12/11/2017
ದೇವರನ್ನು ಜ್ಞಾನ-ಆನಂದಶರೀರ ಎನ್ನುತ್ತೇವೆ. ಹಾಗಂದರೇನು? ಮುಕ್ತರೂ, ಲಕ್ಷ್ಮಿಯೂ ಜ್ಞಾನಾನಂದಶರೀರವನ್ನೇ ಹೊಂದಿದ್ದಾರೆ, ಅವರಿಗೂ ದೇವರಿಗೂ ವ್ಯತ್ಯಾಸವೇನು? ವಸ್ತುವಿದ್ದರೆ ವಸ್ತುವಿನ ಜ್ಞಾನ ಬರಲು ಸಾಧ್ಯ. ಮತ್ತೊಬ್ಬರಿದ್ದರೆ ಅವರಿಂದ ಆನಂದ ಉಂಟಾಗಲು ಸಾಧ್ಯ. ಹೀಗೆ ಜ್ಞಾನ ಅನಂದಗಳು ವಸ್ತುವಿನ ಅಧೀನ, ದೇವರು ಜ್ಞಾನಾನಂದಶರೀರರಾನದರೆ ಅವನು ಪರಾಧೀನನಾಗಲೇಬೇಕಲ್ಲವೇ? ಎಂಬ ಪ್ರಶ್ನೆಗಳಿಗೆ ಶ್ರೀ ವೇದವ್ಯಾಸದೇವರು ನೀಡಿರುವ ಉತ್ತರಗಳನ್ನು ಭಗವತ್ಪಾದರು ಅದ್ಭುತವಾದ ಕ್ರಮದಲ್ಲಿ ವಿವರಿಸಿ ನಮ್ಮ ದೇವರು ಅದೆಷ್ಟು ಅದ್ಭುತ ಎನ್ನುವದನ್ನು ಮನಗಾಣಿಸುತ್ತಾರೆ. ಜೀವಚೈತನ್ಯವನ್ನು ಅನಂದದಲ್ಲಿ ಮುಳುಗಿಸುವ ಈ ಪವಿತ್ರ ತತ್ವಗಳ ಅರ್ಥಾನುಸಂಧಾನ ಇಲ್ಲಿದೆ. ದೇವರ ಜ್ಞಾನ ವಸ್ತು ಸಾಪೇಕ್ಷವಲ್ಲ, ದೇವರಿಗೆ ಸಮರೂ ಇಲ್ಲ ಅಧಿಕರೂ ಇಲ್ಲ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — ಪ್ರಥಮಸ್ಕಂಧ ದ್ವಿತೀಯಾಧ್ಯಾಯ वदन्ति तत्तत्त्वविदस्तत्त्वं यज्ज्ञानमद्वयम् । ब्रह्मेति परमात्मेति भगवानिति शब्द्यते ॥ ११ ॥ सत्तामात्रं तु यत्किञ्चित् सदसच्चाविशेषणम्। उभाभ्यां भाष्यते साक्षाद् भगवान् केवलः स्मृतः ॥ १२ ॥ ಶ್ರೀಮದ್ ಭಾಗವತತಾತ್ಪರ್ಯ — अद्वयं असमाधिकम्। तथाच भाल्लवेयश्रुतिः — “स पुरुषः सोऽद्वय इति नह्येनमभि कश्चन नह्येनमति कश्चन” इति “सोऽद्वयः पुरुषस्तस्मान्न समो नाधिको ह्यतः” इति महासंहितायाम्। तत्त्वशब्दार्थस्तत्रैवोक्तः — “अतीतानागते काले यत् तादृशमुदीर्यते। कुतश्चिदन्यथा नेयात् तत् तत्त्वं तत्त्वतो विदुः” इति ॥ सत्तामात्रमानन्दमात्रम्। तथाच पैङ्गिश्रुतिः — “अथ कस्मादुच्यते सत्तेति। नन्दति नन्दयति चेति” इति। न कार्यकारणविषयविशेषितवैषयिकज्ञानम्। केवलमेव तज्ज्ञानम्। स्रष्टृत्वादिभिः कार्यकारणविशेषितं च। तन्त्रभागवते च — “विषयापेक्षि न ज्ञानं विषयैश्च विशेषितम्। यत् तदानन्दमात्रं च तद् ब्रह्मेत्यवधार्यताम्” इति। यत्किञ्चिदलोकसिद्धम् ॥
Play Time: 51:19
Size: 7.60 MB