07/11/2017
ಶುಕಾಚಾರ್ಯರು ಸಂನ್ಯಾಸ ಸ್ವೀಕರಿಸುವ ಸಂದರ್ಭದಲ್ಲಿ ವೇದವ್ಯಾಸದೇವರು ಧೈರ್ಯ ಕಳೆದುಕೊಂಡ ಒಬ್ಬ ಸಾಮಾನ್ಯ ಮನುಷ್ಯ ತಂದೆಯಂತೆ ವಿಡಂಬನೆ ಮಾಡುತ್ತಾರೆ. ಭಾಗವತದಲ್ಲಿ “ದ್ವೈಪಾಯನೋ ವಿರಹಕಾತರಃ” ಎಂಬ ಶಬ್ದವಿದೆ. ಮಗನ ವಿರಹದಿಂದ ಅಧೀರರಾಗಿ ಎಂದು ಅದರ ಮೇಲ್ನೋಟದ ಅರ್ಥ. ಆದರೆ, ಆಚಾರ್ಯರು “ಅಧೀರರಾದರು” ಎಂದು ಅರ್ಥ ಮಾಡಬಾರದು, “ಅಧೀರರಾದಂತೆ ನಟಿಸಿದರು” ಎಂದು ಅರ್ಥವನ್ನು ಮಾಡಬೇಕು ಎಂದು ಪ್ರತಿಪಾದಿಸುತ್ತಾರೆ. ಭಾಗವತದ ಶಬ್ದಗಳಲ್ಲಿ ತೋರದ ಈ ಅರ್ಥವನ್ನು ಹೇಗೆ ಗ್ರಹಿಸಬಹುದು ಎಂಬ ಪ್ರಶ್ನೆಗೆ ಅದ್ಭುತವಾದ ಎರಡು ಉತ್ತರಗಳನ್ನು ನೀಡಿದ್ದಾರೆ. ಆಚಾರ್ಯರ ತತ್ವನಿರ್ಣಯ ಕೌಶಲ ಎಷ್ಟು ಅದ್ಭುತವಾದದ್ದು ಎಂದು ನಮಗೆ ಮನಗಾಣಿಸುವ ಭಾಗ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕ — यं प्रव्रजन्तमनुपेतमपेतकृत्यं द्वैपायनो विरहकातर आजुहाव। पुत्रेति तन्मयतया तरवोऽभिनेदुस्तं सर्वभूतहृदयं मुनिमानतोऽस्मि ।। २ ।। ಶ್ರೀಮದ್ ಭಾಗವತತಾತ್ಪರ್ಯ — अकातरः कातरवददर्शयत्। उक्तं च स्कान्दे — “नित्यतृप्तः परानन्दो योऽव्ययः परमेश्वरः। यस्य पुत्रफलं नैव यज्जातं जगदीदृशम्॥ यदधीनश्रियोऽपाङ्गाद् ब्रह्मरुद्रादिसंस्थितिः। स पुत्रार्थं तपस्तेपे व्यासो रुद्रस्य चेश्वरः॥ कातर्यं दर्शयामास वियोगे लौकिकं हरिः। कुतः कातरता तस्य नित्यानन्दमहोदधेः” इति। “ईशन्नपि हि लोकस्य सर्वस्य जगतो हरिः। कर्माणि कुरुते विष्णुः कीनाश इव दुर्बलः” इति चोद्योगे। “देवत्वे देववच्चेष्टा मानुषत्वे च मानुषी” इति श्रीविष्णुधर्मे। सर्वभूतहृदयोऽहङ्कारात्मकत्वात्। “अहङ्कारात्मको रुद्रः शुको द्वैपायनात्मजः” इति स्कान्दे ॥
Play Time: 42:42
Size: 7.33 MB