16/01/2018
ಕುರುಕ್ಷೇತ್ರದ ಯುದ್ಧದಲ್ಲಿ ನಾನು ಆಯುಧವನ್ನು ಹಿಡಿಯುವದಿಲ್ಲ ಎಂದು ಶ್ರೀಕೃಷ್ಣ ತಿಳಿಸಿರುತ್ತಾನೆ. ಆದರೆ, ಕೃಷ್ಣನ ಕೈಯಲ್ಲಿ ಆಯುಧವನ್ನು ನಾನು ಹಿಡಿಸಿಯೇ ಹಿಡಿಸುತ್ತೇನೆ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆ ಮಾಡಿರುತ್ತಾರೆ. ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರ್ಣ ಮಾಡಲೋಸುಗ ಶ್ರೀಕೃಷ್ಣ, ಮೃದುವಾಗಿ ಯುದ್ಧ ಮಾಡುತ್ತಿದ್ದ ಅರ್ಜುನನನ್ನು ಎಚ್ಚರಿಸಲು, ಒಮ್ಮೆ ಚಕ್ರವನ್ನು ಹಿಡಿದು ಭೀಷ್ಮರನ್ನು ಕೊಲ್ಲ ಹೋಗುತ್ತಾನೆ. ಆ ಪ್ರಸಂಗವನ್ನು ನೆನೆಯುತ್ತ ಭೀಷ್ಮಾಚಾರ್ಯರು ದೇವರ ಕಾರುಣ್ಯ ಮಾಹಾತ್ಮ್ಯಗಳನ್ನ ಚಿಂತಿಸುತ್ತಾರೆ. ಮಹಾಭಾರತದ ವಚನಗಳ ಉಲ್ಲೇಖದೊಂದಿಗೆ ಆ ಪ್ರಸಂಗವನ್ನು ನಿರೂಪಿಸಿ, ದೇವರನ್ನು ಕಾಣುತ್ತಲೇ ಭೀಷ್ಮರು ದೇಹತ್ಯಾಗ ಮಾಡುವ ಸಂದರ್ಭದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ವಾಕ್ಯಗಳು — ವ್ಯವಸಿತಪೃತನಾಮುಖಂ ನಿರೀಕ್ಷ್ಯ ಸ್ವಜನವಧಾದ್ ವಿಮುಖಸ್ಯ ದೋಷಬುದ್ಧ್ಯಾ। ಕುಮತಿಮಹರದಾತ್ಮವಿದ್ಯಯಾ ಯಶ್ಚರಣರತಿಃ ಪರಮಸ್ಯ ತಸ್ಯ ಮೇಽಸ್ತು ॥ ೪೩ ॥ ಸ್ವನಿಯಮಮಪಹಾಯ ಮತ್ಪ್ರತಿಜ್ಞಾಮೃತಮಧಿಕರ್ತುಮವಪ್ಲುತೋ ರಥಸ್ಥಃ। ಧೃತರಥಚರಣೋಽಭ್ಯಯಾದ್ ಬಲಾಗ್ರೇ ಹರಿರಿವ ಹಂತುಮಿಭಂ ಗತೋತ್ತರೀಯಃ ॥ ೪೪ ॥ ಶಿತವಿಶಿಖಹತೋ ವಿಶೀರ್ಣದಂಶಃ ಕ್ಷತಜಪರಿಪ್ಲುತ ಆತತಾಯಿನೋ ಮೇ। ಪ್ರಸಭಮಭಿಸಸಾರ ಮದ್ವಧಾರ್ಥಂ ಸ ಭವತು ಮೇ ಭಗವಾನ್ ಗತಿರ್ಮುಕುಂದಃ ॥ ೪೫ ॥ ವಿಜಯರಥಕುಟುಂಬ ಆತ್ತತೋತ್ರೇ ಧೃತಹಯರಶ್ಮಿಜಿತಶ್ರಮೇಕ್ಷಣೀಯೇ। ಭಗವತಿ ರತಿರಸ್ತು ಮೇ ಮುಮೂರ್ಷೋರ್ಯಮಿಹ ನಿರೀಕ್ಷ್ಯ ಹತಾ ಗತಾಃ ಸ್ವರೂಪಮ್ ॥ ೪೬ ॥ ಲಲಿತಗತಿವಿಲಾಸವಲ್ಗುಹಾಸಪ್ರಣಯನಿರೀಕ್ಷಣಕಲ್ಪಿತೋರುಮಾನಾಃ। ಕೃತಮನುಕೃತವತ್ಯ ಉನ್ಮದಾನ್ಧಾಃ ಪ್ರಕೃತಿಮಗುಃ ಕಿಲ ಯಸ್ಯ ಗೋಪವಧ್ವಃ ॥ ೪೭ ॥ ಮುನಿಗಣನೃಪವರ್ಯಸಂಕುಲೇಽಂತಃ ಸದಸಿ ಯುಧಿಷ್ಠಿರರಾಜಸೂಯ ಏಷಾಮ್। ಅರ್ಹಣಮುಪಪೇದ ಈಕ್ಷಣೀಯೋ ಮಮ ದೃಶಿಗೋಚರ ಏಷ ಆವಿರಾತ್ಮಾ ॥ ೪೮ ॥ ತಮಿಮಮಹಮಜಂ ಶರೀರಭಾಜಾಂ ಹೃದಿಹೃದಿ ವಿಷ್ಠಿತಮಾತ್ಮಕಲ್ಪಿತಾನಾಮ್। ಪ್ರತಿದೃಶಮಿವ ನೈಕಧಾಽರ್ಕಮೇಕಂ ಸಮಧಿಗತೋಽಸ್ಮಿ ವಿಧೂತಭೇದಮೋಹಃ ॥ ೪೯ ॥ ಕ್ಷಿತಿಭರಮವರೋಪಿತಂ ಕುರೂಣಾಂ ಶ್ವಸನ ಇವಾಸೃಜಕ್ಷವಂಶವಹ್ನಿಮ್। ತಮಿಮಮಹಮಜಮನುವ್ರತಾರ್ತಿಹಾಂಘ್ರಿಂ ಹೃದಿ ಪರಿರಭ್ಯ ಜಹಾಮಿ ಮರ್ತ್ಯನೀಡಮ್ ॥ ೫೦ ॥ ಕೃಷ್ಣ ಏವಂ ಭಗವತಿ ಮನೋವಾಗ್ದೃಷ್ಟಿವೃತ್ತಿಭಿಃ। ಆತ್ಮನ್ಯಾತ್ಮಾನಮಾವೇಶ್ಯ ಸೋಽಂತಃಶ್ವಾಸ ಉಪಾರಮತ್ ॥ ೫೧ ॥ ಸಂಪದ್ಯಮಾನಮಾಜ್ಞಾಯ ಭೀಷ್ಮಂ ಬ್ರಹ್ಮಣಿ ನಿಷ್ಕಲೇ। ಸರ್ವೇ ಬಭೂವುಸ್ತೇ ತೂಷ್ಣೀಂ ವಯಾಂಸೀವ ದಿನಾತ್ಯಯೇ ॥ ೫೨ ॥ ತತ್ರ ದುಂದುಭಯೋ ನೇದುರ್ದೇವಮಾನವವಾದಿತಾಃ। ಶಶಂಸುಃ ಸಾಧವೋ ಬ್ರಹ್ಮನ್ ಖಾತ್ ಪೇತುಃ ಪುಷ್ಪವೃಷ್ಟಯಃ ॥ ೫೩ ॥ ತಸ್ಯ ನಿರ್ಹರಣಾದೀನಿ ಸಂಪರೇತಸ್ಯ ಭಾರ್ಗವ। ಯುಧಿಷ್ಠಿರಃ ಕಾರಯಿತ್ವಾ ಮುಹೂರ್ತಂ ದುಃಖಿತೋಽಭವತ್ ॥ ೫೪ ॥ ತುಷ್ಟುವುರ್ಮುನಯೋ ಹೃಷ್ಟಾಃ ಕೃಷ್ಣಂ ತದ್ಗುಹ್ಯನಾಮಭಿಃ। ತತಸ್ತೇ ಕೃಷ್ಣಹೃದಯಾಃ ಸ್ವಾಶ್ರಮಾನ್ ಪ್ರಯಯುಃ ಪುನಃ। ತತೋ ಯುಧಿಷ್ಠಿರೋ ಗತ್ವಾ ಸಕೃಷ್ಣೋ ಗಜಸಾಹ್ವಯಮ್। ಪಿತರಂ ಸಾಂತ್ವಯಾಮಾಸ ಗಾಂಧಾರೀಂ ಚ ತಪಸ್ವಿನೀಮ್ ॥ ೫೬ ॥ ಪಿತ್ರಾ ಚಾನುಮತೋ ರಾಜಾ ವಾಸುದೇವಾನುಮೋದಿತಃ। ಚಕಾರ ರಾಜ್ಯಂ ಧರ್ಮೇಣ ಪಿತೃಪೈತಾಮಹಂ ವಿಭುಃ ॥ ೫೭ ॥ ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ ಭಾಗವತೇ ನವಮೋಽಧ್ಯಾಯಃ।
Play Time: 52:53
Size: 7.60 MB