03/01/2018
ದೇವರ ಸಾಕ್ಷಾತ್ಕಾರ ಪಡೆದ ನಾರದರು ಮಾಡಿದ ಅದ್ಭುತವಾದ ಸಾಧನೆ, ನಾರದರ ಪೂರ್ವಜನ್ಮದ ಸಾವಿನ ಕ್ರಮ, ನಾರದರಾಗಿ ಹುಟ್ಟಿಬಂದದ್ದು, ನಾರದರ ಮೇಲೆ ದೇವರು ಮಾಡುವ ಅನುಗ್ರಹ, ನಾರದರು ಮಾಡುವ ಮಾತಿನ ಮಹತ್ತರ ಸೇವೆ, ನಾರದರು ತಿಳಿಸಿದ ಸಂಸಾರವನ್ನು ದಾಟುವ ಪರಮೋಪಾಯ, ಯೋಗ ಮಾರ್ಗ ಶ್ರೇಷ್ಠವೋ, ಭಕ್ತಿಮಾರ್ಗ ಶ್ರೇಷ್ಠವೋ ಎಂಬ ಪ್ರಶ್ನೆಗೆ ನಾರದರು ನೀಡಿದ ಉತ್ತರ, ನಾರದ ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾಂದಗಳವರು ತಿಳಿಸಿದ ಅರ್ಥ, ವೇದವ್ಯಾಸದೇವರು ನೇರವಾಗಿ ಭಾಗವತವನ್ನು ರಚನೆ ಮಾಡದೆ, ಹೀಗೇಕೆ ವಿಡಂಬನೆ ಮಾಡಿದ ಎಂಬ ಪ್ರಶ್ನೆಗೆ ಉತ್ತರ ಮುಂತಾದ ವಿಷಯಗಳು ಈ ಉಪನ್ಯಾಸದಲ್ಲಿವೆ. ಈ ಪ್ರವಚನಕ್ಕೆ ಪ್ರಥಮಸ್ಕಂಧದ ಆರನೆಯ ಅಧ್ಯಾಯ ಮುಕ್ತಾಯವಾಗುತ್ತದೆ. ನಾಳೆಯಿಂದ ಏಳನೆಯ ಅಧ್ಯಾಯ ಆರಂಭ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು. ನಾಮಾನ್ಯನನ್ತಸ್ಯ ಗತತ್ರಪಃ ಪಠನ್ ಗುಹ್ಯಾನಿ ಭದ್ರಾಣಿ ಕೃತಾನಿ ಚ ಸ್ಮರನ್ । ಗಾಂ ಪರ್ಯಟಂಸ್ತುಷ್ಟಮನಾ ಗತಸ್ಪೃಹಃ ಕಾಲಂ ಪ್ರತೀಕ್ಷನ್ನಪಟೋ ವಿಮತ್ಸರಃ ।। ೩೦ ।। ಏವಂ ಕೃಷ್ಣಮತೇರ್ಬ್ರಹ್ಮನ್ನಸಕ್ತಸ್ಯಾಮಲಾತ್ಮನಃ । ಕಾಲಃ ಪ್ರಾದುರಭೂತ್ ಕಾಲೇ ತಡಿತ್ ಸೌದಾಮನೀ ಯಥಾ ।। ೩೧ ।। ಏವಂ ಮಯಿ ಪ್ರಯುಞ್ಜಾನೇ ಶುದ್ಧಾಂ ಭಾಗವತೀಂ ತನುಮ್ । ಪ್ರಾರಬ್ಧಕರ್ಮನಿರ್ವಾಣೋ ನ್ಯಪತತ್ ಪಾಞ್ಚಭೌತಿಕಃ ।। ೩೨ ।। ಕಲ್ಪಾನ್ತ ಇದಮಾದಾಯ ಶಯಾನೇಽಮ್ಭಸ್ಯುದನ್ವತಃ । ಶಿಶಯಿಷ್ಣೋರನುಪ್ರಾಣಂ ವಿವೇಶಾನ್ತರಹಂ ವಿಭೋಃ ।। ೩೩ ।। ಸಹಸ್ರಯುಗಪರ್ಯನ್ತ ಉತ್ಥಾಯೇದಂ ಸಿಸೃಕ್ಷತಃ । ಮರೀಚಿಮಿಶ್ರಾ ಋಷಯಃ ಪ್ರಾಣೇಭ್ಯೋಽಹಂ ಚ ಜಜ್ಞಿರೇ ।। ೩೪ ।। ಅನ್ತರ್ಬಹಿಶ್ಚ ಲೋಕಾಂಸ್ತ್ರೀನ್ ಪರ್ಯೇಮ್ಯಸ್ಕನ್ದಿತವ್ರತಃ । ಅನುಗ್ರಹಾನ್ಮಹಾವಿಷ್ಣೋರವಿಘಾತಗತಿಃ ಕ್ವಚಿತ್ ।। ೩೫ ।। ದೇವದತ್ತಾಮಿಮಾಂ ವೀಣಾಂ ಸ್ವರಬ್ರಹ್ಮವಿಭೂಷಿತಾಮ್ । ಮೂರ್ಚ್ಛಯಿತ್ವಾ ಹರಿಕಥಾಂ ಗಾಯಮಾನಶ್ಚರಾಮ್ಯಹಮ್ ।। ೩೬ ।। ಪ್ರಗಾಯತಶ್ಚ ವೀರ್ಯಾಣಿ ತೀರ್ಥಪಾದಃ ಪ್ರಿಯಶ್ರವಾಃ । ಆಹೂತ ಇವ ಮೇ ಶೀಘ್ರಂ ದರ್ಶನಂ ಯಾತಿ ಚೇತಸಿ ।। ೩೭ ।। ಏತದಾತುರಚಿತ್ತಾನಾಂ ಮಾತ್ರಾಸ್ಪರ್ಶೇಚ್ಛಯಾ ಮುಹುಃ । ಭವಸಿನ್ಧುಪ್ಲವೋ ದೃಷ್ಟೋ ಹರಿಚರ್ಯಾನುವರ್ಣನಮ್ ।। ೩೮ ।। ಯಮಾದಿಭಿರ್ಯೋಗಪಥೈಃ ಕಾಮಲೋಭಹತೋ ಮುಹುಃ । ಮುಕುನ್ದಸೇವಯಾ ಯದ್ವತ್ ತಥಾಽತ್ಮಾಽದ್ಧಾ ನ ಶಾಮ್ಯತಿ ।। ೩೯ ।। ಸರ್ವಂ ತದಿದಮಾಖ್ಯಾತಂ ಯತ್ಪೃಷ್ಟೋಽಹಂ ತ್ವಯಾಽನಘ । ಜನ್ಮ ಕರ್ಮ ರಹಸ್ಯಂ ಮೇ ಭವತಶ್ಚಾಽತ್ಮತೋಷಣಮ್ ।। ೪೦ ।। ಸೂತ ಉವಾಚ — ಏವಂ ಸಮ್ಭಾಷ್ಯ ಭಗವಾನ್ ನಾರದೋ ವಾಸವೀಸುತಮ್ । ಆಮನ್ತ್ರ್ಯ ವೀಣಾಂ ರಣಯನ್ ಯಯೌ ಯಾದೃಚ್ಛಿಕೋ ಯತಿಃ ।। ೪೧ ।। ಅಹೋ ದೇವರ್ಷಿರ್ಧನ್ಯೋಽಯಂ ಯತ್ಕೀರ್ತಿಂ ಶಾರ್ಙ್ಗಧನ್ವನಃ । ಗಾಯನ್ ಮಾದ್ಯನ್ನಿದಂ ತನ್ತ್ರ್ಯಾ ರಮಯತ್ಯಾತುರಂ ಜಗತ್ ।। ೪೨ ।। ಇತಿ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಷಷ್ಠೋಽಧ್ಯಾಯಃ ।
Play Time: 37:06
Size: 6.81 MB