Upanyasa - VNU559

ನಿನ್ನ ಬಂಧಕ ಶಕ್ತಿಗೆ ನಮೋ ಎಂಬೆ

11/11/2017

ದೇವರು ಜೀವರನ್ನು ಯಾವ ರೀತಿ ಸಂಸಾರದಲ್ಲಿ ಬಂಧಿಸಿದ್ದಾನೆ ಎನ್ನುವದರ ಒಂದು ವಿವರಣೆ. 


Play Time: 17:18

Size: 3.47 MB


Download Upanyasa Share to facebook View Comments
2242 Views

Comments

(You can only view comments here. If you want to write a comment please download the app.)
 • Chandrika prasad,Bangalore

  7:11 AM , 13/07/2019

  ಈ ಎಚ್ಚರಿಕೆ ಯನ್ನು ಮರೆತು ಸಂಸಾರದ ಕೆಸರಿನಲ್ಲಿ ಬಿದ್ದು ದೇವರ ಆರಾಧನೆಗಳನ್ನು ಮರೆತು ಬಿಡುತ್ತಾರೆ. ಭಕ್ತಿ ಒಂದೇ ಔಷಧ.
 • ಆನಂದತೀರ್ಥ,ಹೊಳೇನರಸೀಪುರ

  4:39 PM , 08/01/2018

  ಅದ್ಭುತ ವಿವರಣೆ ಆಚಾರ್ಯರೇ
 • Krishnaa,Bangalore

  4:19 PM , 19/12/2017

  Sri gurubhyo namah.
  What an upanyasa acharyare , what an upanyasa.
  Could I request for the lyrics of the song ,or better still could you sing the full song for us, acharyare?
  Namaskaragalu
 • Jayashree Karunakar,Bangalore

  8:09 AM , 16/11/2017

  ಗುರುಗಳೆ
  
  ನಾವು ಹೆಜ್ಜೆ ಹೆಜ್ಜೆಗೂ ಎಷ್ಟು ಎಚ್ಚರದಲ್ಲಿರಬೇಕು, ನಾವು ತಪ್ಪು ಮಾಡಬಾರದು ಎಂದು ದೃಡ ಸಂಕಲ್ಪ ಮಾಡಿದರೂ , ನಮ್ಮಿಂದ ತಪ್ಪು ನಡೆಯದಂತೆ ಭಗವಂತನೆ ಪ್ರತಿಕ್ಷಣವೂ ನಮ್ಮನ್ನು ರಕ್ಷಣೆ ಮಾಡುವುದು ಎನ್ನುವುದನ್ನು, ಮನದಟ್ಟು ಮಾಡಿಸಿದ್ದೀರ ಗುರುಗಳೆ.
 • Jayashree Karunakar,Bangalore

  12:44 PM, 15/11/2017

  ಗುರುಗಳೆ
  
  ಶ್ರೀಭೃಗುಮಹಷಿ೯ಗಳು ಮಹಾತ್ಮರಾದವರು , ಅಂತಹವರಿಗೆ ದೇವರ ಎದೆಗೆ ಒದೆಯುವಂತಹ ಪಾಪ ಕಮ೯ವನ್ನು, ಮಹಷಿ೯ಗಳಾಗಿದ್ದಾಗಲೇ ಯಾಕೆ ಭಗವಂತ ಮಾಡಿಸುತ್ತಾನೆ ?
  
  ಭಗವಂತನ ಸಾಕ್ಷಾತ್ತಾದ ರೂಪದ ಸಮೀಪಕ್ಕೆ ಬಂದಾಗಲೂ ಅವರಲ್ಲಿ ಅಂತಹ ಪಾಪ ಕಮ೯ದ ಯೋಚನೆ ಬರಲು ಹೇಗೆ ಸಾಧ್ಯ ? 
  
  ನಮ್ಮಂತಹ ಸಾಮಾನ್ಯರೆ ದೇವರ ಕಲ್ಲಿನ ಪ್ರತಿಮೆಯ ಮುಂದೆ ನಿಂತಾಗಲೂ ಕೆಟ್ಟಯೋಚನೆ ಬರಲು ಸಾಧ್ಯವಿಲ್ಲ ಅಲ್ಲವೆ ?
  
  ಭೃಗುಮಹಷಿ೯ಗಳಿಗೆ ಭಗವಂತನಲ್ಲಿ
  ಅಸಕ್ತಿ ಹುಟ್ಟುವ ಮುಂಚೆಯೇ (ಅಂದರೆ ಅವರು ಸಾಮಾನ್ಯರಂತೆ ಲೌಖಿಕ ಕೃತ್ಯದಲ್ಲಿ ಮುಳುಗಿರುವ ಸಂಧಭ೯ದಲ್ಲಿ) ಅವರಲ್ಲಿ ಭಗವಂತನಿಗೆ ಪಾಪಕಮ೯ಮಾಡಿಸಬಹುದಿತ್ತಲ್ಲವೆ ? ನಮಗೆ ಒಮ್ಮೆ ಭಗವಂತನಲ್ಲಿ ಆಸಕ್ತಿ ಹುಟ್ಟಿ ಜ್ಞಾನ ಭಕ್ತಿ ವೆರಾಗ್ಯಗಳು ಮನಸ್ಸಿನಲ್ಲಿ ಮೂಡಿದಾಗ ಭಗವಂತೆ ಮತ್ತೆ ನಮ್ಮಿಂದ ಪಾಪ ಕಮ೯ಗಳನ್ನು ಮಾಡಿಸಬಾರದಲ್ಲವೆ ? ಅದಕ್ಕಿಂತ ಮುಂಚೆಯೆ ಎಲ್ಲವನ್ನೂ ಮಾಡಿಸಿ ಮುಗಿಸಬಹುದಲ್ಲವೆ ?
  
  ಮತ್ತು ಮಹಷಿ೯ಗಳ ಎದೆಗೆ ಒದೆಯಲು ಕಾರಣ, ಜಗತ್ತಿನಲ್ಲಿ ಯಾರು ದೊಡ್ಡವರು ಎನ್ನುವುದನ್ನು ತಿಳಿಯು ಸಲುವಾಗಿ ಅಲ್ಲವೆ ?

  Vishnudasa Nagendracharya

  ಭಗವಂತ ಯಾವ ಕರ್ಮವನ್ನು ಯಾಕಾಗಿ ಯಾರಿಂದ ಯಾವಾಗ ಮಾಡಿಸುತ್ತಾನೆ ಎಂದು ತಿಳಿಯುವದು ಮಹಾತ್ಮರಿಗೂ ತಿಳಿಯುವದು ಕಷ್ಟ. ಇನ್ನು ನಮ್ಮಂತಹವರ ಪಾಡೇನು. ಗಹನಾ ಕರ್ಮಣೋ ಗತಿಃ. 
  
  ಅಪರೋಕ್ಷಜ್ಞಾನವಾದ ನಂತರವೂ ಪ್ರಾರಬ್ಧಕರ್ಮ, ಅವಿದ್ಯಾದಿಗಳು ನಮ್ಮನ್ನು ಕಾಡಿಸುತ್ತವೆ ಎನ್ನುವದಕ್ಕೆ ಇವು ನಿದರ್ಶನ. ಹೀಗಾಗಿ ನಿರಂತರ ಎಚ್ಚರದಲ್ಲಿರಬೇಕು. 
  
  ಜ್ಞಾನ ಭಕ್ತಿ ವೈರಾಗ್ಯ ಮೂಡಿದ ಮಾತ್ರಕ್ಕೆ ನಮ್ಮಿಂದ ಪಾಪ ಕರ್ಮ ನಡೆಯಬಾರದು ಎಂದು ಸರ್ವಥಾ ಇಲ್ಲ. ನಮ್ಮಲ್ಲಿ ಯಾವಾಗ ರಜೋಗುಣ, ತಮೋಗುಣಗಳ ಪ್ರಭಾವ ಉಂಟಾಗುತ್ತದೆಯೋ ಆಗ ಪಾಪಕರ್ಮಗಳು ಘಟಿಸುತ್ತವೆ. 
  
  ದೊಡ್ಡವರಿಗೆ ಮಾಡುವ ಅಪಚಾರಕ್ಕೆ ಮೂಲ ಕಾರಣ ಸ್ವಭಾವ. ಏಕೆಂದರೆ ಆ ಅಪಚಾರ ಸ್ವಭಾವದ ಮೇಲೆಯೇ ಪರಿಣಾಮ ಬೀರುತ್ತದೆ. ಮೋಕ್ಷದಲ್ಲಿಯೂ ಅದರಿಂದ ಆನಂದಹ್ರಾಸ ಉಂಟಾಗುತ್ತದೆ. 
  
  ಈ ರೀತಿ ಪಾಪ ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡೇ ಮುಕ್ತಿ ಪಡೆಯಬೇಕು ಎಂದು ಸ್ವಭಾವದಲ್ಲಿರುತ್ತದೆ. ಹೀಗಾಗಿ ಮಹಾನುಭಾವರಿಂದಲೂ ಪಾಪ ಘಟಿಸುತ್ತದೆ. 
  
  ಹಾಗೆಂದು, ಪಾಪ ಮಾಡುವ ಅವರಿಗೂ ನಮಗೂ ಏನೂ ವ್ಯತ್ಯಾಸವಿಲ್ಲ ಎಂದು ತಿಳಿಯಬಾರದು. ಇಡಿಯ ಸೃಷ್ಟಿಯಲ್ಲಿ ಒಂದೆರಡು ಬಾರಿ ಅವರು ತಪ್ಪು ಮಾಡಿದರೆ, ತಪ್ಪು ಮಾಡದ ಕ್ಷಣವೇ ಇಲ್ಲದಂತೆ ನಾವು ಬದುಕುತ್ತೇವೆ. ಅದೇ ವ್ಯತ್ಯಾಸ. ಮಹತ್ತರ ವ್ಯತ್ಯಾಸ. 
 • P.R.SUBBA RAO,BANGALORE

  11:36 AM, 12/11/2017

  ಶ್ರೀ ಗುರುಭ್ಯೋನಮಃ
  VNU559 - ದುಃಖ ಎಂಬುದು ಜೀವರ ಸ್ವರೂಪದಲ್ಲಿಯೇ ಇದೆ ಎಂದಾದರೆ, ಪರಶುಕ್ಲತ್ರಯರಿಗೂ ಇದು ಅನ್ವಯವಾಗುತ್ತಾ? ಹೌದು ಎಂದಾದರೆ, ಎಷ್ಟರ ಮಟ್ಟಿಗೆ? ಮಹಾಲಕ್ಷ್ಮಿದೇವಿಯರಿಗೆ ಹೇಗೆ? ಋಜುಗಳಿಗೆ ಅನಾದಿ ಕಾಲದಿಂದ ಅನಂತ ಕಾಲದವರೆಗೆ ಅಜ್ಞಾನ ಇಲ್ಲವಾದ್ದರಿಂದ ಅವರಿಗೆ ದುಃಖ ಹೇಗೆ? ಮತ್ತು ಋಜುಗಳ ನಿಯತಪತ್ನಿಯರಿಗೆ ಹೇಗೆ? ಇವೆಲ್ಲ ಸಂದೇಹಗಳ ಸಮನ್ವಯ ಹೇಗೆ ಗುರುಗಳೇ?
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ಉತ್ತಮ ಜೀವರ ಸ್ವರೂಪದಲ್ಲಿಯೇ ದುಃಖವಿಲ್ಲ. ದುಃಖವನ್ನು ಅನುಭವಿಸುವ ಅರ್ಹತೆಯಿದೆ. ಹೀಗಾಗಿ ಸಂಸಾರದಲ್ಲಿ ದುಃಖ ಅನುಭವಿಸಿ ಮುಕ್ತರಾಗುತ್ತಾರೆ, ಸಮಸ್ತ ದುಃಖದಿಂದಲೂ. ಮುಕ್ತರಾದ ಬಳಿಕ ದುಃಖದ ವಾರ್ತೆಯೂ ಇರುವದಿಲ್ಲ. 
  
  ಪರಶುಕ್ಲತ್ರಯರಲ್ಲಿ ಮೂರು ಜನ. ಲಕ್ಷ್ಮೀದೇವಿಯರು, ಋಜುಗಳು ಮತ್ತು ಋಜುಪತ್ನಿಯರು. ಇವರಲ್ಲಿ ಲಕ್ಷ್ಮೀದೇವಿಯರಿಗೆ ಸುತರಾಂ ದುಃಖದ ಸ್ಪರ್ಶವೂ ಇಲ್ಲ. ಋಜುಗಳಿಗೆ ಸಂಸಾರದಲ್ಲಿ ದುಃಖದ ಅತ್ಯಂತ ಅತ್ಯಂತ ಕಡಿಮೆ ಸ್ಪರ್ಶವಿದೆ. ಲೆಕ್ಕಕ್ಕೇ ಇಲ್ಲದಷ್ಟು. ಆದರೂ ಸ್ಪರ್ಶವಿದೆ. ಸಮಗ್ರ ಸಾವರಣ ಬ್ರಹ್ಮಾಂಡಕ್ಕೂ ಒಂದು ಪರಮಾಣುವಿನ ಕೋಟ್ಯಂಶಕ್ಕೂ ಇರುವಷ್ಟು ಲೆಕ್ಕದಲ್ಲಿ ದುಃಖದ ಸ್ಪರ್ಶ. ಋಜುಗಳು ಸಾವರಣ ಬ್ರಹ್ಮಾಂಡದಂತೆ. ಅವರಿಗಿರುವ ದುಃಖ ಆ ಸಾವರಣ ಬ್ರಹ್ಮಾಂಡದಲ್ಲಿ ಒಂದು ಪರಮಾಣುವಿನ ಕೋಟ್ಯಂಶದಂತೆ. 
  
  
  
 • Jayashree Karunakar,Bangalore

  3:02 PM , 12/11/2017

  ಗುರುಗಳೆ 
  
  ೧. ಮರಗಿಡಗಳಲ್ಲಿರುವ ಜೀವದ ಸ್ವರೂಪದಲ್ಲಿ ದುಃಖ ಅನುಭವಿಸಲೇಬೇಕು ಅನ್ನುವ
   ನಿಯಮ ಇದೆಯೆ ? ಅವುಗಳು ಸಾಯುವುದು, ಮುರಿಯವುದು, ರೋಗ ಬರುದು ಇದೆಯಾದರೂ ದುಃಖದ ಅನುಭವ ಇಲ್ಲ ಅಲ್ಲವೆ ? ಅವುಗಳಿಗೆ ಸಾಧನೆ ಮಾಡಿ ಮೋಕ್ಷಕ್ಕೆ ಹೋಗುವ ಯೋಗ್ಯತೆ ಇಲ್ಲವಲ್ಲ ,ಇಲ್ಲಿ ಹೇಗೆ ಅನ್ವಯಿಸುತ್ತದೆ
  
  ೨. ತುಂಬಾ ಪುಣ್ಯ ಮಾಡಿದಲ್ಲಿ ಮನುಷ್ಯ ಜನ್ಮ, ಅದರಲ್ಲಿಯೂ ಬ್ರಾಹ್ಮಣ ಜನ್ಮ ಸಿಕ್ಕಿರುವುದು ಮತ್ತಷ್ಟು ಪುಣ್ಯಕಮ್೯ದಿಂದ.  ಈಗ ನಮ್ಮ ಹಿಂದಿನ ಪುಣ್ಯದಿಂದ ಪ್ರತಿನಿತ್ಯ ತಮ್ಮಿಂದ ಶ್ರೇಷ್ಟವಾದ ಶ್ರೀಮದ್ಭಾಗವತ ಶ್ರವಣಮಾಡುತಿದ್ದೇವೆ, ಇದರಿಂದಾಗಿ ಮತ್ತಷ್ಟು ಸತ್ಕಮ೯, ನಿಷ್ಕಾಮ ಕಮ೯ಗಳು, ಇದರ ಪ್ರಭಾವದಿಂದ ಮತ್ತಷ್ಟು ಒಳ್ಳೆಯ ಸಾಧನೆ ಮಾಡಿಸುವ ಶ್ರೇಷ್ಟ ಜನ್ಮಗಳು, ಒಮ್ಮೆ ಇಂತಹ ಶ್ರವಣದಲ್ಲಿ ಆಸಕ್ತಿ ಹುಟ್ಟಿದರೆ, ಮತ್ತೆ ನಾವು ಪಾಪಕಮ೯ಗಳನ್ನು ಮಾಡುವ ಸಾಧ್ಯತೆ ಬಹಳ ಕಡಿಮೆ
  ಅಂದರೆ ನಾವು ಪಡೆಯಬೇಕಾದ 
  ನೀಚಯೋನಿಗಳಲ್ಲಿಯ ಜನ್ಮ, ಪ್ರಾಣಿಜನ್ಮವೆಲ್ಲವೂ ಮುಗಿಸಿ ಬಂದಿದ್ದೇವೆಯಾ ?

  Vishnudasa Nagendracharya

  ಜಗತ್ತಿನ ಸಕಲ ಯೋನಿಗಳಲ್ಲಿಯೂ (ಮರ, ಗಿಡ, ಹುಲ್ಲು, ಪಾಚಿ ಮುಂತಾದ ಎಲ್ಲದರಲ್ಲಿಯೂ) ಸುಖ ದುಃಖದ ಅನುಭವವಿದೆ. 
  
  ಮರಗಿಡಗಳೂ ಅವಶ್ಯವಾಗಿ ಸಾಧನೆ ಮಾಡುತ್ತವೆ. ಆ ಜೀವ ಮನುಷ್ಯಜನ್ಮದಲ್ಲಿ ಸಾಧನೆ ಮಾಡಿ ಮತ್ತೆ ಮರಗಿಡವಾಗಿ ಹುಟ್ಟಿ ಸಾಧನೆಯನ್ನು ಮಾಡುತ್ತದೆ. 
  
  ನೀಚಯೋನಿಗಳು ಅಷ್ಟು ಸುಲಭವಾಗಿ ಮುಗಿಯುವದಿಲ್ಲ. ಸಾಧನೆಯ ಮಾರ್ಗದಲ್ಲಿ ನೀಚಯೋನಿಗಳು ಕಡಿಮೆ. ಆದರೆ ತಪ್ಪು ಮಾಡಿದರೆ ಅವಶ್ಯವಾಗಿ ನೀಚಜನ್ಮ ಬಂದೇ ಬರುತ್ತದೆ. ವಸಿಷ್ಠಾದಿ ಋಷಿಗಳಿಗೂ ಉಪದೇಶ ಮಾಡುವಷ್ಟು ಎತ್ತರದಲ್ಲಿರುವ ಶ್ರೀ ಭೃಗುಮಹರ್ಷಿಗಳು ದೇವರಿಗೆ ಕಾಲಿನಲ್ಲಿ ಒದ್ದದ್ದರಿಂದ ವ್ಯಾಧನಾಗಿ ಹುಟ್ಟಿಬರಲಿಲ್ಲವೇ. ಸಕಲ ವ್ಯಾಧಜನ್ಮಗಳೂ ನೀಚಯೋನಿಯಲ್ಲ. ಆದರೆ ಭೃಗುಋಷಿಗಳಿಗೆ ಅದು ನೀಚಯೋನಿ. ಕಾರಣ ವೇದದ್ರಷ್ಟಾರದ ಆ ಮಹರ್ಷಿಗಳು ವೇದಗಳನ್ನು ಪಠಣ ಮಾಡಲೂ ಸಾಧ್ಯವಿಲ್ಲದ ಅವಸ್ಥೆಯನ್ನು ಮುಟ್ಟಿದರು. ಧರ್ಮವ್ಯಾಧ ಮುಂತಾದವರಿಗೆ ವ್ಯಾಧಜನ್ಮವೇ ಸಾಧಕಜನ್ಮ.
  
  ಸ್ವರೂಪದಲ್ಲಿಯೂ ನಾಯಿಯಾಗಿ ಇರುವವರಿಗೆ ನಾಯಿಯ ಜನ್ಮವೇ ಶ್ರೇಷ್ಠ ಜನ್ಮ. ನಾಯಿಗಿಂತಲೂ ಉತ್ತಮರಾದವರಿಗೆ ನಾಯಿಯ ಜನ್ಮ ಕೀಳು ಜನ್ಮ. ನಾಯಿಗಿಂತಲೂ ಯೋಗ್ಯತೆಯಲ್ಲಿ ಕಡಿಮೆಯಾದ ತೃಣಜೀವಗಳಿಗೆ ನಾಯಿಯ ಜನ್ಮ ಉತ್ಕೃಷ್ಟಜನ್ಮ. ಈ ವಿಂಗಡಣೆಯನ್ನು ನಾವು ಮರೆಯತಕ್ಕದ್ದಲ್ಲ. 
 • P N Deshpande,Bangalore

  1:43 PM , 12/11/2017

  S.Namaskargalu. short sweet covered all things samsaar endare eanu?
 • Shantha.raghothamachar,Bangalore

  11:09 AM, 12/11/2017

  ನಮಸ್ಕಾರ ಗಳು