29/10/2017
ದೇವರ ಸ್ಮರಣೆಯಿಂದ ಸಂಸಾರವೇ ಕಳೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನಾವು ಪ್ರತಿನಿತ್ಯವೂ ವಿಷ್ಣುಸ್ಮರಣೆ ಮಾಡುತ್ತಲೇ ಇರುತ್ತೇವೆ. ಆದರೂ ಸಂಸಾರ ಕಳೆಯುತ್ತಿಲ್ಲ. ಹಾಗಾದರೆ ಸಂಸಾರವನ್ನು ಕಳೆಯುವ ವಿಷ್ಣುಸ್ಮರಣೆ ಯಾವ ರೀತಿ ಇರುತ್ತದೆ, ಈಗ ಮಾಡುತ್ತಿರುವ ವಿಷ್ಣುಸ್ಮರಣೆಯಿಂದ ಏನಾಗುತ್ತದೆ ಎಂಬೆಲ್ಲ ವಿಷಯಗಳನ್ನು ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅದ್ಭುತವಾಗಿ ಅರ್ಥ ಮಾಡಿಸುತ್ತಾರೆ. ಈ ಉಪನ್ಯಾಸದಲ್ಲಿರುವದು ಶೌನಕರ ಆರು ಪ್ರಶ್ನೆಗಳಲ್ಲಿ ನಾಲ್ಕನೆಯ ಪ್ರಶ್ನೆಯ ವಿವರ. ಪ್ರಶ್ನೆ ಯಾವ ರೀತಿ ಮಾಡಬೇಕೆನ್ನುವದನ್ನು ಶೌನಕರಿಂದ ಕಲಿಯಬೇಕು. ಅವರ ಪ್ರಶ್ನೆ ಅದೆಷ್ಟು ಅದ್ಭುತವಾಗಿದೆಯೆಂದರೆ ಸ್ವಯಂ ಸೂತಾಚಾರ್ಯರು ಉತ್ತರ ನೀಡುವ ಮುನ್ನ ಅವರ ಪ್ರಶ್ನೆಯನ್ನು ಹಾಗೂ ಪ್ರಶ್ನೆ ಮಾಡಿದ ಕ್ರಮವನ್ನು ಹೊಗಳಿ ಉತ್ತರಿಸುತ್ತಾರೆ. ತಪ್ಪದೇ ಕೇಳಿ, ಬದುಕಿದ್ದು ಸಾರ್ಥಕ ಎಂಬ ಭಾವ ನೀಡುವ ಆಚಾರ್ಯರ ವಚನಗಳ ಅರ್ಥಾನುಸಂಧಾನವಿದು. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — श्रीमद्भागवते प्रथमस्कन्धे प्रथमाध्यायः। आपन्नः सम्सृतिं घोरां यन्नाम विवशो गृणन्। ततः सद्यो विमुच्येत यं बिभेति स्वयं भवः ॥14॥ यत्पादसंश्रयाः सूत मुनयः प्रशमायनाः। सद्यः पुनन्त्युपस्पृष्टाः स्वर्धुनीवानुसेवया॥ 15॥ श्रीमद् भागवततात्पर्यम् — विवशः बह्वभ्यासात्। उक्तं च स्कान्दे — “शारीराद् वाचिकाभ्यासो वाचिकान्मानसो भवेत्। मानसाद् विवशान्मुच्येन्नान्यथा मुक्तिरिष्यते” इति ॥
Play Time: 33:59
Size: 6.60 MB