29/10/2017
ಕಲಿಯುಗದ ಸಜ್ಜನರ ಮೇಲಿನ ಅಪಾರ ಕೃಪೆಯಿಂದ ಅವರ ಉದ್ಧಾರಕ್ಕಾಗಿ ಶೌನಕಾದಿ ಮಹರ್ಷಿಗಳು ಸೂತಾಚಾರ್ಯರಿಗೆ ಆರು ಪ್ರಶ್ನೆಗಳನ್ನು ಮಾಡುತ್ತಾರೆ. ಅದರಲ್ಲಿ ಮೂರು ಪ್ರಶ್ನೆಗಳ ವಿವರಣೆ ಇಲ್ಲಿದೆ. ಆಯುಷ್ಮನ್ ಎನ್ನುವ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅರ್ಥದಿಂದ ಅವರಿಗಿರುವ ಟೀಕಾಗ್ರಂಥಗಳ ಜ್ಞಾನ ಎಷ್ಟು ಆಳ ಮತ್ತು ವಿಸ್ತಾರವಾದದ್ದು ಎನ್ನುವದು ತಿಳಿಯುತ್ತದೆ. ಆ ಮಹಾನುಭಾವರ ತಿಳಿಸಿದ ಅರ್ಥಗಳ ವಿವರಣೆ ಈ ಭಾಗದಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕಗಳು — श्रीमद्भागवते प्रथमस्कन्धे प्रथमाध्यायः। तत्रतत्राञ्जसाऽऽयुष्मन् भवता यद् विनिश्चितम्। पुंसामेकान्ततः श्रेयस्तन्नः शंसितुमर्हसि॥ 9॥ प्रायेणाल्पायुषो मर्त्याः कलावस्मिन् युगे जनाः। मन्दाः सुमन्दमतयो मन्दभाग्या ह्युपद्रुताः॥ 10॥ भूरीणि भूरिकर्माणि श्रोतव्यानि विभागशः। अतः साधोऽत्र यत् सारं समुद्गृह्य मनीषया। ब्रूहि भद्राय भूतानां येनात्माऽऽशु प्रसीदति॥ 11॥ सूत जानासि भद्रं ते भगवान् सात्वतां पतिः। देवक्यां वसुदेवस्य जातो यस्य चिकीर्षया॥ 12॥ तन्नः शुश्रूषमाणानामर्हस्यङ्गानुवर्णितुम्। यस्यावतारो भूतानां क्षेमाय विभवाय च॥ 13॥
Play Time: 34:10
Size: 6.64 MB