08/01/2018
ಪಾಂಡವರನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ ಸಾತ್ಯಕಿ ಉದ್ಧವರೊಡಗೂಡಿ ರಥದಲ್ಲಿ ಕುಳಿತು ಇನ್ನೇನು ಹೊರಡಬೇಕನ್ನಷ್ಟರಲ್ಲಿ “ಕೃಷ್ಣಾ ಕಾಪಾಡು” ಎಂದು ಹೆಣ್ಣಿನ ಧ್ವನಿಯೊಂದು ಕೇಳುತ್ತದೆ. ಗರ್ಭಿಣಿಯಾದ ಉತ್ತರೆ ರಕ್ಷಣೆಗಾಗಿ ತನ್ನ ಬಳಿಗೆ ಧಾವಿಸಿ ಬರುತ್ತಿರುವದನ್ನು ಕಂಡ ಭಗವಂತ ರಥದಿಂದ ಥಟ್ಟನೆ ಹಾರಿ ಅವರ ಬಳಿಗೆ ಬಂದು, ಭಯದಿಂದ ಥರಥರನೆ ನಡುಗುತ್ತಿದ್ದ ಉತ್ತರಾದೇವಿಯನ್ನು ಸಾಂತ್ವನಗೊಳಿಸುತ್ತಾನೆ. ಅಶ್ವತ್ಥಾಮರ ಅಸ್ತ್ರದ ಭಯದಿಂದ ಗರ್ಭವನ್ನು ರಕ್ಷಿಸುತ್ತಾನೆ. ಬ್ರಹ್ಮಶಿರೋಸ್ತ್ರದಿಂದ ಭಗವಂತ ಮಾಡಿದ ರಕ್ಷಣೆ ಅನ್ಯಾದೃಶವಾದದ್ದು. ಕಾರಣ ಬ್ರಹ್ಮಶಿರೋಸ್ತ್ರದ ಪ್ರತಿಪಾದ್ಯ ದೇವನೇ ಭಗವಂತ. ಅಂದರೆ ಬ್ರಹ್ಮಶಿರೋಸ್ತ್ರದಲ್ಲಿರುವದೂ ಭಗವಂತ, ರಕ್ಷಿಸುತ್ತಿರುವವನೂ ಭಗವಂತ. ಅತ್ಯಾಶ್ಚರ್ಯಕರವಾದ ಈ ಘಟನೆಯ ನಿರೂಪಣೆಯೊಂದಿಗೆ, ಈ ಪರೀಕ್ಷಿತನ ರಕ್ಷಣೆಯ ಆಧ್ಯಾತ್ಮಿಕ ಅರ್ಥವನ್ನು ಇಲ್ಲಿ ತಿಳಿಸಲಾಗಿದೆ. ಜೀವನೇ ಪರೀಕ್ಷಿತ. ಅವನಿಗೆ ಸಂಸಾರದ ಭಯ. ಆದರೆ ಗರ್ಭದಲ್ಲಿರುವ ಅವನು ನೇರವಾಗಿ ಹರಿಯ ಕಾಲಿಗೆರಗಲಾರ. ಅವನಿಗಾಗಿ ಎರಗುವ ತಾಯಿಯೊಬ್ಬಳು ಬೇಕು. ಈ ಜೀವನೆಂಬ ಪರೀಕ್ಷಿತನನ್ನು ಸಂಸಾರದಿಂದ ಕಾಪಾಡಲು ಹರಿಯ ಚರಣಕ್ಕೆರಗುವವ ಉತ್ತರೆ ಯಾರು ಎಂಬ ಪ್ರಶ್ನೆಗೆ ಉತ್ತರವೂ ಇಲ್ಲಿದೆ. ತಪ್ಪದೇ ಕೇಳಿ. ಅಜಾತಶತ್ರು ಎಂಬ ಶಬ್ದಕ್ಕೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅಪೂರ್ವ ಅರ್ಥ ಹಾಗೂ ಯುದ್ಧದ ನಂತರ ಘಟನೆಗಳ ಚಿತ್ರಣವೂ ಸಹ ಈ ಉಪನ್ಯಾಸದಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನಗಳು — ಅಥ ಅಷ್ಟಮೋಽಧ್ಯಾಯಃ। ಸೂತ ಉವಾಚ — ಪುತ್ರಶೋಕಾತುರಾಃ ಸರ್ವೇ ಪಾಂಡವಾಃ ಸಹ ಕೃಷ್ಣಯಾ। ಸ್ವಾನಾಂ ಮೃತಾನಾಂ ಯತ್ಕೃತ್ಯಂ ಚಕ್ರುರ್ನಿರ್ಹರಣಾದಿಕಮ್ ।। ೧ ।। ಅಥೋ ನಿಶಾಮಯಾಮಾಸ ಕೃಷ್ಣಾಯೈ ಭಗವಾನ್ ಪುರಾ। ಪತಿತಾಯಾಃ ಪಾದಮೂಲೇ ರುದಂತ್ಯಾ ಯತ್ ಪ್ರತಿಶ್ರುತಮ್ ।। ೨ ।। ಪಶ್ಯ ರಾಜ್ಞ್ಯರಿದಾರಾಂಸ್ತೇ ರುದತೋ ಮುಕ್ತಮೂರ್ಧಜಾನ್। ಆಲಿಂಗ್ಯ ಸ್ವಪತೀನ್ ಭೀಮಗದಾಭಗ್ನೋರುವಕ್ಷಸಃ ।। ೩ ।। ಅಥ ತೇ ಸಂಪರೇತಾನಾಂ ಸ್ವಾನಾಮುದಕಮಿಚ್ಛತಾಮ್। ದಾತುಂ ಸಕೃಷ್ಣಾ ಗಂಗಾಯಾಂ ಪುರಸ್ಕೃತ್ಯ ಯಯುಃ ಸ್ತ್ರಿಯಃ ।। ೪ ।। ತೇ ನಿನೀಯೋದಕಂ ಸರ್ವೇ ವಿಲಪ್ಯ ಚ ಭೃಶಂ ಪುನಃ। ಆಪ್ಲುತಾ ಹರಿಪಾದಾಬ್ಜರಜಃಪೂತಸರಿಜ್ಜಲೇ ।। ೫ ।। ತತ್ರಾsಸೀನಂ ಕುರುಪತಿಂ ಧೃತರಾಷ್ಟ್ರಂ ಸಹಾನುಜಮ್। ಗಾನ್ಧಾರೀಂ ಪುತ್ರಶೋಕಾರ್ತಾಂ ಪೃಥಾಂ ಕೃಷ್ಣಾಂ ಚ ಮಾಧವಃ ।। ೬ ।। ಸಾಂತ್ವಯಾಮಾಸ ಮುನಿಭಿರ್ಹತಪುತ್ರಾನ್ ಶುಚಾರ್ಪಿತಾನ್। ಭೂತೇಷು ಕಾಲಸ್ಯ ಗತಿಂ ದರ್ಶಯನ್ನಪ್ರತಿಕ್ರಿಯಾಮ್ ।। ೭ ।। ಘಾತಯಿತ್ವಾಽಸತೋ ರಾಜ್ಞ್ಯಾಃ ಕಚಸ್ಪರ್ಶಕ್ಷತಾಯುಷಃ ಸಾಧಯಿತ್ವಾಽಜಾತಶತ್ರೋಃ ಸ್ವಾರಾಜ್ಯಂ ಕಿತವೈರ್ಹೃತಮ್। ।। ೮ ।। ಯಾಜಯಿತ್ವಾಽಶ್ವಮೇಧೈಸ್ತಂ ತ್ರಿಭಿರುತ್ತಮಕಲ್ಪಕೈಃ। ತದ್ಯಶಃ ಪಾವನಂ ದಿಕ್ಷು ಶತಮನ್ಯೋರಿವಾತನೋತ್ ।। ೯ ।। ಆಮಂತ್ರ್ಯ ಪಾಂಡುಪುತ್ರಾಂಶ್ಚ ಶೈನೇಯೋದ್ಧವಸಂಯುತಃ। ದ್ವೈಪಾಯನಾದಿಭಿರ್ವಿಪ್ರೈಃ ಪೂಜಿತೈಃ ಪ್ರತಿಪೂಜಿತಃ ।। ೧೦ ।। ಗನ್ತುಂ ಕೃತಮತಿರ್ಬ್ರಹ್ಮನ್ ದ್ವಾರಕಾಂ ರಥಮಾಸ್ಥಿತಃ। ಉಪಲೇಭೇಽಭಿಧಾವಂತೀಮುತ್ತರಾಂ ಭಯವಿಹ್ವಲಾಮ್ ।। ೧೧ ।। ಉತ್ತರೋವಾಚ — ಪಾಹಿಪಾಹಿ ಮಹಾಯೋಗಿನ್ ದೇವದೇವ ಜಗತ್ಪತೇ। ನಾನ್ಯಂ ತ್ವದಭಯಂ ಪಶ್ಯೇ ಯತ್ರ ಮೃತ್ಯುಃ ಪರಸ್ಪರಮ್ ।। ೧೨ ।। ಅಭಿದ್ರವತಿ ಮಾಮೀಶ ಶರಸ್ತಪ್ತಾಯಸೋ ವಿಭೋ। ಕಾಮಂ ದಹತು ಮಾಂ ನಾಥ ಮಾ ಮೇ ಗರ್ಭೋ ನಿಪಾತ್ಯತಾಮ್ ।। ೧೩ ।। ಸೂತ ಉವಾಚ — ಉಪಧಾರ್ಯ ವಚಸ್ತಸ್ಯಾ ಭಗವಾನ್ ಭಕ್ತವತ್ಸಲಃ। ಅಪಾಂಡವಮಿದಂ ಕರ್ತುಂ ದ್ರೌಣೇರಸ್ತ್ರಮಬುಧ್ಯತ ।। ೧೪।। ತರ್ಹ್ಯೇವಾಥ ಮುನಿಶ್ರೇಷ್ಠ ಪಾಂಡವಾಃ ಪಂಚಸಾಯಕಾನ್। ಆತ್ಮನೋಽಭಿಮುಖಾನ್ ದೀಪ್ತಾನಾಲಕ್ಷ್ಯಾಸ್ತ್ರಾಣ್ಯುಪಾದದುಃ ।। ೧೫ ।। ವ್ಯಸನಂ ವೀಕ್ಷ್ಯ ತತ್ ತೇಷಾಮನನ್ಯವಿಷಯಾತ್ಮನಾಮ್। ಸುದರ್ಶನೇನ ಸ್ವಾಸ್ತ್ರೇಣ ಸ್ವಾನಾಂ ರಕ್ಷಾಂ ವ್ಯಧಾದ್ ವಿಭುಃ ।। ೧೬ ।। ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ। ಸ್ವಮಾಯಯಾssವೃಣೋದ್ ಗರ್ಭಂ ವೈರಾಟ್ಯಾಃ ಕುರುತನ್ತವೇ ।। ೧೭ ।। ಯದ್ಯಪ್ಯಸ್ತ್ರಂ ಬ್ರಹ್ಮಶಿರಸ್ತ್ವಮೋಘಂ ಚಾಪ್ರತಿಕ್ರಿಯಮ್। ವೈಷ್ಣವಂ ತೇಜ ಆಸಾದ್ಯ ಸಮಶಾಮ್ಯದ್ ಭೃಗೂದ್ವಹ ।। ೧೮ ।। ಮಾ ಮಂಸ್ಥಾ ಹ್ಯೇತದಾಶ್ಚರ್ಯಂ ಸರ್ವಾಶ್ಚರ್ಯಮಯೇsಚ್ಯುತೇ। ಯ ಇದಂ ಮಾಯಯಾ ದೇವ್ಯಾ ಸೃಜತ್ಯವತಿ ಹನ್ತ್ಯಜಃ ।। ೧೯ ।।
Play Time: 57:03
Size: 7.60 MB