रह्म शब्द्यते” इति ।
Play Time: 39:25
Size: 6.77 MB