31/12/2017
ಅತ್ಯಂತ ಗಹನವಾದ ಶಾಸ್ತ್ರೀಯ ತತ್ವವನ್ನು ಅತ್ಯಂತ ಸರಳ ಮತ್ತು ಸುಲಭವಾಗಿ ಹೇಳಬಲ್ಲ ಶ್ರೇಷ್ಠ ದೇವತೆಗಳು ನಮ್ಮ ನಾರದರು. ಮೋಕ್ಷಸಾಧನವಾದ ಕರ್ಮ ಎಂದರೆ ಅದೇನೋ ವಿಶಿಷ್ಟವಾದ ಕರ್ಮ ಎಂದು ತಿಳಿದಿರುವ ಸಾಮಾನ್ಯ ಜನರಿಗೆ, ಶಾಸ್ತ್ರಪ್ರಪಂಚದ ಅತಿ ಗಹನ ಕರ್ಮತತ್ವವನ್ನು ಅತ್ಯಂತ ಸರಳವಾಗಿ, ಅದ್ಭುತವಾದ ದೃಷ್ಟಾಂತದೊಂದಿಗೆ ನಾರದರು ಮನವರಿಗೆ ಮಾಡಿಸುತ್ತಾರೆ. ಅವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ. ಅಪರೋಕ್ಷಜ್ಞಾನಸಾಧನವಾದ ಕರ್ಮಕ್ಕೆ ಫಲ ದೊರೆಯುವದು ಪವಿತ್ರವಾದ ಭರತಭೂಮಂಡಲದಲ್ಲಿ ಮಾತ್ರ ಎಂಬ ಪ್ರಮೇಯದ ವಿವರಣೆಯೂ ಸಹ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಏತತ್ ಸಂಸೂಚಿತಂ ಬ್ರಹ್ಮನ್ ತಾಪತ್ರಯಚಿಕಿತ್ಸಿತಮ್ । ಯದೀಶ್ವರೇ ಭಗವತಿ ಕರ್ಮ ಬ್ರಹ್ಮಣಿ ಭಾವಿತಮ್ ॥ ೩೨ ॥ ಆಮಯೋಽಯಂ ಚ ಭೂತಾನಾಂ ಜಾಯತೇ ಯೇನ ಸುವ್ರತ । ತದೇವ ಹ್ಯಾಮಯದ್ರವ್ಯಂ ತತ್ ಪುನಾತಿ ಚಿಕಿತ್ಸಿತಮ್ ॥ ೩೩ ॥ ಏವಂ ನೃಣಾಂ ಕ್ರಿಯಾಯೋಗಾಃ ಸರ್ವೇ ಸಂಸೃತಿಹೇತವಃ । ತ ಏವಾಽತ್ಮವಿನಾಶಾಯ ಕಲ್ಪಂತೇ ಕಲ್ಪಿತಾಃ ಪರೇ ॥ ೩೪ ॥ ಯದತ್ರ ಕ್ರಿಯತೇ ಕರ್ಮ ಭಗವತ್ಪರಿತೋಷಣಮ್ । ಜ್ಞಾನಂ ಯತ್ ತದಧೀನಂ ಹಿ ಭಕ್ತಿಯೋಗಸಮನ್ವಿತಮ್ ॥ ೩೫ ॥ ಕುರ್ವಾಣಾ ಯತ್ರ ಕರ್ಮಾಣಿ ಭಗವಚ್ಛಿಕ್ಷಯಾಽಸಕೃತ್ । ಗೃಣಂತಿ ಗುಣನಾಮಾನಿ ಕೃಷ್ಣಸ್ಯಾನುಸ್ಮರಂತಿ ಚ ॥ ೩೬ ॥ ಓಂ ನಮೋ ಭಗವತೇ ತುಭ್ಯಂ ವಾಸುದೇವಾಯ ಧೀಮಹಿ । ಪ್ರದ್ಯುಮ್ನಾಯಾನಿರುದ್ಧಾಯ ನಮಃ ಸಂಕರ್ಷಣಾಯ ಚ ॥ ೩೭ ॥ ಇತಿ ಮೂರ್ತ್ಯಭಿಧಾನೇನ ಮಂತ್ರಮೂರ್ತಿಮಮೂರ್ತಿಕಮ್ । ಯಜತೇ ಯಜ್ಞಪುರುಷಂ ಸ ಸಮ್ಯಗ್ದರ್ಶನಃ ಪುಮಾನ್ ॥ ೩೮ ॥ ಇಮಂ ಸ್ವಧರ್ಮನಿಯಮಮವೇತ್ಯ ಮದನುಷ್ಠಿತಮ್ । ಅದಾನ್ಮೇ ಜ್ಞಾನಮೈಶ್ವರಂ ಸ್ವಸ್ಮಿನ್ ಭಾವಂ ಚ ಕೇಶವಃ ॥ ೩೯ ॥ ತ್ವಮಪ್ಯದಭ್ರಶ್ರುತ ವಿಶ್ರುತಂ ವಿಭೋಃ ಸಮಾಪ್ಯತೇ ಯೇನ ವಿದಾಂ ಬುಭುತ್ಸಿತಮ್ । ಪ್ರಖ್ಯಾಹಿ ದುಃಖೈರ್ಮುಹುರರ್ದಿತಾತ್ಮನಾಂ ಸಂಕ್ಲೇಶನಿರ್ವಾಣಮುಶನ್ತಿ ನಾನ್ಯಥಾ ॥ ೩೨ ॥ ತ್ವಮೀಶ್ವರೋಪಿ ।। ೪೦ ।। ಇತಿ ಶ್ರೀಮದ್ಭಾಗವತೇ ಪ್ರಥಮಸ್ಕಂಧೇ ಪಂಚಮೋಽಧ್ಯಾಯಃ ॥
Play Time: 35:04
Size: 7.60 MB