29/10/2017
ಇವತ್ತಿಗೆ ನಮಗೆ ಭಾರತ-ಭಾಗವತ-ಪುರಾಣಾದಿಗಳು ದೊರೆತಿರುವದೇ ಶ್ರೀ ಶೌನಕಮಹರ್ಷಿಗಳು ಮಾಡಿದ ಮಹಾಜ್ಞಾನಸತ್ರದಿಂದ. ಕಲಿಯುಗ ಆರಂಭವಾಗುತ್ತಿದ್ದಂತೆಯೇ ಒಂದು ಸಾವಿರ ವರ್ಷಗಳ ದೀರ್ಘಕಾಲದ ಸತ್ರವನ್ನು ಆರಂಭಿಸುವ ಶೌನಕಾದಿ ಹತ್ತು ಸಾವಿರ ಋಷಿಗಳು ಸೂತಾಚಾರ್ಯರಿಂದ ಸಕಲ ಪುರಾಣವಾಙ್ಮಯವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ ಶ್ರೀಮದಾಚಾರ್ಯರು ಮತ್ತು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅತ್ಯಪೂರ್ವವಾದ ವಿಷಯಗಳ ನಿರೂಪಣೆ ಇಲ್ಲಿದೆ. ನಮಗೆ ಅಪಾರ ಜ್ಞಾನಸಂಪತ್ತನ್ನು ನೀಡಿದ ಶೌನಕರಿಗೆ ಯಾವ ರೀತಿ ಗೌರವ ಭಕ್ತಿಗಳನ್ನು ಸಲ್ಲಿಸಬೇಕು ಎನ್ನುವದರ ನಿರೂಪಣೆಯೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು. श्रीमद्भागवते प्रथमस्कन्धे प्रथमाध्यायः। नैमिषेनिमिषक्षेत्रे ऋषयः शौनकादयः । सत्रं स्वर्गाय लोकाय सहस्रसममासत ।। ४ ।। भागवततात्पर्यम् — प्रकारान्तरेण पुरुषार्थशङ्कानिवृत्त्यर्थमाख्यायिका । पाद्मे च — “आख्यायिकाः प्रदर्श्यन्ते सर्ववेदेषु सर्वशः । द्योतयन्त्यस्तु महतां तात्पर्यं तत्रतत्र ह ।। अलाभः पुरुषार्थस्य प्रोक्तमर्थमृते त्विति । द्योतनाय महाराज श्रद्धावृद्ध्यर्थमेव च” इति ।।
Play Time: 51:56
Size: 7.60 MB