05/12/2017
ದೇವರಿಗೆ ಸ್ವರೂಪಭೂತವಾದ ಶರೀರವಿರುವಂತೆ, ಸಮಗ್ರ ಜೀವರಾಶಿಗಳನ್ನು, ಮತ್ತು ಸಮಗ್ರ ಅಚೇತನವಸ್ತುಗಳನ್ನೂ ಸಹ ದೇವರ ಶರೀರ ಎಂದು ಶಾಸ್ತ್ರಗಳು ತಿಳಿಸುತ್ತಾವೆ. ಅದಕ್ಕೆ ಕಾರಣ ಮತ್ತು ಅದರ ಕುರಿತ ಪ್ರಶ್ನೆಗಳಿಗೆ ಉತ್ತರ ಈ ಉಪನ್ಯಾಸದಲ್ಲಿದೆ. ದೇವರು, ಜೀವರು, ಜಗತ್ತು ಎಂಬ ಮೂರು ಪದಾರ್ಥಗಳು ಜಗತ್ತಿನಲ್ಲಿವೆ. ಇದರಲ್ಲಿ ಭಗವಂತ ಯಾವ ರೂಪದಲ್ಲಿದ್ದಾನೆಯೋ ಅದು ಅವನ ಶರೀರ. ಸ್ವರೂಪಭೂತವಾದ ಶರೀರ. ದೇವರಿಗೂ ದೇವರ ಶರೀರಕ್ಕೂ ಭೇದವಿಲ್ಲ ಎನ್ನುವದನ್ನು ಹಿಂದೆಯೇ ತಿಳಿದೆವು. ಜೀವರು ಪ್ರತಿಬಿಂಬಶರೀರರು. ಅಚೇತನಗಳು ಪ್ರತಿಮಾಶರೀರಗಳು. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — ಏತದ್ ರೂಪಂ ಭಗವತೋ ಹ್ಯರೂಪಸ್ಯ ಚಿದಾತ್ಮನಃ। ಮಾಯಾಗುಣೈರ್ವಿರಚಿತಂ ಮಹದಾದಿಭಿರಾತ್ಮನಿ ॥30॥ ಯಥಾ ನಭಸಿ ಮೇಘೌಘಾ ರೇಣುರ್ವಾ ಪಾರ್ಥಿವೋಽನಿಲೇ। ಏವಂ ದ್ರಷ್ಟರಿ ದೃಶ್ಯತ್ವಮಾರೋಪಿತಮಬುದ್ಧಿಭಿಃ ॥31॥ ಭಾಗವತಾತ್ಪರ್ಯ — ಏತದ್ ಜಡರೂಪಮ್। “ನಾರಾಯಣವರಾಹಾದ್ಯಾಃ ಪರಮಂ ರೂಪಮೀಶಿತುಃ। ಜೈವಂ ತು ಪ್ರತಿಬಿಂಬಾಖ್ಯಂ ಜಡಮಾರೋಪಿತಂ ಹರೇಃ। ಏವಂ ಹಿ ತ್ರಿವಿಧಂ ತಸ್ಯ ರೂಪಂ ವಿಷ್ಣೋರ್ಮಹಾತ್ಮನಃ” ಇತಿ ಪಾದ್ಮೇ ॥30॥ ದೃಶ್ಯತ್ವಂ ಜಡರೂಪತ್ವಮ್। “ಅವಿಜ್ಞಾಯ ಪರಂ ದೇಹಮಾನಂದಾತ್ಮಾನಮವ್ಯಯಮ್। ಆರೋಪಯಂತಿ ಜನಿಮತ್ ಪಂಚಭೂತಾತ್ಮಕಂ ಜಡಮ್” ಇತಿ ಸ್ಕಾಂದೇ ॥31॥
Play Time: 32:11
Size: 7.60 MB