29/10/2017
ಸಾಂಪ್ರದಾಯಿಕ ಅರ್ಥಗಳಿಂದ ತಮ್ಮ ಗ್ರಂಥವನ್ನು ಶ್ರೀಮಂತಗೊಳಿಸಿರುವ ಶ್ರೀವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಸತ್ರ ಶಬ್ದದ ಅಪೂರ್ವ ಅರ್ಥಗಳ ಚಿಂತನೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಶಾಸ್ತ್ರಾಧ್ಯಯನ ನಡೆಯುವಾಗಲೂ ನಮ್ಮ ನಿತ್ಯದ ವಿಹಿತ ಕರ್ಮಗಳನ್ನು ಬಿಡುವಂತಿಲ್ಲ, ಮಾಡಲೇಬೇಕು, ಸಂಕೋಚ ಮಾಡಬಹುದು ಎನ್ನುವ ತತ್ವಗಳೊಂದಿಗೆ, ವಿಷ್ಣುಭಕ್ತರಾದ ಶೂದ್ರರಿಗೆ ಬ್ರಾಹ್ಮಣರು ಯಾವ ರೀತಿ ಗೌರವವನ್ನು ನೀಡಬೇಕು ಎನ್ನುವದರ ಕುರಿತ ಆಚಾರ್ಯರ ನಿರ್ಣಯದೊಂದಿಗೆ ಸೂತಾಚಾರ್ಯರ ಮಾಹಾತ್ಮ್ಯವನ್ನು ಇಲ್ಲಿ ನಿರೂಪಿಸಲಾಗಿದೆ. ಶೂದ್ರರಾದ ಸೂತಾಚಾರ್ಯರ ವೇಷ, ಭೂಷಣಗಳು ಹೇಗಿದ್ದವು, ಬ್ರಾಹ್ಮಣೋತ್ತಮರಾದ ಶೌನಕರು ಅವರಲ್ಲಿ ಯಾವ ರೀತಿ ಆದರ ಮಾಡುತ್ತಿದ್ದರು ಮಂತಾದವನ್ನು ತಿಳಿಸುವದರೊಂದಿಗೆ ಯಾವ ವರ್ಣಕ್ಕೆ ಯಾವ ರೀತಿ ಗೌರವ ನೀಡಬೇಕು ಎನ್ನುವದಕ್ಕೆ ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ನೀಡಿರುವ ನಿರ್ಣಯದ ವಿವರಣೆ ಇಲ್ಲಿದೆ. ಬ್ರಾಹ್ಮಣ-ಶೂದ್ರರ ಸಂಬಂಧ ಹೇಗಿದ್ದವು ಎನ್ನುವದನ್ನು ಅರಿಯಬಯಸುವ ಪ್ರತಿಯೊಬ್ಬರೂ ಕೇಳಬೇಕಾದ ಭಾಗ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — श्रीमद्भागवते प्रथमस्कन्धे प्रथमाध्यायः। त एकदा तु मुनयः प्रातर्हुतहुताशनाः। सत्कृतं सूतमासीनं पप्रच्छुरिदमादृताः॥ 5॥
Play Time: 43:54
Size: 7.60 MB